ಮದುವಣಗಿತ್ತಿಯಂತೆ ಸಿಂಗಾರಗೊಂಡ ಹಾಸನ

ಮದುವಣಗಿತ್ತಿಯಂತೆ ಸಿಂಗಾರಗೊಂಡ ಹಾಸನ
Published on


ಹಾಸನ : ಗುರುವಾರದಿಂದ ಆರಂಭವಾಗಿರುವ ಹಾಸನಾಂಬ ದರ್ಶನೋತ್ಸವಕ್ಕೆ ಅದ್ಧೂರಿ ವ್ಯವಸ್ಥೆ ಮಾಡಲಾಗಿದ್ದು, ಇಡೀ ನಗರ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ. ಹಾಸನಕ್ಕೆ ಮೈಸೂರಿನ ದಸರಾ ರಂಗು ಬಂದಿದ್ದು, ಮಿನಿ ದಸರಾ ನಡೆಯುವಂತೆ ಹಾಸನ ಸಿಂಗಾರಗೊಂಡಿದೆ.

ನಗರದ ಮುಖ್ಯ ರಸ್ತೆಗಳಲ್ಲಿ ಬಣ್ಣ, ಬಣ್ಣದ ವಿದ್ಯುತ್ ದೀಪ ಮಿನುಗುತ್ತಿದ್ದು, ಸಾರ್ವಜನಿಕರು ಸಿದ್ದತೆಯ ಸೊಬಗಿನ ದೃಶ್ಯಾವಳಿಯನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದು ಪ್ರತಿಯೊಬ್ಬರು ತಮ್ಮ ತಮ್ಮ ವಾಡ್ಸಾಪ್ ಸ್ಟೇಟಸ್‌ನಲ್ಲಿ ಹಾಕಿಕೊಳ್ಳತಿದ್ದಾರೆ ಹಾಸನದ ವೈಭವ ಮೈಸೂರು ದಸರಾ ನೆನಪಿಸುವಂತೆ ನೋಡುಗರ ಮನಸೂರೆಗೊಳ್ಳವಂತಿದ್ದು ಭಕ್ತಾಧಿಗಳ ಆಗಮಕ್ಕೆ ಸಿದ್ದವಾಗಿದೆ .

ಈ ಬಾರಿ ನಗರದ ಮಧ್ಯಭಾಗದಲ್ಲಿ ವಿಶೇಷವಾಗಿ ಅಲಂಕಾರಿಕ ರಾಜಗೋಪುರ, ಹಾಗೂ ವಿಶೇಷ ಆಕರ್ಷಣೆಯಾಗಿ ಮಂಟಪವನ್ನು ಅಳವಡಿಸಲಾಗಿದೆ. ಅಲ್ಲೆ ನಗರದಲ್ಲಿ ಮದ್ಯಭಾಗದಲ್ಲಿರುವ ಮರಗಳಿಗೆ ಕೃತಕ ವಿದ್ಯುತ್ ದೀಪಾಲಂಕಾರದ ಮರ ಮಾಡಲಾಗಿದ್ದು ಜನರನ್ನು ಆಕರ್ಷಿಸುತ್ತಿದೆ. ಎನ್.ಆರ್ ವೃತ್ತದಲ್ಲಿ ನಿರ್ಮಿಸಿರುವ ಮಂಟಪ ಆಕರ್ಷಕವಾಗಿದೆ. ಜತೆಗೆ ಭಕ್ತರು ವಿಶ್ರಾಂತಿ ಪಡೆಯಲು ವೃತ್ತದ ಒಂದು ಬದಿಯಲ್ಲಿ ಟೆಂಟ್ ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ ಡೇರಿ ವೃತ್ತದಿಂದ ಸಂತೆಪೇಟೆ ಹಾಸನಾಂಬ ದೇಗುಲ ಆವರಣ, ಸಿದ್ದೇಶದ ದೇವರ ಮುಂಭಾಗದ ಸ್ಥಳ, ಹೇಮಾವತಿ ಪ್ರತಿಮೆ ಆವರಣವನ್ನು ಸುಂದರವಾಗಿ ಕಂಗೊಳಿಸುವಂತೆ ವಿಭಿನ್ನವಾಗಿ ಅಲಂಕಾರ ಗೊಳಿಸಲಾಗಿದೆ .

ದೇವಾಲಯದ ಹೊರಾಂಗಣದಲ್ಲಿ ಅದ್ದೂರಿ ಗೋಪುರವನ್ನು ನಿರ್ಮಿಸಲಾಗಿದ್ದು ಸಾರ್ವಜನಿಕರನ್ನು ಆಕರ್ಷಿಸುತ್ತಿದ್ದು ಎಲ್ಲಾ ಬಕ್ತಾದಿಗಳು ನಿಂತು ಸಿಲ್ಫಿ ತೆಗೆದುಕೊಳ್ಳುತ್ತಿದ್ದಾರೆ . ಅಲ್ಲದೆ ಗೋಪುರದ ಮುಂಭಾಗ 2 ಕರಿಗಳನ್ನು ನಿಲ್ಲಿಸಲಾಗಿದ್ದು ಮೈಸೂರು ದಸರಾದಲ್ಲಿ ಇರುವಂತಹ ಭಾವವನ್ನು ಸೃಷ್ಠಿಸಿದೆ .

ತರಕಾರಿ ಹಣ್ಣು ಅಲಂಕಾರ :
ಕೋವಿಡ್ ನಂತರದ ಬಳಿಕ ಇದೆ ಇದೆ ಮೊದಲಬಾರಿಗೆ ಅದ್ದೂರಿ ಸಿದ್ದತೆ ಯಾಗಿದ್ದು ಪ್ರತಿಭಾರಿ ವಿವಿದ ಹೂಗಳಿಂದ ದೇವಾಲಯದ ಹೊಳಾಂಗಣದಲ್ಲಿ ಅಲಂಕಾರ ಮಾಡಲಾಗುತ್ತಿತ್ತು ಆದರೆ ಈ ಬಾರಿ ಹಾಸನಾಂಭ ದೇವಿ ದೇವಾಲಯ ಆವರಣದಲ್ಲಿ ವಿವಿಧ ಹಣ್ಣು ತರಕಾರಿಗಳಾದ ಬಾಳೆಕಾಯಿ,ಕ್ಯಾರೆಟ್, ಬದನೆ ಕಾಯಿ, ಮುಸುಕಿನ ಜೋಳ, ತೆಂಗಿನ ಕಾಯಿ, ದಪ್ಪ ಮೆಣಸಿನ ಕಾಯಿ , ಮಾವಿನ ಸೊಪ್ಪು , ಅನಾನಸ್, ಮೋಸಂಬಿ ಗಳಿಂದ ಗೋಪುರದ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ .

ಹೂವಿನ ಅಲಂಕಾರ:
ದೇಗುಲ ಆವರಣದಲ್ಲಿ ವಿಶೇಷವಾಗಿ ಹೂವಿನ ಅಲಂಕಾರ ಪ್ರತಿವರ್ಷ ಮಾಡಲಾಗುತ್ತಿದ್ದು ಹೂವುಗಳಾದ ಬಣ್ಣ ಬಣ್ಣದ ಸೇವಂತಿಗೆ, ಗುಲಾಬಿ, ಲಿಲ್ಲಿ, ಚಂಡು ಹೂಗಳಿಂದ ಅಲಂಕರಿಸಲಾಗಿದ್ದು ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳ ಗಮನ ಸೆಳೆಯುವಂತೆ ಹೂವಿನ ಅಲಂಕಾರದ ಕುಂಬದ ಕಂಬಗಳುಗಳು ಆನೆಗಳನ್ನು ನಿಲ್ಲಿಸಲಾಗಿದೆ .

ದೇವರ ಉತ್ಸವ ಒಂದು ಕಡೆಯಾದರೆ ಉತ್ಸವವನ್ನು ತಮ್ಮ ಜಿವನದ ಕಟ್ಟುಪಾಡಾಗಿ ನಡೆಸುತ್ತಿರುವ ವ್ಯಾಪಾರಸ್ಥರು ದೇವಾಲಯದ ಮುಖ್ಯ ಬೀದಿಗಳಲ್ಲಿ ವಿವಿದ ರೀತಿಯ ಆಕರ್ಷಕ ವಸ್ತುಗಳನ್ನು ಮಾರಾಟಮಾಡಲು ಸಿದ್ಧತೆ ಮಾಡಿಕೊಳ್ಳುತಿದ್ದಾರೆ . ಮಹಿಳೆಯರಿಗೆ , ಪುರುಷರಿಗೆ, ಮಕ್ಕಳಿಗೆ ಪ್ರಿಯವಾಗುವಂತಹ ಆಭರಣಗಳು, ಶೃಂಗಾರಿಕ ವಸ್ತುಗಳು, ಆಟಾ ಸಾಮಾನುಗಳು , ಚಾಟ್ಸ್, ಹಣ್ಣುಗಳು , ಗೃಹೋಪಯೋಗಿ ವಸ್ತುಗಳನ್ನು ಹೀಗೆ ಮುಂತಾದವುಗಳ ಮಾರಾಟ ಮಾಡುತ್ತಿದ್ದಾರೆ .

ಒಟ್ಟಾರೆ ಸಕಲ ಸಿದ್ದತೆಗಳು ನಡೆದಿದ್ದು ಗುರುವಾರ ಜಿಲ್ಲಾಡಳಿತದಿಂದ ದೇವಾಲಯದ ಬಾಗಿಲು ತೆರೆಯಲಾಯಿತು. ದೇವಾಲಯದ ಸುಂದರ ದೃಶ್ಯವನ್ನು ಕೆ ಗೋಪಾಲಯ್ಯ , ಶಾಸಕ ಪ್ರೀತಂ ಜೇಗೌಡ , ಜಿಲ್ಲಾಧಿಕಾರಿ ಅರ್ಚನಾ, ಎಸ್ ಪಿ ಹರಿರಾಂ ಶಂಕರ್, ನಗರಸಭೆ ಅಧ್ಯಕ್ಷ ಮೋಹನ್, ಹೂಡಾ ಅಧ್ಯಕ್ಷ ಲಲಾಟಮೂರ್ತಿ ದೇವರದರ್ಶನ ಪಡೆದು ಕಣ್ತುಂಬಿ ಕೊಂಡರು .

ಇನ್ನು ಸಿದ್ದತೆ ಕುರಿತು ಸಾರ್ವಜನಿಕರು, ವಿದ್ಯಾರ್ಥಿಗಳು ದೇವರ ದರ್ಶನ ಪಡೆಯಲು ಕಾತುರದಿಂದ ಕಾಯುತ್ತಿದ್ದು ಶುಕ್ರವಾರದಿಂದ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲ್ಲಿದ್ದಾರೆ.

‘‘ದೇವಾಲಯವನ್ನು ಪ್ರತಿ ವರ್ಷಕ್ಕಿಂತ ಈ ಬಾರಿ ಸುಂದರವಾಗಿ ಅಲಂಕಾರ ಮಾಡಲಾಗಿದ್ದು ಜನ ಮನಗಳ ಕಣ್ಣು ಸೆಳೆಯುವಂತಿದೆ ವಿಷೇಶವಾಗಿ ತರಕಾರಿ ಹಾಗೂ ಹಣ್ಣಿನ ಅಲಂಕಾರದ ಕಲೆ ಅದ್ಬುತವಾಗಿದೆ ಎಂದರು. ಇನ್ನು ದೇವಾಲಯಕ್ಕೆ ಅಂದಾಜು 5 ರಿಂದ 6 ಲಕ್ಷ ಭಕ್ತಾದಿಗಳು ಆಗಮಿಸುವ ಸಾದ್ಯತೆ ಇದ್ದು , ಆದಷ್ಟು ಮೂಲಭೂತ ವ್ಯವಸ್ಥೆ ಮಾಡಲಾಗಿದೆ. ದೆವರ ದರ್ಶನಕ್ಕೆ 13 ದಿನಗಳ ಕಾಲ ಅವಕಾಶ ಮಾಡಿಕೊಡಲಾಗಿದ್ದು, ಭಕ್ತಾದಿಗಳು ಆತುರದಿಂದ ಬರುವ ಅವಶ್ಯಕತೆ ಎಲ್ಲ ಸಮದಾನವಾಗಿ ಬರಬಹುದು.’-ಪ್ರೀತಂ ಗೌಡ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net