ಮದಿಹಾಳ ವೃತ್ತದಲ್ಲಿ ಒಂಟಿ ಕೋತಿ ಕಾಟ

29 Dwd 3A
Published on

ಧಾರವಾಡ: ನಗರದ ಮದಿಹಾಳ ಡಿಪೋ ವೃತ್ತದಲ್ಲಿ ಕೆಲವು ದಿನಗಳಿಂದ ಒಂಟಿ ಕೋತಿಯ ಹಾವಳಿ ವಿಪರೀತವಾಗಿದೆ. ಏಕಾಏಕಿ ಮನೆಗಳಿಗೆ ನುಗ್ಗುವ ಕೋತಿ, ಈವರೆಗೆ 15ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿದೆ. ಹಲವು ದಿನಗಳಿಂದ ಬೀಡು ಬಿಟ್ಟಿರುವ ಕೋತಿ, ಕಂಡಕಂಡವರ ಮೇಲೆ ದಾಳಿ ಮಾಡುತ್ತಿದೆ. ಭಯದಿಂದ ಬಡಿಗೆಗಳನ್ನು ಹಿಡಿದು ಓಡಾಡುವಂತಾಗಿದೆ. ಕೋತಿಯ ಹಾವಳಿಗೆ ಬೇಸತ್ತ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಸ್ಥಳಕ್ಕೆ ಆಗಮಿಸಿದ್ದ ಇಲಾಖೆ ಸಿಬ್ಬಂದಿ ಸಾರ್ವಜನಿಕರೊಂದಿಗೆ ಕೋತಿಯನ್ನು ಓಡಿಸಲು ಪ್ರಯತ್ನಿಸಿದರು. ಬೆದರದ ಕೋತಿ ಪುನಃ ದಾಳಿ ಮಾಡಿದ್ದರಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಸದ್ಯ ತಪ್ಪಿಸಿಕೊಂಡಿರುವ ಕೋತಿಯನ್ನು ಶೀಘ್ರವೇ ಹಿಡಿದು ಕಾಡಿಗೆ ಒಯ್ದು ಬಿಡಲಾಗುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net