ಮದವೇರಿದ ಗೂಳಿಯಿಂದ ಜನತೆ ಗಾಬರಿ

Screenshot_20220123-103554_Gallery
Published on

ಕೆಂಭಾವಿ: ದೇವರಿಗೆ ಬಿಟ್ಟ ಗೂಳಿಯೊಂದು ಪುಂಡಾಟ ನಡೆಸಿ ಕೊನೆಗೂ ಕೈಗೆ ಸಿಗದೆ ಪರಾರಿಯಾದ ಘಟನೆ ಪಟ್ಟಣದಲ್ಲಿ ಭಾನುವಾರ ನಡೆಯಿತು.

ದೇವಸ್ಥಾನವೊಂದಕ್ಕೆ ಬಿಟ್ಟಿದ್ದಾರೆನ್ನಲಾದ ಗೂಳಿ ಆರು ದಿನಗಳಿಂದ ಹಲವು ಪ್ರದೇಶಗಳಲ್ಲಿ ದನ-ಕರು ಮತ್ತು ಎತ್ತುಗಳಿಗೆ ತನ್ನ ಕೊಂಬಿನಿಂದ ಹಲ್ಲೆ ನಡೆಸಿ ಗಾಯಗೊಳಿಸುತ್ತಿದೆ. ಗೂಳಿಯ ಅಟ್ಟಹಾಸಕ್ಕೆ ಬೇಸತ್ತ ರೈತರು ಭಾನುವಾರ ರೈತರ ಸಹಕಾರದಿಂದ ಗೂಳಿ ಹಿಡಿಯುವಲ್ಲಿ ಹರಸಾಹಸ ಪಟ್ಟರು.

ಸುಮಾರು ನೂರಕ್ಕು ಹೆಚ್ಚು ಜನರು ಒಟ್ಟುಗೂಡಿ ಮದವೇರಿದ ಗೂಳಿ ಹಿಡಿಯಲು ಹಗ್ಗದೊಂದಿಗೆ ಬೆನ್ನಟ್ಟಿ ಕೊನೆಗೆ ಉತ್ತರಾದಿ ಮಠ ಬೀದಿಯಲ್ಲಿ ಗೂಳಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಆದರೆ ಕೆಲ ಹೊತ್ತು ಜನರೊಂದಿಗೆ ಸೆಣೆಸಾಟ ನಡೆಸಿ ಕೆಲವರನ್ನು ಗಾಯಗೊಳಿಸಿ ತಪ್ಪಿಸಿಕೊಂಡು ಹೋಗಲು ಹೋಗಿದೆ. ಇದರಿಂದ ಗ್ರಾಮಸ್ಥರಲ್ಲಿ ಮತ್ತೆ ಭಯ ಉಂಟಾಗಿದ್ದು, ದನ-ಕರುಗಳ ಮೇಲೆ ದಾಳಿ ಮಾಡುವ ಸಂಭವ ಹೆಚ್ಚಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net