

ಚಾಮರಾಜನಗರ: ನಗರದ ಶಂಕನಪುರದ ಋಗ್ವೇದಿ ಕುಟೀರದಲ್ಲಿ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ವೀರಹುತಾತ್ಮ ಮದನ್ ಲಾಲ್ ಧಿಂಗ್ರಾಅವರ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ಮದನ್ ಲಾಲ್ ಧಿಂಗ್ರಾ ಕೇವಲ 18ನೇ ವರ್ಷದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಗಲ್ಲು ಶಿಕ್ಷೆಗೆ ಒಳಪಟ್ಟ ಅಪ್ರತಿಮ ವೀರ. ಅತ್ಯಂತ ಶ್ರೀಮಂತ ಮನೆತನದಲ್ಲಿ ಬೆಳೆದ ಮದನ್‌ಲಾಲ್ ಇಂಗ್ಲೆಂಡಿನಲ್ಲಿ ವೀರ ಸಾವರ್ಕರ್ ಅವರ ಪ್ರಭಾವಕ್ಕೆ ಒಳಗಾಗಿ ದೇಶನಿಷ್ಠೆ ,ರಾಷ್ಟ್ರಭಕ್ತಿ ಹಾಗೂ ಬ್ರಿಟಿಷರ ವಿರುದ್ಧ ಹೋರಾಟವನ್ನು ನಡೆಸಿದ ಮಹಾನ್ ಕ್ರಾಂತಿಕಾರಿ ಎಂದರು. ಶ್ರೀರಂಗಪಟ್ಟಣದ ಬೆಳವಾಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದಿನೇಶ್ ಪೂರಿಗಾಲಿ, ಇಂಜಿನಿಯರ್ ಸತೀಶ್ ಮಾತನಾಡಿದರು. ಋಗ್ವೇದಿ ಯೂತ್ ಕ್ಲಬ್ ನ ಶರಣ್ಯ, ಶ್ರಾವ್ಯ, ಅಧಿತಿ, ಸಾನಿಕ ಉಪಸ್ಥಿತರಿದ್ದರು.