ಮದಗದಕೆರೆ ಕೋಡಿ ಸುಭದ್ರ

12KDR1 web
Published on

ಕಡೂರು: ತಾಲೂಕಿನ ರೈತರ ಜೀವನಾಡಿ ಮದಗದಕೆರೆ ಕೋಡಿ ಬಿರುಕು ಬಿಡುತ್ತಿವೆ ಎಂಬ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಶುಕ್ರವಾರ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್​ಗಳ ತಂಡ ಕೆರೆ ಪರಿಶೀಲನೆ ನಡೆಸಿದರು. ಮಲೆನಾಡು ಭಾಗದ ಗಿರಿಶ್ರೇಣಿಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕೆರೆಗೆ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಕೆರೆ ಕೋಡಿ ಬೀಳುವಲ್ಲಿದ್ದ ಮರ ಬುಡಮೇಲಾದ ಪರಿಣಾಮ ಕೆರೆಯ ಹಿನ್ನೀರಿನ ಸೆಳೆತದಿಂದ ಭಾಗಶಃ ಕೆರೆ ದಂಡೆಯ ಮಣ್ಣು ಕುಸಿದಿದ್ದು, ತೇವಾಂಶದಿಂದ ಮಣ್ಣಿನ ಸವಕಳಿ ಉಂಟಾಗಿದ್ದರಿಂದ ನೀರು ರಭಸವಾಗಿ ಹರಿಯುತ್ತಿದೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.

ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಸಿ.ಮಂಜುನಾಥ್ ವಿಜಯವಾಣಿ ಜತೆ ಮಾತನಾಡಿ, ಕೆರೆ ಕೋಡಿ ಬೀಳುವ ಜಾಗದಲ್ಲಿ ಬಿರುಕು ಬಿಟ್ಟಿಲ್ಲ. ನೀರಿನ ರಭಸ ಹೆಚ್ಚಾಗಿ ಕೆರೆ ದಂಡೆ ಅಂಚಿನ ಪ್ರದೇಶದ ಹಳೇ ಮರ ಬಿದ್ದ ಪರಿಣಾಮ ಕೆರೆ ಹಿನ್ನೀರಿನ ಭಾಗದ ಮಣ್ಣಿನ ಸವಕಳಿ ಉಂಟಾಗಿ ಮಣ್ಣು ಕುಸಿದಿದೆ ಎಂದರು. ಕೆರೆಯ ಕೋಡಿ ವಿಚಾರದಲ್ಲಿ ಯಾವುದೇ ಅಪಾಯವಿಲ್ಲ. ಮದಗದಕೆರೆ ಭದ್ರವಾಗಿದೆ. ಪೂರ್ಣ ಮಾಹಿತಿ ಇಲ್ಲದೆ ವಿಡಿಯೋ ವೈರಲ್ ಮಾಡಲಾಗಿದೆ. ನೀರಿನ ಹರಿವಿನ ಪ್ರಮಾಣ ತಗ್ಗಿದ ನಂತರ ಕೆರೆ ಕೋಡಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು. ಕೆರೆ ದಂಡೆ ಕಡೆ ಪ್ರವಾಸಿಗರು ಬಾರದಂತೆ ಬ್ಯಾರಿಕೇಡ್​ಗಳನ್ನು ಹಾಕಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net