

ಚಿತ್ರದುರ್ಗ: ದಸರಾ ಹಬ್ಬ, ಮದಕರಿನಾಯಕ ಜಯಂತಿ ಅಂಗವಾಗಿ ಜಿಲ್ಲಾ ವಕೀಲರ ಸಂಘ, ವಕೀಲರ ಸಾಂಸ್ಕೃತಿಕ ಬಳಗದಿಂದ ಅ. 13ರಂದು ಸಂಜೆ 7ಕ್ಕೆ ರಾಜವೀರ ಮದಕರಿನಾಯಕ ಐತಿಹಾಸಿಕ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ನಾಟಕದ ನಿರ್ದೇಶಕ ಎಸ್. ವಿಜಯಕುಮಾರ್ ಹೇಳಿದರು.
ವಕೀಲರ ಭವನದಲ್ಲಿ ಭಾನುವಾರ ನಾಟಕದ ಅಂತಿಮ ತಾಲೀಮು ನಡೆದ ನಂತರ ಮಾತನಾಡಿ, ಸಾವಿರಾರು ಮಂದಿ ವೀಕ್ಷಿಸಲಿದ್ದಾರೆ ಎಂದರು.
ಸಾಂಸ್ಕೃತಿಕ ಬಳಗದ ವ್ಯವಸ್ಥಾಪಕ ಪಿ.ಆರ್. ವೀರೇಶ್ ಮಾತನಾಡಿ, ರಾಜ್ಯದ ವಿವಿಧೆಡೆ ಹಲವು ಕ್ರೀಡೆ, ಗಾಯನ, ನೃತ್ಯ, ಜಾನಪದ ಸಮೂಹ ಗೀತೆ ಸೇರಿ ಸಾಂಸ್ಕೃತಿಕ ಚಟುವಟಿಕೆ ಪ್ರದರ್ಶಿಸಿ ರಾಜ್ಯ ಪ್ರಶಸ್ತಿ ಪಡೆಯಲಾಗಿದೆ. ದುರ್ಗದ ವಕೀಲರು ರಂಗಭೂಮಿ ಕಲಾವಿದರಾಗಿಯೂ ಹೊರಹೊಮ್ಮುತ್ತಿದ್ದಾರೆ ಎಂದರು.
ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್ ಅಗತ್ಯ ಪ್ರೋತ್ಸಾಹ ನೀಡಿದ್ದಾರೆ. ಸಂಗೀತ ಶಿಕ್ಷಕ ಜಿ.ಮೂಗಬಸಪ್ಪ, ತರಬೇತುದಾರ ಎಂ.ಎಚ್.ಮರಿಸ್ವಾಮಿ ನೇತೃತ್ವ, ತುಮಕೂರಿನ ಶ್ರೀಲತಾ ಹೈಡ್ರಾಲಿಕ್ ಆಟೋಮೆಟಿಕ್ ಎಲ್‌ಇಡಿ ಡ್ರಾಮ ಸೀನರಿಯಲ್ಲಿ ಡಿಟಿಎಸ್ ಧ್ವನಿವರ್ಧಕದೊಂದಿಗೆ ನಾಟಕ ಪ್ರದರ್ಶನವಾಗಲಿದೆ ಎಂದು ವಿವರಿಸಿದರು.
ಪಾತ್ರವರ್ಗ: ರಾಜವೀರ ಮದಕರಿನಾಯಕ-ಎಸ್.ವಿದ್ಯಾಧರ, ದೊಡ್ಡ ಮದಕರಿನಾಯಕ-ಎನ್.ಶರಣಪ್ಪ, ಶಾಂತವೀರ ಮುರುಘಿ ಸ್ವಾಮೀಜಿ-ಜಿ.ಸಿ.ದಯಾನಂದ, ಸಿದ್ದಪುರುಷ-ಟಿ.ಶಿವಾರಾಧ್ಯ, ಪರಶುರಾಮ ನಾಯಕ-ಎಂ.ಮೂರ್ತಿ, ಭರಮಣ್ಣ ನಾಯಕ-ಟಿ.ಬೋಸಯ್ಯ, ಹೈದರಾಲಿ ಖಾನ್-ಶಿವುಯಾದವ್, ಕೃಷ್ಣಪ್ಪ ನಾಯಕ-ಎಂ.ಕೆ.ಲೋಕೇಶ್, ನಿಡುಗಲ್ ದೊರೆ ಕಾಮರಾಜ-ಟಿ.ರವಿ ಸಿದ್ದಾರ್ಥ, ಸೋಮಶೇಖರ್ ನಾಯಕ-ಸೋಮಶೇಖರ್ ರೆಡ್ಡಿ, ದಿವಾನ್ ಪೂರ್ಣಯ್ಯ-ಮಾಲತೇಶ್ ಅರಸ್, ಲಾವಣಿ ಲಿಂಗಯ್ಯ-ಡಾ.ಎಂ.ಸಿ.ನರಹರಿ, ಶಕುನಿ ಶಂಕರಯ್ಯ-ಜೆ.ಕಿರಣ್ ಜೈನ್, ಧನಸಿಂಗ್-ಕೆ.ಚಂದ್ರಶೇಖರಪ್ಪ, ರಾಜಮಾತೆ ಓಬವ್ವ ನಾಗತಿ-ಲಕ್ಷ್ಮೀ ಶ್ರೀಧರ್, ಪದ್ಮಾಂಬಿಕೆ-ಚಂದನಾ ಇವರೆಲ್ಲ ಪಾತ್ರ ನಿರ್ವಹಿಸಲಿದ್ದಾರೆ. ನೃತ್ಯ ಕಲಾವಿದ-ಮೌನೇಶ್ ಬಡಿಗೇರ, ಕ್ಯಾಷಿಯೋ-ಪ್ರವೀಣ್, ತಬಲ-ಸಾಗರ್, ರಿದಂ-ಬದ್ರಿ ನುಡಿಸಲಿದ್ದಾರೆ.