ಮತ್ತೊಮ್ಮೆ ಬೊಮ್ಮಾಯಿ ಗೆಲುವು ನಿಶ್ಚಿತ; ಜೆ.ಪಿ.ನಡ್ಡಾ

IMG_20230419_131710
Published on

ಶಿಗ್ಗಾಂವಿ (ಹಾವೇರಿ): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಾತನಾಡಿ, ಬೊಮ್ಮಾಯಿ‌ ಅವರು ನಾಮಪತ್ರ ಸಲ್ಲಿಕೆಗಾಗಿ ಹೊರಟಿದ್ದಾರೆ. ಈ ನಾಮಪತ್ರ ಕೇವಲ ಶಾಸಕ ಸ್ಥಾನಕ್ಕಾಗಿ ಅಲ್ಲ. ಈ ರಾಜ್ಯವನ್ನು ಹೊಸ‌ ದಿಕ್ಕಿಗೆ ಒಯ್ಯುವ ಕಾರ್ಯ ಆಗಲಿದೆ ಎಂದರು.

ಸುದೀಪ ಅವರು ಮೋದಿ ಅವರ ಕಾರ್ಯ ಮೆಚ್ಚಿದ್ದಾರೆ. ನಿಮ್ಮಲ್ಲಿರುವ ಉತ್ಸಾಹ ನೋಡಿದರೆ ಬೊಮ್ಮಾಯಿ‌ ಅವರು ಮತ್ತೊಮ್ಮೆ ವಿಧಾನಸಭೆಯಲ್ಲಿ ಘರ್ಜಿಸಲಿದ್ದಾರೆ ಎಂಬುದು ಕಾಣಿಸುತ್ತದೆ.

ರಾಜ್ಯದಲ್ಲಿ ವಿಕಾಸ ನಿರಂತರವಾಗಿ ನಡೆಯುತ್ತಿದೆ. ಕಮಲ‌ ಗೆಲ್ಲಿಸಬೇಕು ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಬೇಕು.

ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಕ್ರಿಮಿನಲ್ ಗಳ ಕೂಟ. ಕಾಂಗ್ರೆಸ್ ನವರು ಜನ ನಾಯಕರಲ್ಲ. ಅವರು ಎಟಿಎಂ ಚಲಾಯಿಸುವ ಜನ. ಇಲ್ಲಿಂದ ದೆಹಲಿಗೆ ಹಣ ಕಳುಹಿಸುವ ಸರ್ಕಾರ ಬೇಕಾ ನಿಮಗೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಅನೇಕ ೪, ೬, ೮ ಲೇನ್ ಮಾರ್ಗದ ರಸ್ತೆಗಳು ನಿರ್ಮಾಣ ವಾಗಿವೆ. ವಂದೇ ಭಾರತ ಮೈಸೂರು- ಚೆನ್ನೈ ಆರಂಭವಾಗಿದೆ. ಧಾರವಾಡ- ಬೆಂಗಳೂರು ಮಾರ್ಗ ಶುರುವಾಗಬೇಕು ಎಂದರೆ ಬಿಜೆಪಿಗೆ ಮತ ಒತ್ತಿ.

ಬಡ ಜನರಿಗೆ ಅನ್ನ ಬೇಕಾದರೆ ಬಿಜೆಪಿಗೆ ಒತ್ತಿ. ಆಯುಷ್ಮಾನ್ ಭಾರತ ಯೋಜನೆಯಿಂದ ಬಡವರಿಗೆ ಅನುಕೂಲ ಆಗಿದೆ. ಈ ಯೋಜನೆ ಮುಂದುವರಿಯಬೇಕಾದರೆ ಕಮಲಕ್ಕೆ ಒತ್ತಿ. ಎಫ್ ಡಿಐನಲ್ಲಿ ರಾಜ್ಯ ಮೊದಲ‌ ಸ್ಥಾನದಲ್ಲಿದೆ.

ಪಿಎಫ್ ಐ ಬ್ಯಾನ್ ಮಾಡಬೇಕೋ ಬೇಡವೋ. ಮಾಡಬೇಕೆಂದರೆ ಕಮಲಕ್ಕೆ ಒತ್ತಿ. ಸಿದ್ದರಾಮಯ್ಯ ಡಿಕೆಶಿ ಪಿಎಫ್ ಐ ಬೆಂಬಲಿಸುತ್ತಿದ್ದಾರೆ. ಬ್ಯಾನ್ ಹಿಂಪಡೆಯುತ್ತೇವೆ ಎನ್ನುತ್ತಿದ್ದಾರೆ. ಬೊಮ್ಮಾಯಿ‌ ಅವರ ರಾಜ್ಯದಲ್ಲಿ ಕ್ರಿಮಿನಲ್ ಚಟುವಟಿಕೆ ಬಂದ್ ಆಗಿವೆ. ಕ್ರಿಮಿನಲ್ ಗಳನ್ನು ಜೈಲಿಗೆ ಅಟ್ಟಿದ್ದಾರೆ. ರಾಜ್ಯದಲ್ಲಿ ಅಪರಾಧ ಕಡಿಮೆ ಆಗಿವೆ ಎಂದರು.

ಬೊಮ್ಮಾಯಿ‌ ಅವರು ಈಗಾಗಲೇ ಗೆದ್ದಿದ್ದಾರೆ. ಅವರನ್ನು ರಾಜ್ಯದಾದ್ಯಂತ ಓಡಾಡಲು ಬಿಡಿ ಎಂದು ನಡ್ಡಾ ಮನವಿ‌ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net