ಮತ್ತೊಬ್ಬರ ಕಣ್ಣೀರಿಗೆ ಯಾರೂ ಕಾರಣರಾಗಬಾರದು

07HDK1
ಎಚ್.ಡಿ.ಕೋಟೆಯ ಆದಿಚುಂಚನಗಿರಿ ವಿದಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ನಿರ್ಮಾಲಾನಂದನಾಥ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ, ಡಾ.ಎಸ್.ಎನ್.ರಾಮೇಗೌಡ, ಬಸವೇಗೌಡ, ಆರ್.ಶೈಲಜಾ, ರಾಜಶೇಖರ್, ವೆಂಕಟೇಶ್ ಇದ್ದರು.
Published on

ಎಚ್.ಡಿ.ಕೋಟೆ: ಮತ್ತೊಬ್ಬರ ಕಣ್ಣೀರಿಗೆ ಕಾರಣವಾಗದಂತೆ ತೊಡಗಿಸಿಕೊಂಡಾಗ ಮಾತ್ರ ದೇವನಿಗೆ ದಾಸನಾಗಲು ಸಾಧ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪದವಿ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಒಬ್ಬ ವ್ಯಕ್ತಿ ದೇವನಿಗೆ ದಾಸನಾಗದಿದ್ದರೆ ಆತ ಪಡೆದ ಪದವಿಗಳಾಗಲಿ, ವಿದ್ಯೆಯಾಗಲಿ ತೃಣಕ್ಕೆ ಸಮಾನ ಎಂದರು.

ನನ್ನನ್ನು ನಾನು ಕಂಡುಕೊಳ್ಳುವುದ ುಬದುಕಿನ ಉದ್ದೇಶ. ಇದನ್ನು ಯಾವುದೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟಿಲ್ಲ. ನಿನ್ನನ್ನು ನೀನು ಪಡೆದು ಕೊಳ್ಳಬೇಕಾದರೆ ಮೊದಲು ನಿನ್ನನ್ನು ನೀನು ಕಳೆದುಕೊಳ್ಳಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದ ಅವರು, ಶಿಕ್ಷಣ ಪ್ರಗತಿಯ ಸಂಕೇತವಾಗಿದ್ದು, ಪದವಿ ನಮ್ಮನ್ನು ಗುರುತಿಸುವುದಿಲ್ಲ. ಬದಲಾಗಿ ನಡತೆ ನಮ್ಮನ್ನು ಗುರುತಿಸುತ್ತದೆ ಎಂದು ತಿಳಿಸಿದರು.

ಪುಸ್ತಕ ಲೋಕಾರ್ಪಣೆ: ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರಚಿಸಿರುವ ಕಪಿಲೆಯ ನಾಡಿನಲ್ಲಿ ಶ್ರೀ ಗುರು ಎಂಬ ಪುಸ್ತಕವನ್ನು ಇದೇ ವೇಳೆ ಲೋಕಾರ್ಪಣೆ ಮಾಡಲಾಯಿತು. ಪುಸ್ತಕ ಕುರಿತು ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಮಾತನಾಡಿದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಆಡಳಿತಾಧಿಕಾರಿ ಪ್ರೊ.ಬಸವೇಗೌಡ, ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆರ್.ಶೈಲಜಾ, ಹಂಗಾಮಿ ಕುಲಪತಿ ಪ್ರೊ.ಎಚ್.ರಾಜಶೇಖರ್, ವಿಶ್ರಾಂತ ಕುಲಪತಿ ಡಾ.ಎನ್.ಎಸ್. ರಾಮೇಗೌಡ, ಕಾಲೇಜು ಪ್ರಾಂಶುಪಾಲ ವೆಂಕಟೇಶ್, ಮುಖಂಡರಾದ ಸುರೇಂದ್ರಗೌಡ, ಕೃಷ್ಣೇಗೌಡ, ಕಾಳೇಗೌಡ, ವೈದ್ಯನಾಥ್, ಎಂ.ಪಿ.ನಾಗರಾಜು ಇದ್ದರು.

ಮೆರವಣಿಗೆ: ಸಮಾರಂಭದ ಅಂಗವಾಗಿ ವಿದ್ಯಾರ್ಥಿಗಳಿಂದ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಗೆ ನಿರ್ಮಲಾನಂದ ನಾಥ ಸ್ವಾಮೀಜಿ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net