ಮತ್ತೊಬ್ಬ ಆರೋಪಿಯ ಬಂಧನ

Published on

ಹುಬ್ಬಳ್ಳಿ: ತಂದೆಯೇ ಮಗನ ಕೊಲೆಗೆ ಸುಪಾರಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 8ಕ್ಕೆ ಏರಿದೆ. ಬಂಧಿತರೆಲ್ಲರನ್ನು ಮಂಗಳವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಕೇಶ್ವಾಪುರ ಕುಸುಗಲ್ಲ ರಸ್ತೆ ಅರಿಹಂತನಗರದ ಕಟ್ಟಡ ಸಲಕರಣೆಗಳ ವ್ಯಾಪಾರಿ, ಮೃತ ಅಖಿಲ್ ತಂದೆ ಭರತ್ ಮಹಾಜನಶೇಠ್(ಜೈನ್), ಹಂತಕರು ಮತ್ತು ಮಧ್ಯವರ್ತಿಗಳಾದ ಮೊಹ್ಮದ್ ಹನೀಫ್, ರೆಹಮಾನ್, ಮಹಾದೇವ ನಾಲವಾಡ, ಸಲಾವುದ್ದೀನ್ ಮೌಲ್ವಿ, ಪ್ರಭಯ್ಯ, ಹನೀಫ್ ಸೇರಿ ಒಟ್ಟು 8 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 3 ಕಾರ್, 2 ಬೈಕ್, 11 ಮೊಬೈಲ್, 6.97 ಲಕ್ಷ ರೂ. ಜಪ್ತಿ ಮಾಡಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net