

ಬೆಂಗಳೂರು ಗ್ರಾಮಾಂತರ: ಲಾಕ್ಡೌನ್ ವೇಳೆ ಎಪಿಎಲ್ ಹಾಗೂ ಬಿಪಿಎಲ್ ಪಡಿತರದಾರರಿಗೆ 2 ತಿಂಗಳ ಮುಂಗಡ ಪಡಿತರ ವಿತರಣೆ ಬಳಿಕ ವಲಸೆ ಕಾರ್ಮಿಕರು ಹಾಗೂ ಬಡವರಿಗೆ ರೇಷನ್ ಕಾರ್ಡ್ ಇಲ್ಲದೆಯೂ ಪಡಿತರ ವಿತರಿಸಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈಗ ಮತ್ತೊಂದು ಸುತ್ತಿನ ಪಡಿತರ ವಿತರಣೆಗೆ ಚಾಲನೆ ನೀಡಿದೆ.
ಜೂ.11ರಿಂದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಅಕ್ಕಿ, ಗೋಧಿ ಹಾಗೂ ತೊಗರಿ ಬೇಳೆ ವಿತರಣೆಗೆ ಚಾಲನೆ ದೊರೆತಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮುಂಗಡ ಪಡಿತರ ವಿತರಣೆ ಬಳಿಕ ಮೇ 26 ರಿಂದ ಜೂ.10ರವರೆಗೆ ಲಾನುಭವಿಗಳಿಗೆ 5 ಕೆಜಿ ಅಕ್ಕಿ ವಿತರಣೆಗೆ ಚಾಲನೆ ನೀಡಿತ್ತು. ಮೇ ತಿಂಗಳಲ್ಲಿ ಪಡಿತರ ಪಡೆಯದವರು ಜೂನ್ನಲ್ಲಿ ಎರಡೂ ತಿಂಗಳೂ ಸೇರಿ 10 ಕೆಜಿ ಪಡಿತರ ಪಡೆಯಲು ಅವಕಾಶ ನೀಡಲಾಗಿತ್ತು.
ಎಪಿಎಲ್, ಬಿಪಿಎ ಕಾರ್ಡ್ ಇಲ್ಲದವರೂ ಲಾನುಭವಿಗಳಾಗಿದ್ದು, (ಬಡವರು, ವಲಸೆ ಕಾರ್ಮಿಕರು) ಜಿಲ್ಲೆಯಲ್ಲಿ 12,743 ಮಂದಿ ಪಡಿತರ ಪಡೆದಿರುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ವಿತರಣೆ: ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಅನೇಕರಿಗೆ ನಾನಾ ಕಾರಣಗಳಿಂದ ರೇಷನ್ ಕಾರ್ಡ್ ದೊರೆತಿಲ್ಲ. ಇಲಾಖೆ ಪ್ರಕ್ರಿಯೆಗಳು ಮುಗಿದು ಇನ್ನೇನು ಪಡಿತರ ಚೀಟಿಗಳು ಲಾನುಭವಿಗಳ ಕೈ ಸೇರಲಿವೆ ಎನ್ನುವಷ್ಟರಲ್ಲಿ ಲಾಕ್ಡೌನ್ ೋಷಿಸಲಾಗಿತ್ತು. ಸರ್ಕಾರದ ಯೋಜನೆ ಕೈತಪ್ಪುವ ನಿರಾಸೆಯಲ್ಲಿದ್ದ ಲಾನುಭವಿಗಳ ಸಂಕಷ್ಟ ಅರಿತ ಸರ್ಕಾರ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ವಿತರಿಸುವ ಸಂಬಂಧ ಮಾರ್ಗಸೂಚಿ ಹೊರಡಿಸಿತ್ತು.
ಜಿಲ್ಲೆಯ ಎಲ್ಲ ಪಡಿತರ ಚೀಟಿದಾರರಿಗೆ ಪಿಎಂಜಿಕೆವೈ ಹಾಗೂ ಎನ್ಎ್ಎಸ್ಎ ಯೋಜನೆಯಡಿ ಜೂ.11ರಿಂದ ಅಕ್ಕಿ, ಗೋಧಿ ಹಾಗೂ ತೊಗರಿಬೇಳೆ ವಿತರಣೆಗೆ ಚಾಲನೆ ನೀಡಲಾಗಿದೆ. ಲಾನುಭವಿಗಳು ಪ್ರಯೋಜನ ಪಡೆಯಬೇಕು. ಸುಬ್ರಹ್ಮಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಬೆಂ.ಗ್ರಾಮಾಂತರ
ನಿಯಮಗಳು ಹೀಗಿವೆ: ಮುಕ್ತ ಮಾರುಕಟ್ಟೆ ವಸ್ತುಗಳನ್ನು ಮಾರುವಂತಿಲ್ಲ ಹಾಗೂ ಕಡ್ಡಾಯ ಮಾಡುವಂತಿಲ್ಲ *ಎಎವೈ ಕಾರ್ಡ್ದಾರರಿಗೆ ನಿಗದಿತ 35ಕೆಜಿ ಅಕ್ಕಿ ಜತೆಗೆ ಹೆಚ್ಚುವರಿಯಾಗಿ ಪ್ರತಿ ಸದಸ್ಯನಿಗೆ 5 ಕೆಜಿಯಂತೆ ಅಕ್ಕಿ ಮತ್ತು 2 ಕೆಜಿ ತೊಗರಿಬೇಳೆ ಉಚಿತವಾಗಿ ವಿತರಿಸಲಾಗುವುದು. *ಬಿಪಿಎಲ್ ಪಡಿತರಚೀಟಿಗೆ ಒಬ್ಬ ಸದಸ್ಯನಿಗೆ 10 ಕೆಜಿ ಅಕ್ಕಿ, 2ಕೆಜಿ ತೊಗರಿಬೇಳೆ, 2ಕೆಜಿ ಗೋಧಿ ದೊರೆಯಲಿದೆ. *ಹೊಸದಾಗಿ ಬಿಪಿಎಲ್ಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ಅರ್ಜಿಗೆ 10 ಕೆಜಿ ಅಕ್ಕಿ ಉಚಿತ *ಎಪಿಎಲ್ ಪಡಿತರ ಚೀಟಿಗೆ ಒಬ್ಬ ಸದಸ್ಯನಿಗೆ 5ಕೆಜಿ ಒಂದಕ್ಕಿಂತ ಮೇಲ್ಪಟ್ಟು ಸದಸ್ಯರಿರುವ ಪಡಿತರ ಚೀಟಿಗೆ 15 ರೂಪಾಯಿಯಂತೆ 10 ಕೆಜಿ ಅಕ್ಕಿ ವಿತರಣೆಯಾಗಲಿದೆ. *ಹೊಸದಾಗಿ ಎಪಿಎಲ್ಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ಅರ್ಜಿಗೆ 15 ರೂಪಾಯಿಯಂತೆ 10 ಕೆಜಿ ಅಕ್ಕಿ ವಿತರಣೆ *ಅಂತರ್ ಜಿಲ್ಲಾ ಹಾಗೂ ಅಂತಾರಾಜ್ಯ ಪಡಿತರ ಚೀಟಿದಾರರಿಗೂ ಅನ್ವಯ