

ಧಾರವಾಡ: ಜಿಲ್ಲೆಯಲ್ಲಿ ಸೋಮವಾರ 56 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 611ಕ್ಕೆ ಏರಿಕೆಯಾಗಿದೆ. ಒಂದೇ ದಿನ ಅರ್ಧ ಶತಕಕ್ಕಿಂತ ಹೆಚ್ಚು ಪ್ರಕರಣ ಇದೇ ಪ್ರಥಮ ಬಾರಿಗೆ ವರದಿಯಾಗಿದೆ.
ಹೊಸದಾಗಿ ಪತ್ತೆಯಾದ ಪ್ರಕರಣದಲ್ಲಿ ಅರ್ಧಕ್ಕಿಂತ ಹೆಚ್ಚಿನವರಿಗೆ ಯಾರಿಂದ ಸೋಂಕು ಬಂದಿದೆ ಎಂಬ ಮಾಹಿತಿ ಇದ್ದರೆ, ಹಲವು ಪ್ರಕರಣಗಳು ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಇರುವಂಥವು. ಕೆಲವು ಪ್ರಕರಣದಲ್ಲಿ ಪ್ರಯಾಣ ಇತಿಹಾಸ ಪತ್ತೆಯಾಗಬೇಕಿದೆ. ಹೊರ ಜಿಲ್ಲೆಯ ಪ್ರವಾಸ ಇತಿಹಾಸ ಹೊಂದಿರುವ ಹಾಗೂ ಹೊರ ಜಿಲ್ಲೆಯಿಂದ ಬಂದಿರುವ ಪ್ರಕರಣಗಳೂ ಇವೆ.
ಈವರೆಗೆ 260 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸೋಂಕಿತರ ಮಾಹಿತಿ ಈ ಮುಂದಿನಂತಿದೆ.
ಹುಬ್ಬಳ್ಳಿ ತಾಲೂಕು: ಜು. 1ರಂದು ಸೋಂಕು ತಗುಲಿದ್ದ ಹುಬ್ಬಳ್ಳಿ ಕೇಶ್ವಾಪುರದ 40 ವರ್ಷದ ಮಹಿಳೆಯಿಂದ ಕೇಶ್ವಾಪುರದ 47 ವರ್ಷದ ಮಹಿಳೆ, ಜೂ. 29ರಂದು ಸೋಂಕು ತಗುಲಿದ ಹುಬ್ಬಳ್ಳಿ ಆನಂದ ನಗರದ 36 ವರ್ಷದ ಪುರುಷನಿಂದ ಅದೇ ಪ್ರದೇಶದ 8 ವರ್ಷದ ಬಾಲಕ, 35 ವರ್ಷದ ಮಹಿಳೆ, ಜು. 2ರಂದು ಸೋಂಕು ದೃಢಪಟ್ಟ ವಿಜಯ ನಗರ ವಡ್ಡರ ಓಣಿಯ 83 ವರ್ಷದ ವೃದ್ಧನಿಂದ ಅದೇ ಪ್ರದೇಶದ 48 ವರ್ಷದ ಮಹಿಳೆ, ಜು. 2ರಂದು ಸೋಂಕು ತಗುಲಿದ್ದ ಹುಬ್ಬಳ್ಳಿ ತಾಲೂಕು ಛಬ್ಬಿ ಗ್ರಾಮದ 20 ವರ್ಷದ ಯುವಕನಿಂದ ಅದೇ ಗ್ರಾಮದ 80 ವರ್ಷದ ವೃದ್ಧ, ಛಬ್ಬಿ ಗ್ರಾಮದ 60 ವರ್ಷದ ವೃದ್ಧೆ, ಜೂ. 27ರಂದು ಸೋಂಕು ತಗುಲಿದ್ದ 73 ವರ್ಷದ ವೃದ್ಧನಿಂದ ಛಬ್ಬಿ ಗ್ರಾಮದ 32 ವರ್ಷದ ಪುರುಷ, 35 ವರ್ಷದ ಮಹಿಳೆ, ಜೂ. 30ರಂದು ಸೋಂಕು ದೃಢಪಟ್ಟು ಮೃತಪಟ್ಟ ಹುಬ್ಬಳ್ಳಿ ಮಂಟೂರ ರಸ್ತೆಯ 69 ವರ್ಷದ ವೃದ್ಧನಿಂದ ಹುಬ್ಬಳ್ಳಿ ಜನ್ನತ್ನಗರದ 40 ವರ್ಷದ ಪುರುಷ, ಜು. 1ರಂದು ಸೋಂಕು ದೃಢಪಟ್ಟ ಕೇಶ್ವಾಪುರದ 52 ವರ್ಷದ ಮಹಿಳೆಯಿಂದ ಅದೇ ಪ್ರದೇಶದ 48 ವರ್ಷದ ಮಹಿಳೆ, 20 ವರ್ಷದ ಯವಕನಿಗೆ, ಜೂ. 28ರಂದು ಸೋಂಕು ದೃಢಪಟ್ಟ ಕೇಶ್ವಾಪುರದ 49 ವರ್ಷದ ಪುರುಷನಿಂದ ಅದೇ ಭಾಗದ 13 ವರ್ಷದ ಬಾಲಕಿಗೆ ಸೋಂಕು ಬಂದಿದೆ.
ಕೆಮ್ಮು, ನೆಗಡಿ, ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹುಬ್ಬಳ್ಳಿ ಜಯಪ್ರಕಾಶ ನಗರದ 67 ವರ್ಷದ ಪುರುಷ, ಕಟ್ನೂರಿನ 38 ವರ್ಷದ ಮಹಿಳೆ, ಅಶೋಕ ನಗರದ 54 ವರ್ಷದ ಮಹಿಳೆ, ಶಿವಾನಂದ ನಗರದ 49 ವರ್ಷದ ಪುರುಷ, ಹುಬ್ಬಳ್ಳಿ ಶ್ರೀನಗರದ 44 ವರ್ಷದ ಪುರುಷ, ಕೌಲಪೇಟೆಯ 20 ವರ್ಷದ ಯುವಕ, ಕೊಟ್ಟರಗೇರಿ ಓಣಿಯ 19 ವರ್ಷ ಯುವತಿ, ಗಣೇಶಪೇಟೆಯ 56 ವರ್ಷದ ಪುರುಷ, ಬೀರಬಂದ್ ಓಣಿಯ 53 ವರ್ಷದ ಪುರುಷ, ದೇಸಾಯಿ ಓಣಿಯ 29 ವರ್ಷದ ಯುವಕ, ಧಾರವಾಡ ಮಹಿಷಿ ಲೇಔಟ್ನ 54 ವರ್ಷದ ಮಹಿಳೆ, ಹುಬ್ಬಳ್ಳಿ ಕುಲಕರ್ಣಿ ಹಕ್ಕಲದ 32 ವರ್ಷದ ಮಹಿಳೆ, ಲೋಹಿಯಾ ನಗರದ 68 ವರ್ಷದ ವೃದ್ಧ, ಚಾಲುಕ್ಯ ನಗರದ 36 ವರ್ಷದ ಪುರುಷ, ಚಿಟಗುಪ್ಪಿ ಚಾಳದ 41 ವರ್ಷದ ಪುರುಷ, ಹಳೇಹುಬ್ಬಳ್ಳಿ ಗುರುನಾಥ ನಗರದ 52 ವರ್ಷದ ಪುರುಷ, ಸೋನಿಯಾಗಾಂಧಿ ನಗರದ 65 ವರ್ಷದ ವೃದ್ಧ, ಹುಬ್ಬಳ್ಳಿ ನಗರ ಪೊಲೀಸ್ ಠಾಣೆ ಬಳಿಯ 45 ವರ್ಷದ ಪುರುಷ, ಅಮರಗೋಳದ 26 ವರ್ಷದ ಪುರುಷ, ಗೋಪನಕೊಪ್ಪದ 27 ವರ್ಷದ ಯುವಕ, ಚೆನ್ನಪೇಟೆಯ 24 ವರ್ಷದ ಯುವಕ, ಮಿಲ್ಲತ್ ನಗರದ 48 ವರ್ಷದ ಮಹಿಳೆ, ರಾಧಾಕೃಷ್ಣ ನಗರದ 34 ವರ್ಷದ ಪುರುಷ, ಹುಬ್ಬಳ್ಳಿ ಕಿಮ್ಸ್ನ 26 ವರ್ಷದ ಯುವಕ, ಹುಬ್ಬಳ್ಳಿಯ 54 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.
ಬೆಳಗಾವಿ ಜಿಲ್ಲೆಯ ಪ್ರಯಾಣದ ಹಿನ್ನೆಲೆಯಿರುವ ಹುಬ್ಬಳ್ಳಿ ತಾಜ್ನಗರದ 43 ವರ್ಷದ ಪುರುಷನಿಗೂ ಸೋಂಕು ತಗುಲಿದೆ.
ಧಾರವಾಡ ತಾಲೂಕು: ಜು. 1ರಂದು ಸೋಂಕು ತಗುಲಿದ್ದ ಧಾರವಾಡ ಮೆಣಸಿನಕಾಯಿ ಓಣಿಯ 47 ವರ್ಷದ ಪುರುಷನಿಂದ ಅದೇ ಪ್ರದೇಶದ 32 ವರ್ಷದ ಪುರುಷ, 55 ವರ್ಷದ ಮಹಿಳೆ, 35 ವರ್ಷದ ಪುರುಷ, ಜು. 2ರಂದು ಸೋಂಕು ತಗುಲಿದ್ದ ಧಾರವಾಡ ಯು.ಬಿ. ಹಿಲ್ನ 20 ವರ್ಷದ ಯುವತಿಯಿಂದ ಅದೇ ಪ್ರದೇಶದ 80 ವರ್ಷದ ವೃದ್ಧ,
ಕೆಮ್ಮು, ನೆಗಡಿ, ಜ್ವರ, ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಧಾರವಾಡ ವಿಶಾಲನಗರದ 46 ವರ್ಷದ ಪುರುಷ, ಹುಬ್ಬಳ್ಳಿ ಗಾರ್ಡನ್ಪೇಟೆ ವೃತ್ತದ 35 ವರ್ಷದ ಪುರುಷ, ಮಕಾಂದಾರ ಗಲ್ಲಿಯ 25 ವರ್ಷದ ಯುವಕ, ಧಾರವಾಡ ತೆಲಗಾರ ಓಣಿಯ 55 ವರ್ಷದ ಮಹಿಳೆಯಲ್ಲಿ ಸೋಂಕು ಕಂಡುಬಂದಿದೆ.
ಜೂ. 28ರಂದು ಸೋಂಕು ತಗುಲಿದ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ 63 ವರ್ಷದ ವೃದ್ಧೆಯಿಂದ ಅದೇ ಪ್ರದೇಶದ 30 ವರ್ಷದ ಪುರುಷ ಹಾಗೂ 28 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.
ಕೆಮ್ಮು, ನೆಗಡಿ, ಜ್ವರ, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಕಲಘಟಗಿ ತಾಲೂಕು ಕುರುಚಿನಕೊಪ್ಪ ಗ್ರಾಮದ 39 ವರ್ಷದ ಪುರುಷ, ಬೆಂಗಳೂರು ಪ್ರಯಾಣ ಹಿನ್ನೆಲೆ ಹೊಂದಿರುವ ಕಲಘಟಗಿ ತಾಲೂಕು ಬೇಗೂರ ಗ್ರಾಮದ 28 ವರ್ಷದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಹಾನಗಲ್ ತಾಲೂಕು ಅರೇಗೊಪ್ಪದ 33 ವರ್ಷದ ಯುವಕ, ಶಿಗ್ಗಾಂವಿ ತಾಲೂಕು ನಾರಾಯಣಪುರದ 52 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
ಅಣ್ಣಿಗೇರಿ ತಾಲೂಕು ಭದ್ರಾಪುರ ಗ್ರಾಮದ 53 ವರ್ಷದ ಮಹಿಳೆ, ನವಲಗುಂದದ 43 ವರ್ಷದ ಮಹಿಳೆ, ಯಾದಗಿರಿ ಜಿಲ್ಲೆಯ 33 ವರ್ಷದ ಮಹಿಳೆ, ಹಾನಗಲ್ ತಾಲೂಕು ಬೊಮ್ಮನಹಳ್ಳಿಯ 55 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ತಾಲೂಕುವಾರು ಮಾಹಿತಿ
ಹುಬ್ಬಳ್ಳಿ-40
ಧಾರವಾಡ-6
ಕಲಘಟಗಿ-2
ನವಲಗುಂದ-1
ಅಣ್ಣಿಗೇರಿ-1
ಪಾಲಿಕೆ ಮಾಜಿ ಸದಸ್ಯ, ವೈದ್ಯಗೆ
ಹು-ಧಾ ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಯಪ್ರಕಾಶ ನಗರದ 67 ವರ್ಷದ ವ್ಯಕ್ತಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಅವರು ನೆಗಡಿ, ಜ್ವರ, ಕೆಮ್ಮಿನಿಂದ ಬಳಲುತ್ತಿದ್ದರು. ಸಾರ್ವಜನಿಕ ಕೆಲಸ ನಿಮಿತ್ತ ಅವರು ನಗರದ ವಿವಿಧೆಡೆ ಓಡಾಡಿದ್ದರು ಎಂದು ತಿಳಿದುಬಂದಿದೆ. ಕಿಮ್್ಸ ವೈದ್ಯ, ಸ್ನಾತಕೋತ್ತರ ವಿದ್ಯಾರ್ಥಿ 26 ವರ್ಷದ ಪುರುಷನಿಗೆ ಸಹ ಕರೊನಾ ತಗುಲಿದೆ. ಈ ವೈದ್ಯ ರೋಗಿಗಳ ಸೇವೆಯಲ್ಲಿ ನಿರತರಾದ ಸಂದರ್ಭದಲ್ಲೇ ವೈರಸ್ ತಗುಲಿದೆ ಎಂದು ರ್ತಸಲಾಗಿದೆ.
ಕೋಟಿಲಿಂಗೇಶ್ವರ ನಗರದಲ್ಲಿ ಆತಂಕ
ಹುಬ್ಬಳ್ಳಿ: ಹುಬ್ಬಳ್ಳಿಯ ಕೋಟಿಲಿಂಗೇಶ್ವರ ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಕರೊನಾ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದ್ದು, ನಾಗರಿಕರಲ್ಲಿ ಆತಂಕ ಉಂಟಾಗಿದೆ. ಸೋಂಕು ದೃಢಪಟ್ಟ ವ್ಯಕ್ತಿಯ ಮನೆಯ ಸುತ್ತಲೂ ಮಹಾನಗರ ಪಾಲಿಕೆಯಿಂದ ಸ್ಯಾನಿಟೈಸರ್ ಮಾಡಲಾಗಿದೆ. ಕೋಟಿಲಿಂಗೇಶ್ವರ ನಗರದಲ್ಲಿ ಜನರ ಸಂಚಾರ ವಿರಳವಾಗಿದೆ.
ಗೋಕುಲ ರಸ್ತೆ ಮಾರುತಿ ನಗರದ ಯುವಕರು ತಮ್ಮ ಭಾಗಕ್ಕೆ ಸಂರ್ಪಸುವ ರಸ್ತೆಗಳನ್ನು ಬಂದ್ ಮಾಡಿ ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ಮಾರುತಿ ನಗರದಲ್ಲಿ ಯಾರಿಗೂ ಸೋಂಕು ತಗುಲಿಲ್ಲ. ಆದರೆ, ಬೇರೆ ಕಡೆಯವರು ತಮ್ಮಲ್ಲಿಗೆ ಬಂದು ಸಮಸ್ಯೆ ಉಂಟಾಗುವುದು ಬೇಡ ಎಂದು ಸ್ಥಳೀಯ ಯುವಕರು, ಹಿರಿಯರು ಮುನ್ನೆಚ್ಚರಿಕೆ ನಿಟ್ಟಿನಲ್ಲಿ ರಸ್ತೆಗಳನ್ನು ಬಂದ್ ಮಾಡಿ ಸುರಕ್ಷತೆ ಹೆಚ್ಚಿಸಿಕೊಂಡಿದ್ದಾರೆ.