ಮತ್ತೆ ರಾಜಕಾರಣದೆಡೆ ನಿರಾಸಕ್ತಿ ಪ್ರಕಟಿಸಿದ ಕೇಂದ್ರ ಸಚಿವ

167ca08d-733f-4ca7-9817-46a5c2277dda--06
Published on

ಚಿತ್ರದುರ್ಗ:ಭ್ರಷ್ಟ ವ್ಯವಸ್ಥೆ ಪಕ್ಕ ಕೂರುವುದಿಲ್ಲವೆಂದು ರಾಜಕಾರಣದೆಡೆ ನಿರಾಸಕ್ತಿಯನ್ನು ಈಚೆಗೆ ಪ್ರಕಟಿಸಿದ್ದ ಕೇಂದ್ರ ಸಚಿವ ಎ.ನಾರಾ ಯಣ ಸ್ವಾಮಿ ಅವರು, ಮತ್ತೊಮ್ಮೆ ತಮ್ಮ ಮಾತನ್ನು ಪುನರುಚ್ಛರಿಸಿದ್ದಾರೆ. ಸೋಮವಾರ ಜಿಪಂದಲ್ಲಿ ನಡೆದ ದಿಶಾ ಮೀಟಿಂಗ್‌ನಲ್ಲಿ ಸರಿ ಯಾಗಿ ಮಾಹಿತಿ ನೀಡದ ಅಧಿಕಾರಿ ವಿರುದ್ಧ ಹರಿಹಾಯ್ದ ಅವರು,ನನಗೆ ಯಾಕೆ ರಾಜಕಾರಣದೆಡೆ ನಿರಾಸಕ್ತಿ ಉಂಟಾಗಿದೆ ಎಂದರೆ ತಮ್ಮ ಇಂಥ ನಡವಳಿಕೆಗಳಿಂದ. ಆಡಳಿತವನ್ನು ನಾನು ಕಲಿಸ ಬೇಕಾ? ಜನರ ಮಧ್ಯೆ ಇದ್ದು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು, ಆಗ ಜನ ತ ಮ್ಮನ್ನು ಗುರುತಿಸುತ್ತಾರೆ ಎಂದು ಅಧಿಕಾರಿಗಳನ್ನುದ್ದೇಶಿಸಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net