ಮತ್ತೆ ಜೊಲ್ಲೆ ತೆಕ್ಕೆಗೆ ಹಿರಣ್ಯಕೇಶಿ ಕಾರ್ಖಾನೆ

ea0ac0b5e39344418b2937c745a7109f
Published on

ಮತ್ತೆ ಜೊಲ್ಲೆ ತೆಕ್ಕೆಗೆ ಹಿರಣ್ಯಕೇಶಿ ಕಾರ್ಖಾನೆ ಅಧ್ಯಕ್ಷ  ಬಸವರಾಜ ಕಲ್ಲಟ್ಟಿ,ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ,ನಿರ್ದೇಶಕಾರಾದ ಬಾಬಾಸಾಹೇಬ ಅರಬೋಳಿ, ಪ್ರಭುದೇವ ಪಾಟೀಲ, ಶಿವನಾಯಿಕ ನಾಯಿಕ, ಬಸವರಾಜ ಮರಡಿ, ಶಾರದಾ ಪಾಟೀಲ,ರಾಜೇಂದ್ರ ಪಾಟೀಲ, ಸಂಜಯ ಶಿರಕೊಳ್ಳಿ ಇತರರಿದ್ದರು.ಈ ವೇಳೆ ಮಾತನಾಡಿದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಈ ಹಿಂದೆ ಹಿರಾ ಶುಗರ್ ಕಾರ್ಖಾನೆ ಆಡಳಿತ ಮಂಡಳಿಯೊಂದೆಗಿನ ವೈಮನಸ್ಸು ಮರೆತು, ರೈತರ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಬೀರೇಶ್ವರ ಸಹಕಾರಿಯಿಂದ ಕಾರ್ಖಾನೆಗೆ ಆರ್ಥಿಕ ನೆರವು ನೀಡಿ ಕಾರ್ಖಾನೆ ಬೆಳವಣಿಗೆಗೆ ಸಹಕಾರ ನೀಡಲಾಗುವುದು ಎಂದರು.ಭಾನುವಾರ ನಿಪ್ಪಾಣಿ ತಾಲೂಕಿನ ಭಿವಶಿ ಗ್ರಾಮದ ಜೊಲ್ಲೆ  ಫಾರ್ಮಹೌಸ್‌ದಲ್ಲಿ ಸಭೆ ನಡೆಸಿದ ಹಿರಾಶುಗರ್ ಕಾರ್ಖಾನೆ ನಿರ್ದೇಶಕರು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಪ್ರಸಕ್ತ ಸಾಲಿನ ಕಬ್ಬು ಹಂಗಾಮು ಆರಂಭಿಸಿ ಕಾರ್ಖಾನೆ ಪ್ರಗತಿಗೆ ಶ್ರಮಿಸಲಾಗುವುದು ಎಂದು ತಿಳಿಸಿದ್ದಾರೆ.ಕಳೆದ ಕೆಲವು ದಿನಗಳ ಹಿಂದಷ್ಟೆ ಕತ್ತಿ ಸಹೋದರರು ಮತ್ತು ಎ.ಬಿ.ಪಾಟೀಲ ಜತೆಗೂಡಿದ್ದ ಹುಕ್ಕೇರಿ ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಇದೀಗ ಅಣ್ಣಾಸಾಹೇಬ ಜೊಲ್ಲೆ ಸಖ್ಯ ಬೆಳೆಸಿದ್ದು ಅಚ್ಚರಿಗೆ ಕಾರಣವಾಗಿದೆ.ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net