

ಕೊಪ್ಪ: ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಇತ್ತೀಚೆಗೆ ಬಂದುಹೋಗಿದ್ದ ಕಾಡಾನೆಗಳು ಶನಿವಾರ ಬೆಳಗ್ಗೆ ಮತ್ತೆ ಪಟ್ಟಣದಲ್ಲಿ ಕಾಣಿಸಿಕೊಂಡಿವೆ.
ಪಟ್ಟಣದ ದ್ಯಾವೇಗೌಡ ವತ್ತದ ಸಮೀಪ ಬೇಲಿಹಳ್ಳಿ, ಸಾರ್ವಜನಿಕ ಆಸ್ಪತ್ರೆ ಹಾಗೂ ಕೊಪ್ಪ ಗ್ರಾಮಾಂತರ ಗ್ರಾಪಂ ಕಚೇರಿ ಹಿಂಭಾಗದಲ್ಲಿ ಎರಡು ಕಾಡಾನೆಗಳು ಕಂಡುಬಂದವು. ಪಟ್ಟಣ ಹೊರವಲಯದ ಕುಬ್ರಿಉಬ್ಬು, ಬಾಳಗಡಿ, ನಿಲುಗುಳಿ, ಗಬ್ಬಾನೆಯಲ್ಲಿ ಕಾಡಾನೆ ಸಂಚರಿಸಿವೆ. ಕುಬ್ರಿಉಬ್ಬಿನ ಅರಣ್ಯ ಇಲಾಖೆಯ ಪ್ಲಾಂಟೆಷನ್‌ನಲ್ಲಿ ಗಂಟೆಗೂ ಅಧಿಕ ಕಾಲ ಎರಡು ಕಾಡಾನೆಗಳು ಮಲಗಿದ್ದವು. ನಾಲ್ಕು ಗಂಟೆಯ ನಂತರ ನಿದ್ರೆಯಿಂದ ಎದ್ದ ಕಾಡಾನೆಗಳು ನಿಲುಗುಳಿ ಕಡೆಗೆ ತೆರಳಿದವು. ನಂತರ ಮತ್ತೆ ಅದೇ ಸ್ಥಳಕ್ಕೆ ಬಂದಿವೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ಓಡಿಸಲು ಪ್ರಯತ್ನ ಮಾಡುತ್ತಿದ್ದಾರೆ.