ಮತ್ತೆ ಕಾಂಗ್ರೆಸ್​ ತೆಕ್ಕೆಗೆ ಜಾರಿದ ಬೈಲಹೊಂಗಲ ಪುರಸಭೆ

9
Published on

ಬೆಲಹೊಂಗಲ: ಪುರಸಭೆ ಅಧ್ಯ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಮಂಗಳವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ವಿಜಯ ಬೋಳನ್ನವರ ಅಧ್ಯಕ್ಷರಾಗಿ ಹಾಗೂ ಬುಡ್ಡೆಸಾಬ್​ ಶಿರಸಂಗಿ ಉಪಾಧ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

27 ಸದಸ್ಯರ ಬಲವುಳ್ಳ ಪುರಸಭೆಯಲ್ಲಿ 18 ಕಾಂಗ್ರೆಸ್​ ಸದಸ್ಯರು ಹಾಗೂ 9 ಬಿಜೆಪಿ ಸದಸ್ಯರಿದ್ದು, ಸಹಜವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಆಡಳಿತರೂಢ ಕಾಂಗ್ರೆಸ್​ಗೆ ದಕ್ಕಿವೆ. ಶಾಸಕ ಮಹಾಂತೇಶ ಕೌಜಲಗಿ ರ್ನಿಣಯಕ್ಕೆ ಬದ್ಧರಿರುವುದಾಗಿ ಆಡಳಿತರೂಢ ಸದಸ್ಯರು ತಿಳಿಸಿದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯ ಹಾಗೂ ಉಪಾಧ್ಯ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾದವು. ಹೀಗಾಗಿ ಚುನಾವಣಾಧಿಕಾರಿ ಎಚ್​.ಎನ್​. ಶಿರಹಟ್ಟಿ ಅವಿರೋಧ ಆಯ್ಕೆ ಮಾಡಿದರು. ವಿಜಯ ಬೋಳನ್ನವರ ಪುರಸಭೆಯ ಇತಿಹಾಸದಲ್ಲಿಯೇ ಅತಿ ಕಿರಿಯ ವಯಸ್ಸಿನ ಅಧ್ಯರಾಗಿ ಆಯ್ಕೆಯಾದರು. ಅಭಿಮಾನಿಗಳು ಪರಸ್ಪರ ಗುಲಾಲ ಎರಚಿ ಸಂಭ್ರಮಿಸಿದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಪುರಸಭೆ ಸ್ವಚ್ಛತೆಯಲ್ಲಿ ರಾಜ್ಯಕ್ಕೆ ದ್ವೀತಿಯ ಸ್ಥಾನದಲ್ಲಿದೆ. ನೂತನ ಅಧ್ಯ, ಉಪಾಧ್ಯರು, ಸದಸ್ಯರು ರಾಜ್ಯಕ್ಕೆ ಪ್ರಥಮ ಸ್ಥಾನ ಲಭಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಪಬೇಧ ಮಾಡದೆ ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ನೂತನ ಅಧ್ಯ ವಿಜಯ ಬೋಳನ್ನವರ ಮಾತನಾಡಿ, ಶಾಸಕ ಮಹಾಂತೇಶ ಕೌಜಲಗಿ ಮಾರ್ಗದರ್ಶನದಲ್ಲಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ನೂತನ ಉಪಾಧ್ಯ ಬುಡ್ಡೆಸಾಬ ಶಿರಸಂಗಿ, ವಿರೋಧ ಪದ ನಾಯಕ ಶಿವಾನಂದ ಕೋಲಕಾರ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ಮಲ್ಲಿಕಾರ್ಜುನ ಬೋಳನ್ನವರ, ಶ್ರೀಶೆಲ ಬೋಳನ್ನವರ, ಸದಸ್ಯರಾದ ರಾಜಶೇಖರ ಮೂಗಿ, ಗುರು ಮೆಟಗುಡ್ಡ, ಉಳವಪ್ಪ ಬಡ್ಡಿಮನಿ, ಅರ್ಜುನ ಕಲಕುಟಕರ, ಜಗದೀಶ ಜಂಬಗಿ, ಸುಧೀರ ವಾಲಿ, ಅಂಜನಾ ಬೊಂಗಾಳೆ, ಲಕ್ಷಿ$್ಮ ಬಡ್ಲಿ, ಅಮೀರಾಬಿ ಬಾಗವಾನ್​, ದಿಲಶಾದಬೇಗಂ ನದ್​ಾ, ಶಶಿಕಲಾ ಹೊಸಮನಿ, ಪ್ರೇಮಾ ಇಂಚಲ, ಲತೀಾಬೇಗಂ ಮುಲ್ಲಾ, ವಾಣಿಶ್ರೀ ಪತ್ತಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net