

ಗದಗ: ಜಿಲ್ಲೆಯಲ್ಲಿ ಕರೊನಾ ವೈರಸ್ ಅಟ್ಟಹಾಸ ಮುಂದುವರಿದಿದೆ. ಮಂಗಳವಾರ 73 ಜನರಿಗೆ ಸೋಂಕು ತಗುಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 1140ಕ್ಕೆ ಏರಿದಂತಾಗಿದೆ. 677 ಸಕ್ರಿಯ ಕೇಸ್ಗಳಿದ್ದು, 438 ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಮಂಗಳವಾರ ಪತ್ತೆಯಾದ ಕೋವಿಡ್-19 ಪ್ರಕರಣಗಳ ವಿವರ ಇಂತಿದೆ.
ಗದಗ-ಬೆಟಗೇರಿಯ ಕುರಟ್ಟಿ ಪೇಟೆ, ಹುಡ್ಕೋ, ಮಕಾನಗಲ್ಲಿ, ಕಳಸಾಪುರ ರಿಂಗ್ ರಸ್ತೆ, ರಾಜೀವಗಾಂಧಿ ನಗರ, ರಂಗನವಾಡಾ, ಯಲಿಗಾರ ಪ್ಲಾಟ್, ಕುಷ್ಟಗಿಚಾಳ, ಶಹಾಪೂರ ಪೇಟೆ, ಹಾಳದಿಬ್ಬ ಓಣಿ, ಬೆಟಗೇರಿ, ಟ್ಯಾಗೋರ್ ರಸ್ತೆ , ಈಶ್ವರ ಬಡಾವಣೆ, ಸಂಭಾಪೂರ ಪೊಲೀಸ್ ವಸತಿಗೃಹಗಳು, ಕರಿಯಮ್ಮಕಲ್ಲು ಬಡಾವಣೆ, ಕಿಲ್ಲಾ ಓಣಿ, ಎಸ್.ಎಂ. ಕೃಷ್ಣಾ ನಗರದಲ್ಲಿ ಕೋವಿಡ್ ಪ್ರಕರಣ ಪತ್ತೆಯಾಗಿದೆ.
ಗದಗ ತಾಲೂಕಿನ ಅಂತೂರ- ಬೆಂತೂರ, ಕುರ್ತಕೋಟಿ (ಲಕ್ಷ್ಮೀ ದೇವಾಲಯ ಹತ್ತಿರ), ಹುಲಕೋಟಿ ಅಧ್ಯಾಪಕನಗರ, ಜನತಾ ಪ್ಲಾಟ್ನಲ್ಲಿ ಹೊಸ ಕೇಸ್ ಪತ್ತೆಯಾಗಿವೆ. ಶಿರಹಟ್ಟಿ ಪಟ್ಟಣದ ಪೊಲೀಸ್ ಸ್ಟೇಷನ್ ರಸ್ತೆ, ತಾಲೂಕಿನ ರಾಮಗೇರಿ, ಯಳವತ್ತಿ. ರೋಣ ಪಟ್ಟಣದ ಪಂಚಾಯಿತಿ ಹತ್ತಿರ ರೋಣ, ಶಾಂತಿನಗರ, ಕುರುಬಗಲ್ಲಿ, ತಾಲೂಕಿನ ಹೊಳೆ ಆಲೂರ, ಬೆಳವಣಕಿ, ಮುಗಳಿಕ್ರಾಸ್ ಕೊತಬಾಳ, ಇಟಗಿ ಗ್ರಾಮಗಳಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ನರಗುಂದ ಪಟ್ಟಣದ ಅರ್ಬಾನ್ ಓಣಿ, ತಾಲೂಕಿನ ಮದಗುಣಕಿ, ಜಾಲವಾಡಗಿ, ಮುಂಡರಗಿ ಪಟ್ಟಣದ ಎ.ಡಿ.ನಗರ, ಬಸವೇಶ್ವರನಗರ, ತಾಲೂಕಿನ ಬರದೂರ, ಕೊರ್ಲಳ್ಳಿ, ಬೂದಿಹಾಳ. ಹಿರೇವಡ್ಡಟ್ಟಿಯಲ್ಲಿ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಲಕ್ಷ್ಮೇಶ್ವರ ತಾಲೂಕಿನ ಹಳ್ಳದಕೇರಿ ಹಾಗೂ ಗಜೇಂದ್ರಗಡ ಪೊಲೀಸ್ ವಸತಿಗೃಹಗಳಲ್ಲಿ ಸೋಂಕು ಪತ್ತೆಯಾಗಿದೆ.
ಮಹಾಮಾರಿಯಿಂದ ಮೃತಪಟ್ಟವರು
ಗದಗ: ಶಿರಹಟ್ಟಿ ನಿವಾಸಿ 31 ವರ್ಷದ ಪುರುಷ ಅಧಿಕ ರಕ್ತದೊತ್ತಡ ಮತ್ತು ನ್ಯುಮೋನಿಯಾದಿಂದ ಜುಲೈ 25 ರಂದು ಮೃತಪಟ್ಟಿದ್ದಾರೆ. ಕೋವಿಡ್-19 ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಜುಲೈ 25ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ಅವರ ಗಂಟಲ ದ್ರವ ಮಾದರಿ ಪರೀಕ್ಷೆ ವರದಿಯಲ್ಲಿ ಕೋವಿಡ್-19 ದೃಢಪಟ್ಟಿತ್ತು. ಅಧಿಕ ರಕ್ತದೊತ್ತಡ ಹಾಗೂ ನ್ಯುಮೋನಿಯಾದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುತ್ತಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ.
ರೋಣ ನಿವಾಸಿ 60 ವರ್ಷದ ಪುರುಷ, ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗದಗ ತಾಲೂಕಿನ ನೀಲಗುಂದ ಗ್ರಾಮದ ನಿವಾಸಿ 50 ವರ್ಷದ ಪುರುಷ ಸೋಂಕಿನ ಹಿನ್ನೆಲೆಯಲ್ಲಿ ಜುಲೈ 26 ರಂದು ಮೃತಪಟ್ಟಿದ್ದಾರೆ. ಅವರು ಕಾಮಾಲೆ ಹಾಗೂ ಲೀವರ್ ತೊಂದರೆಯಿಂದಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್-19ರ ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.