

ಗದಗ: ಜಿಲ್ಲೆಯಲ್ಲಿ ಸೋಮವಾರ ಮತ್ತೆ 30 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 616ಕ್ಕೆ ಏರಿಕೆಯಾಗಿದೆ.
ಮಲ್ಲಸಮುದ್ರ ನಿವಾಸಿ 46 ವರ್ಷದ ಪುರುಷ ಹಾಗೂ ಹುಲಕೋಟಿ ಗ್ರಾಮದ ನಿವಾಸಿ 41 ವರ್ಷದ ಪುರುಷನಿಗೆ ಸೋಂಕಿನ ಪತ್ತೆ ಕಾರ್ಯ ನಡೆದಿದೆ. ನರಗುಂದದ ಗಾಡಿ ಓಣಿ ನಿವಾಸಿ 28 ವರ್ಷದ ಪುರುಷನಿಗೆ ಕೆಮ್ಮು, ಜ್ವರ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ. ಗದಗ ನಗರದ ಜವಳಿ ಗಲ್ಲಿ ನಿವಾಸಿ 42 ವರ್ಷದ ಮಹಿಳೆಗೆ ಕೆಮ್ಮು ಜ್ವರ ಲಕ್ಷಣದಿಂದ, ಮಲ್ಲಸಮುದ್ರ ನಿವಾಸಿ 45 ವರ್ಷದ ಮಹಿಳೆಗೆ ಸೋಂಕಿನ ಪತ್ತೆ ಕಾರ್ಯ ನಡೆದಿದೆ, ಜಿಮ್ಸ್ ಕ್ವಾರ್ಟರ್ಸ್ ನಿವಾಸಿ 80 ವರ್ಷ ಪುರುಷ ಮತ್ತು 60 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಸೋಂಕಿನ ಪತ್ತೆ ಕಾರ್ಯ ನಡೆದಿದೆ, ಬೆಳಗಾವಿ ಜಿಲ್ಲೆ ರಾಮದುರ್ಗ ನಿವಾಸಿ 51 ವರ್ಷದ ಪುರುಷ ಹಾಗೂ 46 ವರ್ಷದ ಮಹಿಳೆಗೆ ಕೆಮ್ಮು ಜ್ವರ ಲಕ್ಷಣದಿಂದಾಗಿ, ಬೆಳಗಾವಿ ಜಿಲ್ಲೆ ರಾಮದುರ್ಗ ನಿವಾಸಿ 22 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನೆಲೆಯಲ್ಲಿ, ಲಕ್ಷೆ್ಮೕಶ್ವರ ಸೋಮೇಶ್ವರ ನಗರ ನಿವಾಸಿ 78 ವರ್ಷದ ಮಹಿಳೆಗೆ (ಪಿ-51642ರ ಸಂಪರ್ಕದಿಂದ), ಹಾತಲಗೇರಿ ನಾಕಾ ನಿವಾಸಿ 24 ವರ್ಷದ ಪುರುಷನಿಗೆ ಅಂತರ್ ರಾಜ್ಯ ಪ್ರಯಾಣ ಹಿನ್ನೆಲೆಯಲ್ಲಿ, ಬೆಟಗೇರಿಯ ಶಿವಾಜಿನಗರ ನಿವಾಸಿ 42 ವರ್ಷದ ಪುರುಷನಿಗೆ ಕೆಮ್ಮು ಜ್ವರ ಲಕ್ಷಣದಿಂದ, ಲಕ್ಷ್ಮೇಶ್ವರದ ನಿವಾಸಿ 38 ವರ್ಷದ ಪುರುಷನಿಗೆ ಸೋಂಕಿತರ ಸಂಪರ್ಕದಿಂದ, ನಗರದ ಟ್ಯಾಗೋರ್ ರಸ್ತೆ ನಿವಾಸಿ 45 ವರ್ಷದ ಪುರುಷನಿಗೆ (ಪಿ-58945ರ ಸಂಪರ್ಕದಿಂದ), ನಗರದ ಹೆಲ್ತ್ ಕ್ಯಾಂಪ್ ನಿವಾಸಿ 60 ವರ್ಷದ ಮಹಿಳೆಗೆ ಕೆಮ್ಮು, ಜ್ವರ ಲಕ್ಷಣದಿಂದಾಗಿ, ಲಕ್ಷೆ್ಮೕಶ್ವರದ ಪೇಟೆ ನಿವಾಸಿ 23 ವರ್ಷದ ಮಹಿಳೆಗೆ (ಪಿ-51662 ಸಂಪರ್ಕದಿಂದ) ಸೋಂಕು ದೃಢಪಟ್ಟಿದೆ.
ಹಿರೇಹಾಳ ನಿವಾಸಿ 38 ವರ್ಷದ ಪುರುಷನಿಗೆ ಕೆಮ್ಮು, ಜ್ವರ ಲಕ್ಷಣದಿಂದಾಗಿ, ರಾಜೂರು ನಿವಾಸಿ 40 ವರ್ಷದ ಪುರುಷನಿಗೆ ಪ್ರಯಾಣದ ಹಿನ್ನೆಲೆಯಲ್ಲಿ, ಗದಗ ನಗರದ ರೆಹಮಾನಿ ಮಜೀದ್ ಹತ್ತಿರದ ನಿವಾಸಿ 40 ವರ್ಷದ ಪುರುಷನಿಗೆ ಉಸಿರಾಟದ ತೊಂದರೆಯಿಂದ, ಲಕ್ಷೆ್ಮೕಶ್ವರದ ಬಸಾಪುರ ಓಣಿ ನಿವಾಸಿ 41 ವರ್ಷದ ಪುರುಷಗೆ (ಪಿ-36323 ಸಂಪರ್ಕದಿಂದ), ನರಗುಂದ ವಿನಾಯಕ ನಗರ ನಿವಾಸಿ 24 ವರ್ಷದ ಮಹಿಳೆಗೆ ದೃಢವಾಗಿದ್ದು, ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಗದಗ ನಗರದ ಟ್ಯಾಗೋರ್ ರಸ್ತೆ ನಿವಾಸಿ 67 ವರ್ಷದ ಮಹಿಳೆಗೆ (ಪಿ-58945 ಸಂಪರ್ಕದಿಂದ), ಗದಗ ನಗರದ ಹುಡ್ಕೋ ಕಾಲನಿ ಎರಡನೇ ತಿರುವಿನ ನಿವಾಸಿಗಳಾದ 35 ವರ್ಷದ ಪುರುಷ, 33 ವರ್ಷದ ಮಹಿಳೆ, 8 ವರ್ಷದ ಬಾಲಕಿ ಹಾಗೂ 53 ವರ್ಷದ ಮಹಿಳೆಗೆ ಕೆಮ್ಮು ಜ್ವರ ಲಕ್ಷಣದಿಂದ, ಹೊಸ ಗ್ರಾಮ ಮಳವಾಡ ನಿವಾಸಿ 32 ವರ್ಷದ ಪುರುಷನಿಗೆ ಕೆಮ್ಮು ಜ್ವರ ಲಕ್ಷಣದಿಂದ, ಗದಗ ನಗರದ ರಾಜೀವ ಗಾಂಧಿ ನಗರ ನಿವಾಸಿ 42 ವರ್ಷದ ಮಹಿಳೆಗೆ ಕೆಮ್ಮು ಜ್ವರ ಲಕ್ಷಣದಿಂದ, ಕಣವಿ ನಿವಾಸಿ 55 ವರ್ಷದ ಪುರುಷನಿಗೆ (ಪಿ-44208 ಸಂಪರ್ಕದಿಂದ) ಸೋಂಕು ದೃಢಪಟ್ಟಿದೆ.
ಸೋಂಕಿತರಿಗೆ ನಿಗದಿತ ಕೋವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.
30 ಪ್ರದೇಶ ಪ್ರತಿಬಂಧಿತ
ಗದಗ: ಜಿಲ್ಲೆಯಲ್ಲಿ ಕೋವಿಡ್- 19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸೋಂಕು ಸಕಾರಾತ್ಮಕ ಕಂಡುಬಂದ 30 ಪ್ರದೇಶಗಳನ್ನು ಪ್ರತಿಬಂಧಿತ ಪ್ರದೇಶಗಳನ್ನಾಗಿ ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಘೊಷಿಸಿದ್ದಾರೆ.
ಗದಗ-ಬೆಟಗೇರಿ ನಗರದ 3ನೇ ವಾರ್ಡ್ನ ಹೆಲ್ತ್ ಕ್ಯಾಂಪ್, 15ನೇ ವಾರ್ಡ್ನ ಬಸವೇಶ್ವರ ನಗರ, 14ನೇ ವಾರ್ಡ್ನ ಚಾಪೆಕರ ಆಸ್ಪತ್ರೆ ಹತ್ತಿರ, 32ನೇ ವಾರ್ಡ್ನ ದಾಸರ ಓಣಿ, 34ನೇ ವಾರ್ಡ್ನ ಸಿದ್ದರಾಮೇಶ್ವರ ನಗರ, 35ನೇ ವಾರ್ಡ್ನ ಸಿದ್ದಲಿಂಗನಗರ, 33ನೇ ವಾರ್ಡ್, ಕೇಶವ ನಗರ, 27ನೇ ವಾರ್ಡ್ನ ಕೆ.ಸಿ. ರಾಣಿ ರಸ್ತೆ, 28ನೇ ವಾರ್ಡ್ನ ಪಂಚಾಕ್ಷರಿ ನಗರ 2ನೇ ಕ್ರಾಸ್, 28ನೇ ವಾರ್ಡ್ ಪಂಚಾಕ್ಷರಿ ನಗರ ಬುರಬುರಿ ಪ್ಲಾಟ್, 30ನೇ ವಾರ್ಡ್ನ ಅಬ್ಬಿಗೇರಿ ಕಾಂಪೌಂಡ್ನ ಮಹಾವೀರ ಕಾಲನಿ. ಗದಗ ತಾಲೂಕಿನ ಬೆಳದಡಿ ಗ್ರಾಮ ಪಂಚಾಯಿತಿಯ 5ನೇ ವಾರ್ಡ್ನ ಕಬಲಾಯತಕಟ್ಟಿ ಗ್ರಾಮ, ಮುಳಗುಂದ 9ನೇ ವಾರ್ಡ್ನ ಸಿತಾಲಹರಿ ಗ್ರಾಮ, ಕುರ್ತಕೋಟಿ ಗ್ರಾಮ ಪಂಚಾಯಿತಿ 6ನೇ ವಾರ್ಡ್. ಗಜೇಂದ್ರಗಡ ಪಟ್ಟಣ ಪಂಚಾಯಿತಿಯ 20ನೇ ವಾರ್ಡ್ನ ಪೂಜಾರ ಓಣಿ, 13ನೇ ವಾರ್ಡ್ನ ಬೆಂಡಿಕಾಯಿ ಓಣಿ, 17ನೇ ವಾರ್ಡ್ನ ಸಾಯಿಬಾಬಾ ನಗರ, 20ನೇ ವಾರ್ಡ್ನ ಲಿಂಗರಾಜ ನಗರ, 3ನೇ ವಾರ್ಡ್ನ ವಾಜಪೇಯಿ ನಗರ, ಲಕ್ಕಲಕಟ್ಟಿ ಗ್ರಾಮ ಪಂಚಾಯಿತಿಯ 2ನೇ ವಾರ್ಡ್.
ರೋಣ ತಾಲೂಕಿನ ಯಾವಗಲ್ಲ ಗ್ರಾಮ ಪಂಚಾಯಿತಿಯ 1ನೇ ವಾರ್ಡ್, ಹೊಳೆಆಲೂರ 5ನೇ ವಾರ್ಡ್, ಹೊಳೆ ಮಣ್ಣೂರ 1ನೇ ವಾರ್ಡ್, ಹುಲ್ಲೂರ ಗ್ರಾಮ ಪಂಚಾಯಿತಿ 3ನೇ ವಾರ್ಡ್, ಮೆಣಸಗಿ ಗ್ರಾಮ ಪಂಚಾಯಿತಿ 1ನೇ ವಾರ್ಡ್, ಬೆಳವಣಕಿ ಗ್ರಾಮ ಪಂಚಾಯಿತಿ 5ನೇ ವಾರ್ಡ್. ಮುಂಡರಗಿ ತಾಲೂಕಿನ ಡೋಣಿ ಗ್ರಾಮ ಪಂಚಾಯಿತಿ 6ನೇ ವಾರ್ಡ್ ಉರ್ದು ಶಾಲೆಯ ಹತ್ತಿರ, ಕಲಕೇರಿ ಗ್ರಾಮದ 1ನೇ ವಾರ್ಡ್, ಬಡಿಗೇರ ಓಣಿ. ಶಿರಹಟ್ಟಿ ತಾಲೂಕಿನ ಮುರಡಿ ಗ್ರಾಮ ಪಂಚಾಯಿತಿ 1ನೇ ವಾರ್ಡ್, ರಣತೂರ ಗ್ರಾಮ ಪಂಚಾಯಿತಿ 1ನೇ ವಾರ್ಡ್. 100 ಮೀಟರ್ ವ್ಯಾಪ್ತಿಯ ಪ್ರತಿಬಂಧಿತ ಪ್ರದೇಶಗಳ ಸುತ್ತಲಿನ 5 ಕಿ.ಮೀ. ಹಾಗೂ ಗ್ರಾಮೀಣ ಪ್ರತಿಬಂಧಿತ ಪ್ರದೇಶಗಳ ಸುತ್ತಲಿನ 7 ಕಿ.ಮೀ. ಪ್ರದೇಶವನ್ನು ಕಂಟೇನ್ಮೆಂಟ್ ಬಫರ್ ಜೋನ್ ಎಂದು ಘೊಷಿಸಲಾಗಿದೆ. ಈ ಎಲ್ಲ ಘೊಷಿತ ಪ್ರತಿಬಂಧಿತ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಕೊವಿಡ್-19 ಸೋಂಕು ತಡೆ ಕಾರ್ಯ ನಿರ್ವಹಿಸಲು ಪ್ರತ್ಯೇಕವಾಗಿ ಇನ್ಸಿಡೆಂಟ್ ಕಮಾಂಡರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ವಯ ಅವರು ಸಂಪೂರ್ಣ ಹೊಣೆಗಾರಿಕೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.