

ಧಾರವಾಡ: ಜಿಲ್ಲೆಯಲ್ಲಿ 26 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರಲ್ಲಿ ಆರು ಮಕ್ಕಳು ಸೇರಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 244ಕ್ಕೆ ಏರಿಕೆಯಾಗಿದೆ. ಈ ಪೈಕಿ 142 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 99 ಸಕ್ರಿಯ ಪ್ರಕರಣಗಳು ಇವೆ.
ಹುಬ್ಬಳ್ಳಿ ಶಿರಡಿನಗರ ಸಾಯಿಬಾಬಾ ದೇವಾಲಯ ಹತ್ತಿರದ ನಿವಾಸಿ 12 ವರ್ಷದ ಬಾಲಕ, ಹುಬ್ಬಳ್ಳಿ ಮೌಲಾಲಿ ಬ್ಲಾಕ್ ಮಂಟೂರ ರಸ್ತೆಯ 24 ವರ್ಷದ ಯುವಕ, ಹುಬ್ಬಳ್ಳಿ ಇಟಗಿ ಮಾರುತಿ ಗಲ್ಲಿಯ 31 ವರ್ಷದ ಪುರುಷ, ಹುಬ್ಬಳ್ಳಿ ಗಂಗಾಧರನಗರ ಉಂಡಿ ಪ್ಲಾಟ್ ದೊಡ್ಡಮನಿ ಕಾಲನಿಯ 4 ವರ್ಷದ ಬಾಲಕಿ, ಹುಬ್ಬಳ್ಳಿ ಎಸ್.ಎಂ. ಕೃಷ್ಣನಗರದ 40 ವರ್ಷದ ಪುರುಷ, ಹುಬ್ಬಳ್ಳಿ ಕೇಶ್ವಾಪುರ ಉದಯನಗರದ 18 ವರ್ಷದ ಯುವತಿ, ಹಳೇ ಹುಬ್ಬಳ್ಳಿ ಲತ್ತಿಪೇಟೆಯ 2 ವರ್ಷದ ಬಾಲಕ, ಧಾರವಾಡ ಗೌಳಿಗಲ್ಲಿಯ 24 ವರ್ಷದ ಯುವಕ, ಹುಬ್ಬಳ್ಳಿ ಮಂಟೂರು ರಸ್ತೆಯ 23 ವರ್ಷದ ಮಹಿಳೆ, ಹುಬ್ಬಳ್ಳಿ ಗಾರ್ಡನ್ಪೇಟ ಎಂ.ವಿ. ಗಲ್ಲಿಯ 23 ವರ್ಷದ ಪುರುಷ, ನೂಲ್ವಿ ಗ್ರಾಮದ ಹುಡೇದ ಓಣಿಯ 9 ವರ್ಷದ ಬಾಲಕನಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಹುಬ್ಬಳ್ಳಿ ಮಂಟೂರ ರಸ್ತೆಯ ಕೃಪಾನಗರದ 23 ವರ್ಷದ ಮಹಿಳೆ ತೆಲಂಗಾಣದಿಂದ ಹಿಂದಿರುಗಿದ್ದಾರೆ. ಹುಬ್ಬಳ್ಳಿ ಗೋಕುಲ ರಸ್ತೆಯ ಸನ್ಮಾರ್ಗನಗರದ 38 ವರ್ಷದ ಪುರುಷ, ಧಾರವಾಡ ನುಗ್ಗಿಕೇರಿಯ 40 ವರ್ಷದ ಪುರುಷ ಸೋಂಕಿತರಾಗಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಧಾರವಾಡ ಮಹಾಂತನಗರದ 38 ವರ್ಷದ ಪುರುಷ ಕೆಮ್ಮು, ನೆಗಡಿ, ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. 7 ವರ್ಷದ ಬಾಲಕ ಮಹಾರಾಷ್ಟ್ರದಿಂದ ಹಿಂದಿರುಗಿದ್ದು, ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದರು. ನವಲಗುಂದ ತಾಲೂಕು ಮೊರಬ ಗ್ರಾಮದ 83 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅಂಚಟಗೇರಿ ಗಾಣಿಗೇರ ಓಣಿಯ 33 ವರ್ಷದ ಪುರುಷ ತೆಲಂಗಾಣದಿಂದ ಹಿಂದಿರುಗಿದ್ದಾರೆ. ನೂಲ್ವಿ ಗ್ರಾಮದ 35 ವರ್ಷದ ಮಹಿಳೆಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಅಣ್ಣಿಗೇರಿ ತಾಲೂಕು ಮಣಕವಾಡದ 55 ವರ್ಷದ ಪುರುಷ ದೆಹಲಿಯಿಂದ ಹಿಂದಿರುಗಿದ್ದಾರೆ.
ನವಲಗುಂದ ತಾಲೂಕು ಗುಡಿಸಾಗರ ಗ್ರಾಮದ 10 ವರ್ಷದ ಬಾಲಕಿ ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಹುಬ್ಬಳ್ಳಿ ಮಿಲ್ಲತ್ ನಗರದ 52 ವರ್ಷದ ಮಹಿಳೆ, ಹಳೇ ಹುಬ್ಬಳ್ಳಿ ದೋಭಿ ಘಾಟ್ನ 50 ವರ್ಷದ ಮಹಿಳೆ, ಹುಬ್ಬಳ್ಳಿ ಅರಿಹಂತನಗರದ ಫೆಸಿಫಿಕ್ ಮ್ಯಾನ್ಷನ್ನ್ನ 48 ವರ್ಷದ ಮಹಿಳೆ ಮಹಾರಾಷ್ಟ್ರದಿಂದ ಹಿಂದಿರುಗಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದರು. ಹಳೇ ಹುಬ್ಬಳ್ಳಿ ಸದಾಶಿವ ಕಾಲನಿಯ 53 ವರ್ಷದ ಮಹಿಳೆಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
18 ಜನ ಚೇತರಿಕೆ, ಬಿಡುಗಡೆ
ಕೋವಿಡ್ನಿಂದ ಚೇತರಿಸಿಕೊಂಡಿರುವ 18 ಜನರನ್ನು ಹುಬ್ಬಳ್ಳಿಯ ಕಿಮ್ಸ್ನಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 142 ಜನ ಕೋವಿಡ್ನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
488 ವರದಿ ಬಾಕಿ
ಧಾರವಾಡ: ಜಿಲ್ಲೆಯಲ್ಲಿ ಗುರುವಾರ ಸಂಜೆವರೆಗೆ ಕೋವಿಡ್ ತಪಾಸಣೆಗೊಳಗಾದ 488 ವರದಿ ಬಾಕಿ ಇದೆ.
ಈವರೆಗೆ ಜಿಲ್ಲೆಯಲ್ಲಿ 23361 ಶಂಕಿತ ವ್ಯಕ್ತಿಗಳ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 22771 ಜನರ ವರದಿ ನೆಗೆಟಿವ್ ಬಂದಿವೆ. 244 ಪ್ರಕರಣಗಳು ಪಾಸಿಟಿವ್ ಬಂದಿವೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಬೆಂಡಿಗೇರಿ ಪೊಲೀಸರಿಗೆ ಮತ್ತೊಮ್ಮೆ ಪರೀಕ್ಷೆ
ಹುಬ್ಬಳ್ಳಿ: ಇಲ್ಲಿನ ಬೆಂಡಿಗೇರಿ ಪೊಲೀಸ್ ಠಾಣೆಯ ಇಬ್ಬರು ಗೃಹ ರಕ್ಷಕಿ(ಹೋಂ ಗಾರ್ಡ್)ಯರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗುರುವಾರ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಯ ಗಂಟಲು ದ್ರವ ಪಡೆದು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿದೆ.
ಪೊಲೀಸ್ ಠಾಣೆ ಆವರಣಕ್ಕೆ ಮಧ್ಯಾಹ್ನ ಮೊಬೈಲ್ ಸ್ವಾಬ್ ಕಲೆಕ್ಷನ್ ವಾಹನ ಆಗಮಿಸಿತ್ತು. ವೈದ್ಯಕೀಯ ಸಿಬ್ಬಂದಿ ಠಾಣೆಯ 40ಕ್ಕೂ ಹೆಚ್ಚು ಸಿಬ್ಬಂದಿಯ ಗಂಟಲು ದ್ರವ ಸಂಗ್ರಹಿಸಿದರು. ಪಾಲಿಕೆ ವತಿಯಿಂದ ಠಾಣೆಯಲ್ಲಿ ಸ್ಯಾನಿಟೈಸೇಷನ್ ಮಾಡಲಾಯಿತು.
ಕಳೆದ ತಿಂಗಳು ದಾವಣಗೆರೆ ಮೂಲದ ವೃದ್ಧೆಯೊಬ್ಬರನ್ನು ಠಾಣೆಯ ಸಿಬ್ಬಂದಿ ನಿರಾಶ್ರಿತರ ಕೇಂದ್ರಕ್ಕೆ ರವಾನಿಸಿದ್ದರು. ಬಳಿಕ ವೃದ್ಧೆಗೆ ಕರೊನಾ ಸೋಂಕು ದೃಢಪಟ್ಟಿತ್ತು. ಆ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್ಐ, ಎಎಸ್ಐ ಸೇರಿ ನಾಲ್ವರನ್ನು ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಠಾಣೆಯ ಎಲ್ಲ ಸಿಬ್ಬಂದಿಗೆ ಕರೊನಾ ತಪಾಸಣೆ ಮಾಡಿಸಲಾಗಿತ್ತು. ಎಲ್ಲರ ವರದಿ ನೆಗೆಟಿವ್ ಬಂದಿತ್ತು. ಗೃಹರಕ್ಷಕರಿಗೂ ತಪಾಸಣೆ ಮಾಡಿಸಲು ಠಾಣೆಯ ಇನ್ಸ್ಪೆಕ್ಟರ್ ಅರುಣಕುಮಾರ ಸೋಳಂಕಿ ಸೂಚಿಸಿದ್ದರು. ಇನ್ಸ್ಪೆಕ್ಟರ್ ಮುಂಜಾಗ್ರತೆಯಿಂದ ಗೃಹರಕ್ಷಕಿಯರ ಸೋಂಕು ಬೆಳಕಿಗೆ ಬಂದಿದೆ.
ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಕೆಲ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ದಕ್ಷಿಣ ಉಪ ವಿಭಾಗದ ಎಸಿಪಿ ಕಚೇರಿಯ ಒಬ್ಬ ಸಿಬ್ಬಂದಿಯ ಗಂಟಲ ದ್ರವ ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
EndFragment