ಮತ್ತಿನಲ್ಲಿ ಪೊಲೀಸರ ಮೇಲೆ ಯುವಕ ಹಲ್ಲೆ

klb5
ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಯುವಕನನ್ನು ಮನಸೋಇಚ್ಛೆ ಥಳಿಸಿದ ಪೊಲೀಸರು.
Published on

ಜೇವರ್ಗಿ: ಕುಡಿದ ಅಮಲಿನಲ್ಲಿ ಯುವಕನೊಬ್ಬ ಭಾನುವಾರ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಹಲ್ಲೆಗೆ ಯತ್ನಿಸಿದ ಘಟನೆ ಸೊನ್ನ ಗ್ರಾಮದಲ್ಲಿ ನಡೆದಿದೆ. ಚನ್ನಬಸಪ್ಪ ಹೆಗಡೆ ಹಲ್ಲೆಗೆ ಯತ್ನಿಸಿದ ಬಂಧಿತ.

ಊರಲ್ಲಿ ಶ್ರೀ ರೇವಣಸಿದ್ಧೇಶ್ವರ ಜಾತ್ರೋತ್ಸವ ನಿಮಿತ್ತ ಆಯೋಜಿಸಿದ್ದ ತಾಲೂಕು ಮಟ್ಟದ ಟ್ರಾÈಕ್ಟರ್‌ಗಳ ಹಗ್ಗ-ಜಗ್ಗಾಟದ ಸ್ಪರ್ಧೆಯಲ್ಲಿ ಸೊನ್ನ ಮತ್ತು ಮಾವನೂರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಸುಮಾರು 70 ಫೀಟ್ ಟ್ರಾÈಕ್ಟರ್ ಎಳೆದೊಯ್ಯುವಾಗ ಮಾವನೂರು ಬಹುತೇಕ ಗುರಿ ಮುಟ್ಟುವ ಹಂತದಲ್ಲಿತ್ತು. ಈ ವೇಳೆ ನಿಗದಿಪಡಿಸಿದ್ದ ಚೌಕಟ್ಟು ದಾಟಿ ಹೊರ ಹೋಗಿದ್ದರಿಂದ ಸ್ಪರ್ಧೆ ನಿಲ್ಲಿಸಲಾಗಿತ್ತು. ಬಳಿಕ ಚೌಕಟ್ಟು ದಾಟಿದ ಸ್ಥಳದಿಂದ ಸ್ಪರ್ಧೆ ಶುರು ಮಾಡಬೇಕು ಎಂದು ಮಾವನೂರು ಪಟ್ಟು ಹಿಡಿದರೆ, ಆರಂಭದ ಸ್ಥಳದಿಂದಲೇ ನಡೆಸುವಂತೆ ಸೊನ್ನ ಗ್ರಾಮಸ್ಥರು ಒತ್ತಾಯಿಸಿದರು. ನಿರ್ಣಾಯಕರು ಮಧ್ಯಸ್ಥಿಕೆ ವಹಿಸಿ ಎರಡೂ ಊರುಗಳನ್ನು ಅನರ್ಹಗೊಳಿಸಿದ ಬಳಿಕ ಗಲಾಟೆ ಶುರುವಾಯಿತು.

ಈ ಬಗ್ಗೆ ನೀಡಿದ ಮೌಖಿಕ ದೂರಿನನ್ವಯ ಪಿಎಸ್‌ಐ ಚಿದಾನಂದ ಸವದಿ ಸೇರಿ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪಂದ್ಯ ನಡೆಸದಂತೆ ಸೂಚನೆ ನೀಡಿದ್ದಾರೆ. ಕುಡಿದ ಅಮಲಿನಲ್ಲಿದ್ದ ಚನ್ನಬಸಪ್ಪ ಎಂಬಾತ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದು, ಕೆರಳಿದ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಊರಲ್ಲಿ ಶಾಂತ ಸ್ಥಿತಿ ಇದ್ದು, ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್: ಸೊನ್ನ ಗ್ರಾಮದಲ್ಲಿ ಪೊಲೀಸರ ಮೇಲೆ ಕೈ ಮಾಡಿದ ಯುವಕನಿಗೆ ನೆರೆದಿದ್ದ ಜನರ ಮಧ್ಯೆಯೇ 8-10 ಪೊಲೀಸರು ಮನಸೋ ಇಚ್ಛೆ ಥಳಿಸಿದ್ದು, ಈ ದೃಶ್ಯವನ್ನು ವಿಡಿಯೋದಲ್ಲಿ ಸೆರೆಹಿಡಿದ ಜನರು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net