

ಬಾಳೆಹೊನ್ನೂರು: ಖಾಂಡ್ಯ ಹೋಬಳಿ ದೇವದಾನ ಗ್ರಾಪಂ ಮತ್ತಿಖಂಡದಲ್ಲಿ ಶನಿವಾರ ಮನೆ ಕುಸಿದಿದೆ.
ಮತ್ತಿಖಂಡದ ಹೇಮಾ ಶೇಖರ್ ಎಂಬುವರ ಮನೆ ನೆಲ ಸಮವಾಗಿದೆ. ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಮನೆ ಕುಸಿದಿದೆ ಎನ್ನಲಾಗಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮ ಆಡಳಿತ ಅಧಿಕಾರಿ ಸೌಧಾ ಸ್ಥಳ ಪರಿಶೀಲಿಸಿದರು. ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮನೆಯ ವಸ್ತುಗಳನ್ನು ತೆರವು ಮಾಡಿಕೊಟ್ಟರು.