

ಬೆಳಗಾವಿ: ಜಿಲ್ಲೆಯಾದ್ಯಂತ ಮುಂಗಾರು ಹಂಗಾಮು ಸದ್ಯದಲ್ಲಿ ಆರಂಭವಾಗಲಿದೆ. ಬಹು ಮುಖ್ಯ ಪರಿಕರವಾದ ಬೀಜದ ಆಯ್ಕೆ ಮತ್ತು ಸಂಗ್ರಹಣೆ ಅತಿ ಅವಶ್ಯವಾಗಿದೆ. ಗುಣಮಟ್ಟ ಬೀಜದಿಂದ ಉತ್ತಮ ಇಳುವರಿ ಹಾಗೂ ಆರ್ಥಿಕ ಸಬಲತೆ ಸಾಧ್ಯವಿದೆ. ಹಾಗಾಗಿ ಮುಂಗಾರು ಹಂಗಾಮಿನಲ್ಲಿ ಗುಣಮಟ್ಟದ ಹಾಗೂ ಅಧಿಕ ಇಳುವರಿ ನೀಡುವ ತಳಿಗಳ ಬೀಜವನ್ನು ರೈತರಿಗೆ ಸಕಾಲದಲ್ಲಿ ಪೂರೈಸುವ ಉದ್ದೇಶದಿಂದ ಕೆವಿಕೆ ಮತ್ತಿಕೊಪ್ಪದ ಆವರಣದಲ್ಲಿ ಬೀಜ ಮೇಳವನ್ನು ಮೇ.16 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಆಯೋಜಿಸಲಾಗಿದೆ.
ಈ ಬೀಜ ಮೇಳದಲ್ಲಿ ಉತ್ತಮ ಗುಣಮಟ್ಟದ ಹೆಸರು, ಉದ್ದು, ಸೋಯಾ ಅವರೆ, ಶೇಂಗಾ ಹಾಗೂ ಈರುಳ್ಳಿ ಬೀಜ, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕ, ಜೈವಿಕ ಶಿಲೀಂಧ್ರನಾಶಕ, ತೋಟಗಾರಿಕೆ ಸಸಿಗಳು ಹಾಗೂ ಎರೆಹುಳು ಗೊಬ್ಬರ ದೊರೆಯುತ್ತವೆ. ಈ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ರೈತ ಬಾಂಧವರು ಭಾಗವಹಿಸಿ ಬೀಜ ಮೇಳದ ಪ್ರಯೋಜನ ಪಡೆಯಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಶ್ರೀದೇವಿ ಅಂಗಡಿ ಹಾಗೂ ಶಂಕರಗೌಡ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮಲ್ಲಿ ಹೈಟೆಕ್ ತಂತ್ರಜ್ಞಾನದಿಂದ ಸಂಸ್ಕರಿಸಿದ ಉತ್ತಮ ಗುಣಮಟ್ಟದ ಬೀಜಗಳನ್ನು ತಯಾರಿಸಿ, ರೈತರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡಲಾಗುತ್ತಿದ್ದು, ರೈತರ ಈ ಬೀಜ ಮೇಳದ ಲಾಭ ಪಡೆಯಬೇಕು. ಶಂಕರಗೌಡ ಪಾಟೀಲ ಕೆಎಲ್‌ಇ ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ. ಬೆಳಗಾವಿ.