

ರಾವಂದೂರು: ರೈತಾಪಿ ಬಡಕುಟುಂಬಗಳ ಸದಸ್ಯರು ಕೂಲಿ ಕೆಲಸ ಬಿಟ್ಟು ಪಡಿತರ ಆಹಾರಕ್ಕೆ ಪರದಾಡುವುದನ್ನು ತಪ್ಪಿಸಲು ಮತ್ತಷ್ಟು ಪಡಿತರ ಉಪಕೇಂದ್ರಗಳನ್ನು ತೆರೆಯಲಾಗುವುದು ಎಂದು ಶಾಸಕ ಕೆ.ಮಹದೇವ್ ಭರವಸೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಚಿಕ್ಕಬೇಲಾಳು ಗ್ರಾಮದಲ್ಲಿ ನೂತನ ಪಡಿತರ ಉಪ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿಕ್ಕಬೇಲಾಳು ಬಹಳ ಹಿಂದುಳಿದ ಕುಗ್ರಾಮವಾಗಿದ್ದು, ಈ ಗ್ರಾಮದ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ನೀಡಲಾಗಿದೆ. ನಾನು ಶಾಸಕನಾದ ಮೇಲೆ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಎಂದರು.
ಆಹಾರ ಶಿರಸ್ತೇದಾರ ಸಣ್ಣಸ್ವಾಮಿ ಮಾತನಾಡಿ, ತಾಲೂಕಿನಾದ್ಯಂತ 90 ನ್ಯಾಯಬೆಲೆ ಅಂಗಡಿಗಳಿದ್ದು, ಇದರಲ್ಲಿ 49 ಪಡಿತರ ಉಪಕೇಂದ್ರಗಳನ್ನು ಶಾಸಕರ ಸೂಚನೆ ಮೇರೆಗೆ ತೆರೆಯಲಾಗಿದೆ. ತಾಲೂಕಿನ ಮತ್ತಷ್ಟು ಗ್ರಾಮಗಳಲ್ಲಿ ಉಪಕೇಂದ್ರ ತೆರೆಯಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಸೈಯದ್‌ಜವೇರಿಯಾ, ಸದಸ್ಯರಾದ ಕುಮಾರ್, ರಾಮೇಗೌಡ, ವಿ.ಎಸ್.ಎಸ್.ಎನ್.ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಮಹದೇವ್‌ನಾಯಕ, ಸದಸ್ಯರಾದ ಕುಮಾರ್, ರಮೇಶ್, ನದೀಮ್, ಕೃಷ್ಣ, ಪಾಪಣ್ಣ, ರಾಜಶೇಖರ್, ವಕೀಲ ಶೀವಸ್ವಾಮಿ, ಆರ್.ಐ.ಶ್ರೀಧರ್, ಪಿಡಿಒ ರವೀಂದ್ರನಾಥ ಇತರರಿದ್ದರು.