ಮತ್ತಷ್ಟು ಕುಸಿದ ಬಿಆರ್​ಟಿಎಸ್ ಮೇಲ್ಸೇತುವೆ ಪ್ಯಾನಲ್

21 Dwd 10
Published on

ಧಾರವಾಡ: ಅವಳಿನಗರ ನಡುವಿನ ನವಲೂರ ರೈಲ್ವೆ ಹಳಿ ಬಳಿ ಬಿಆರ್​ಟಿಎಸ್ ನಿರ್ವಿುಸಿದ ಮೇಲ್ಸೇತುವೆ ಪ್ಯಾನಲ್​ಗಳು ಸೋಮವಾರ ಮತ್ತಷ್ಟು ಕುಸಿದಿವೆ.

ನಿರ್ಮಾಣ ಹಂತದ ಮೇಲ್ಸೇತುವೆ ಕಾಮಗಾರಿ 2 ವರ್ಷಗಳಿಂದ ಅರ್ಧಕ್ಕೆ ಸ್ಥಗಿತಗೊಂಡಿದೆ. ಬಳಕೆ ಇಲ್ಲದ ಮೇಲ್ಸೇತುವೆಗೆ ಅಳವಡಿಸಿರುವ ಕೆಲ ಪ್ಯಾನಲ್​ಗಳು ಭಾನುವಾರ ಕುಸಿದು ಬಿದ್ದಿದ್ದವು. ರಾತ್ರಿ ಮಳೆಯಾಗಿದ್ದರಿಂದ ಮತ್ತಷ್ಟು ಪ್ಯಾನಲ್ ನೆಲಕಚ್ಚಿವೆ. ಜೊತೆಗೆ ಮೇಲ್ಸೇತುವೆಗೆ ಹಾಕಲಾಗಿದ್ದ ಮಣ್ಣು ಸಹ ಉದುರಿ ಬೀಳುತ್ತಿದೆ.

ರೈಲ್ವೆ ಹಳಿಗೆ ಹೊಂದಿಕೊಂಡು ರಸ್ತೆ ಇದ್ದು, ತಡಸಿನಕೊಪ್ಪ, ಜೋಗೆಲ್ಲಾಪುರ, ಇಟಿಗಟ್ಟಿಯನ್ನು ಸಂರ್ಪಸುತ್ತದೆ. ಅಲ್ಲದೆ ಈ ಮಾರ್ಗದುದ್ದಕ್ಕೂ ರೈತರ ಜಮೀನುಗಳಿದ್ದು, ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ಮೇಲ್ಸೇತುವೆ ಬಳಿ ಮಣ್ಣು ಕುಸಿದ ಪರಿಣಾಮ, ಅದರ ಸುತ್ತ ಬಿಆರ್​ಟಿಎಸ್​ನಿಂದ ಪ್ಲಾಸ್ಟಿಕ್ ಟೇಪ್ ಕಟ್ಟಿ ರಸ್ತೆ ತಡೆ ಮಾಡಲಾಗಿದೆ. ಇದರಿಂದ ಈ ಮಾರ್ಗದಲ್ಲಿ ದ್ವಿಚಕ್ರ ವಾಹನ ಹೊರತುಪಡಿಸಿ ಸಂಪರ್ಕ ಕಡಿತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net