ಮತಾಂತರಕ್ಕೆ ಯತ್ನಿಸಿದ, ಆರೋಪಿಗಳಿಗೆ ಜಾಮೀನು

Published on

ಬಳ್ಳಾರಿ : ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ‌ ಪಟ್ಟಣದ ‌ಮೂಲಕ ಮಂತ್ರಾಲಯಕ್ಕೆ ಪಾದಯಾತ್ರೆ ಕೈಗೊಂಡಿದ್ದ ಇಬ್ಬರು ಪಾದಯಾತ್ರಿಗಳನ್ನು ತಡೆದು ಮತಾಂತರಕ್ಕೆ ಯತ್ನಿಸಿದ ಘಟನೆ ಇತ್ತೀಚೆಗೆ ನಡೆದಿದೆ.
ತೆಕ್ಕಲಕೋಟೆ ಪಟ್ಟಣ ನಿವಾಸಿಗಳಾದ ಹುಸೇನ್ ಭಾಷಾ, ಸಾಯಿ ಬಾಬಾ ಮತಾಂತರಕ್ಕೆ ಯತ್ನಿಸಿದ ಆರೋಪಿಗಳು. ಕೇಸರಿ ಧ್ವಜ ಹಿಡಿದುಕೊಂಡು ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುತ್ತಿದ್ದ ಭಕ್ತರನ್ನ ನಿಲ್ಲಿಸಿ ಮತಾಂತರಕ್ಕೆ ಯತ್ನಿಸಿದ್ದರು. ಈ ವೇಳೆ ಕುರಾನ್ ಹಾಗೂ ಮುಸ್ಲಿಂ ಧರ್ಮ ಶ್ರೇಷ್ಠ ಎನ್ನುವಂತೆ ಹೇಳಿ ಮತಾಂತರಕ್ಕೆ ಯತ್ನಿಸಿದ್ದಾರೆ. ಮತಾಂತರಕ್ಕೆ ಯತ್ನಿಸಿದ ವಿಡಿಯೋ ಮಾಡಿ ಸಾಮಾಜಿಕ‌ ಜಾಲತಾಣದಲ್ಲಿ ಬಿಟ್ಟಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿ ಹುಸೇನ್ ಭಾಷ , ಸಾಯಿಬಾಬಾ ಎಂಬವರರನ್ನು‌ ಶನಿವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ‌ಒಪ್ಪಿಸಲಾಗಿತ್ತು. ಸೋಮವಾರ ಇಬ್ಬರ ಆರೋಪಿಗಳಿಗೂ ಜಾಮೀನು ದೊರೆತಿದೆ. ಆದರೆ, ಇಲ್ಲಿಯವರೆಗೆ ಪಾದಯಾತ್ರಿಗಳ ವಿಳಾಸ ಪೊಲೀಸರಿಗೆ ತಿಳಿದಿಲ್ಲ. ಈ ಕುರಿತು ಸ್ಥಳೀಯ ‌ನಿವಾಸಿ ಗಾದಿಲಿಂಗಪ್ಪ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net