ಮತಾಂತರ ತಡೆಯಬೇಕಿದೆ

Banjar
Published on

ಚಿತ್ರದುರ್ಗ: ಲಂಬಾಣಿ ಸಮುದಾಯದವರು ಮತಾಂತರ ಆಗುತ್ತಿದ್ದು, ಅದನ್ನು ತಡೆಯಬೇಕಿದೆ ಎಂದು ಸಮಾಜದ ಅಧ್ಯಕ್ಷ ಎಂ.ಸತೀಶ್‌ಕುಮಾರ್ ಹೇಳಿದರು.

ರಾಷ್ಟ್ರೀಯ ಗೋರ್ (ಬಂಜಾರ) ಮಳಾವ್‌ನಿಂದ ನಗರದ ಬಂಜಾರ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮತಾಂತರ ತಡೆಗಟ್ಟುವ ಕುರಿತು ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಅಲ್ಲದೆ, ಅಂತವರ ಮೀಸಲಾತಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಮಾ.1ರಂದು ಸೇವಾಲಾಲ್ ಜಯಂತಿ ಆಚರಿಸಲಾಗುವುದು ಎಂದರು.

ರಾಜ್ಯ ತಾಂಡ ಅಭಿವೃದ್ಧಿ ನಿಗಮದ ನಿರ್ದೇಶಕ ಗಿರೀಶ್, ರಾಷ್ಟ್ರೀಯ ಗೋರ್ ಮಳಾವ್ ಅಧ್ಯಕ್ಷ ಬಸವರಾಜ್ ಚೌವ್ಹಾಣ್, ಲಿಂಗ್ಯಾನಾಯ್ಕಾ, ಚಂದ್ರನಾಯ್ಕ, ಜಯಸಿಂಹ ಕಾಟ್ರೋಚ್, ರವಿಕುಮಾರ್, ಉಮಾಪತಿ, ವೀರಭದ್ರ, ಜಯಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net