ಮತಪೆಟ್ಟಿಗೆ ಸೇರಿದ ಅಭ್ಯರ್ಥಿಗಳ ಭವಿಷ್ಯ

CTD 3 MATGATTE (5)---0003
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.47880936, 0.5856787);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 48;
Published on

ಚಿತ್ರದುರ್ಗ: ವಿಧಾನಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ಮತದಾನ ನಡೆಯಿತು. ಚಿತ್ರದುರ್ಗದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿದ್ದ 2 ಮತಗಟ್ಟೆಗಳು ಹಾಗೂ ಉಳಿದ ತಾಲೂಕು ಕೇಂದ್ರಗಳಲ್ಲಿ ತಲಾ ಒಂದರಂತೆ, 7 ಮತಗಟ್ಟೆಗಳಲ್ಲಿ ಮತದಾನ ನಡೆಯಿತು.
ಜಿಲ್ಲೆಯಲ್ಲಿ 3442 ಪುರುಷರು ಮತ್ತು 1471 ಮಹಿಳೆಯರು ಸೇರಿ 4913 ಮತದಾರರಿದ್ದು, ಜಿಲ್ಲಾದ್ಯಂತ ಶೇ.95.83 ಮತದಾನವಾಯಿತು. ಬೆಳಗ್ಗೆಯಿಂದ ಮಂದಗತಿಯಲ್ಲಿದ್ದ ಮತದಾನ ಮಧ್ಯಾಹ್ನ ನಂತರದಲ್ಲಿ ಬಿರುಸುಗೊಂಡಿತು. ಸಂಜೆ 4 ಗಂಟೆಯೊಳಗೆ ಮತಗಟ್ಟೆ ಆವರಣದಲ್ಲಿದ್ದವರಿಗೆ ಟೋಕನ್ ಕೊಟ್ಟು ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.
ಅಂತಿಮವಾಗಿ ಈ ಎರಡು ಮತಗಟ್ಟೆಗಳಲ್ಲಿ 1604 ಪೈಕಿ 1530 ಶಿಕ್ಷಕರು ಹಕ್ಕು ಚಲಾಯಿಸಿದರು. ಆಯೋಗ ಕೊಟ್ಟಂಥ ಪೆನ್‌ನ್ನೇ ಬಳಸಿ ಪ್ರಾಶಸ್ತ್ಯದ ಮತದಾನ ಮಾಡಿದರು. ಜಿಲ್ಲಾದ್ಯಂತ 4913 ಮತದಾರರಲ್ಲಿ 3303 ಪುರುಷರು ಹಾಗೂ 1405 ಮಹಿಳೆಯರು ಸಹಿತ 4708 ಮತದಾರರು ಮತಚಲಾಯಿಸಿದರು.
ಮತದಾನ ಪೂರ್ಣ ಬಳಿಕ ಜಿಲ್ಲಾ ಕೇಂದ್ರದಲ್ಲಿ ಡಿಮಸ್ಟರಿಂಗ್ ನಡೆಯಿತು. ನಂತರದಲ್ಲಿ ಮತಪೆಟ್ಟಿಗೆಗಳನ್ನು ಭದ್ರತಾ ಕೊಠಡಿ ಇರುವ ಬೆಂಗಳೂರಿನ ಸರ್ಕಾರಿ ಆರ್ಟ್ಸ್ ಕಾಲೇಜಿಗೆ ರವಾನಿಸಲಾಯಿತು. ಜೂ.6ರಂದು ಅಲ್ಲಿ ಮತ ಎಣಿಕೆ ನಡೆಯಲಿದೆ.
ವೈ.ಎ.ನಾರಾಯಣಸ್ವಾಮಿ 4ನೇ ಬಾರಿಗೆ ಆಯ್ಕೆ ಬಯಸಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಗೂ ಕಾಂಗ್ರೆಸ್ಸಿನಿಂದ ಡಿ.ಟಿ.ಶ್ರೀನಿವಾಸ್ ಸ್ಪರ್ಧಿಸಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಎಂ.ಜಿ.ಕಿಶನ್, ಪಕ್ಷೇತರರಾಗಿ ಡಾ.ಜಿ.ಎಚ್.ಇಮ್ರಾಪುರ, ಕಪನಿಗೌಡ, ಎನ್.ಇ.ನಟರಾಜ್, ವೈ.ಆರ್.ನಾರಾಯಣಸ್ವಾಮಿ, ವೈ.ಎಂ.ನಾರಾಯಣಸ್ವಾಮಿ, ವೈ.ಸಿ.ನಾರಾಯಣಸ್ವಾಮಿ, ಆರ್.ಬಾಬುಯೋಗೀಶ್, ಲೋಕೇಶ್ ತಾಳಿಕಟ್ಟೆ, ಎಸ್.ವನಿತಾ, ವಿನೋದ್ ಶಿವರಾಜ್, ಬಿ.ಶ್ರೀನಿವಾಸ್, ಸೈಯದ್ ಅಫಾಖ್ ಅಹಮದ್ ಸೇರಿ 15 ಮಂದಿ ಸ್ಪರ್ಧಿಸಿದ್ದರು.
ಬಿಜೆಪಿ ಮಾಜಿ ಡಿಸಿಎಂ ಗೋವಿಂದ ಎಂ.ಕಾರಜೋಳ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಎಂಎಲ್‌ಸಿ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮತ್ತಿತರರು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಸೇರಿ ಕಾಂಗ್ರೆಸ್ ಪ್ರಮುಖರು ಹಾಗೂ ವೈ.ಎನ್.ನಾರಾಯಣಸ್ವಾಮಿ ಮತ್ತಿತರ ಅಭ್ಯರ್ಥಿಗಳು ಚಿತ್ರದುರ್ಗ ಸೇರಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ್ದರು.
ಈ ವೇಳೆ ಕಾಂಗ್ರೆಸ್ ಹಾಗೂ ಮೈತ್ರಿಪಕ್ಷಗಳ ಕಾರ‌್ಯಕರ್ತರು ತಮ್ಮ, ತಮ್ಮ ಪಕ್ಷಗಳ ನಾಯಕರ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದರು. ಮತದಾರರ ಮನವೊಲಿಕೆಗೆ ಕೊನೇ ಕ್ಷಣದ ಕಸರತ್ತನ್ನು ನಡೆಸಿದ್ದರು. ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ ಮತಗಟ್ಟೆಗಳಿಗೆ ಭೇಟಿ ನೀಡಿದ್ದರು.
ಮತದಾರರು ಹಾಗೂ ಅಭ್ಯರ್ಥಿಗಳು, ಏಜೆಂಟರನ್ನು ಹೊರತುಪಡಿಸಿ ಉಳಿದವರಿಗೆ ಮತಗಟ್ಟೆ ಆವರಣಕ್ಕೆ ಪ್ರವೇಶ ನಿರ್ಬಂಧಿಸಲಾತ್ತು. ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಹಾಗೂ ಗುರುಭವನದ ಸಮೀಪದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಮತ ಕೊಠಡಿಗಳಲ್ಲಿ ವೆಬ್‌ಕಾಸ್ಟಿಂಗ್ ಇತ್ತು.
*ಮತಗಟ್ಟೆಗಳು: ಮೊಳಕಾಲ್ಮೂರು-ತಾಲೂಕು ಆಡಳಿತ ಸೌಧ, ಚಳ್ಳಕೆರೆ-ಬಿಎಂಜಿ ಎಚ್‌ಎಸ್ ಶಾಲೆ, ಚಿತ್ರದುರ್ಗ-ಬಾಲಕಿಯರ ಸರ್ಕಾರಿ ಪಪೂ ಕಾಲೇಜು ಕೊಠಡಿ ಸಂಖ್ಯೆ 1 ಮತ್ತು 2. ಹಿರಿಯೂರು-ತಾಲೂಕು ಆಡಳಿತ ಸೌಧ, ಹೊಸದುರ್ಗ-ತಾಲೂಕು ಕಚೇರಿ ಸಭಾಂಗಣ ಹಾಗೂ ಹೊಳಲ್ಕೆರೆ-ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಮತಗಟ್ಟೆ, ಮತದಾರರು, ಮತದಾನ, ಶೇ.
ಮೊಳಕಾಲ್ಮೂರು, 268, 258, 96.27
ಚಳ್ಳಕೆರೆ, 1019, 963, 94.50
ಚಿತ್ರದುರ್ಗ-1, 781, 750, 96.03
ಚಿತ್ರದುರ್ಗ-2, 823, 780, 94.78
ಹಿರಿಯೂರು, 865, 847, 97.92
ಹೊಸದುರ್ಗ, 680, 654, 96.18
ಹೊಳಲ್ಕೆರೆ, 477, 456, 95.60

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net