

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಕೇಂದ್ರದ ವಿರುದ್ಧ ಹೊರಿಸಿರುವ ಮತಗಳವು ಆರೋಪದ ಬೆನ್ನಲ್ಲೇ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಎಲೆಕ್ಟ್ರಾನಿಕ್‌ವೋಟಿಂಗ್ ಯಂತ್ರದ(ಇವಿಎಂ)ಬದಲು ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸುವುದಾಗಿ ಹೇಳಿದೆ.
2020ರಲ್ಲಿ ಬ್ಯಾಲೆಟ್ ಪೇಪರ್ ಬಳಸಿಯೇ ಜಿಲ್ಲೆಯ 189 ಗ್ರಾಪಂಗಳಿಗೆ 2 ಹಂತಗಳಲ್ಲಿ ಚುನಾವಣೆ ನಡೆಸಲಾಗಿತ್ತು. ಮೊದಲ ಹಂತದಲ್ಲಿ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ತಾಲೂಕುಗಳ 100 ಗ್ರಾಪಂಗಳ 1753 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಎರಡನೇ ಹಂತದಲ್ಲಿ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕುಗಳ 89 ಗ್ರಾಪಂಗಳ 1668 ಸದಸ್ಯ ಸ್ಥಾನಗಳಿಗೆ ಚುನಾವಣೆ ಜರುಗಿತ್ತು. 2026ಕ್ಕೆ ಈ ಎಲ್ಲ ಗ್ರಾಪಂಗಳಿಗೆ ಮತ್ತೆ ಚುನಾವಣೆ ನಡೆಯಬೇಕಿದೆ.
189 ಗ್ರಾಪಂಗಳಿಂದ 1294 ಮೂಲ ಮತಗಟ್ಟೆಗಳು ಮತ್ತು 276 ಮತಗಟ್ಟೆಗಳ ಸಹಿತ 1570 ಮತಗಟ್ಟೆಗಳಿವೆ. ಮತ್ತೆ ನಡೆಯಲಿರುವ ಚುನಾವಣೆಯಲ್ಲಿ ಮತಗಟ್ಟೆಗಳ ಸಂಖ್ಯೆಅಧಿಕವಾಗಲಿದೆ.
ಸದ್ಯದಲ್ಲೇ ಅವಧಿ ಪೂರ್ಣವಾಗುಲಿರುವ ನಗರ ಸ್ಥಳೀಯ ಸಂಸ್ಥೆಗಳ ಈ ಹಿಂದಿನ ಚುನಾವಣೆಯಲ್ಲಿ ಇವಿಎಂ ಬಳಸಲಾಗಿತ್ತು. ಮೊಳಕಾಲ್ಮೂರು 16, ನಾಯಕನಹಟ್ಟಿ 16, ಚಳ್ಳಕೆರೆ 31, ಚಿತ್ರದುರ್ಗ 35, ಹಿರಿಯೂರು 31, ಹೊಸದುರ್ಗ 23 ಹಾಗೂ ಹೊಳಲ್ಕೆರೆ ಹೊಸ ಸಂಖ್ಯೆ 23 ವಾರ್ಡ್‌ಗಳಿಗೆ (ಹಿಂದಿನ ಸಂಖ್ಯೆ 16) ಮತ್ತೆ ಚುನಾವಣೆ ನಡೆಯಬೇಕಿದೆ.
ಇವಿಎಂ ಬದಲಿಗೆ ಮತಪತ್ರ ಬಳಕೆ ವಿಚಾರ ಮುನ್ನೆಲೆಗೆ ಬರುವ ಪೂರ್ವ, ಕಳೆದ ಮಾರ್ಚ್‌ನಲ್ಲೇ ರಾಜ್ಯ ಚುನಾವಣಾ ಆಯೋಗ ಜಿಲ್ಲೆಗಳಲ್ಲಿರುವ ಬ್ಯಾಲೆಟ್ ಬಾಕ್ಸ್‌ಗಳ ಮಾಹಿತಿ ಕೇಳಿತ್ತಂತೆ. ಬಹುಶಃ ಗ್ರಾಪಂಗಳಿಗೆ ಹಿಂದಿನಂತೆಯೇ ಮತಪತ್ರ ಆಧರಿಸಿ ಚುನಾವಣೆ ನಡೆ ಸುವ ಉದ್ದೇಶ ಆಯೋಗದ್ದಾಗಿರಬಹುದು.
ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಲ್ಲಿ ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ಬ್ಯಾಲೆಟ್ ಬಾಕ್ಸ್‌ಗಳಿವೆ. ಅಭ್ಯರ್ಥಿಗಳ ಸಂಖ್ಯೆ ಅ ಧಿಕವಾಗಿ ಎ3 ಸೈಜ್‌ನ ಮತ ಪತ್ರವಾದರೆ ದೊಡ್ಡ ಬ್ಯಾಲೆಟ್‌ಬಾಕ್ಸ್‌ನಲ್ಲಿ 600-700 ಮತಪತ್ರಗಳು, ಎ4 ಸೈಜ್-ಅಂದಾಜು 1500 ಮತ ಪತ್ರಗಳು ಹಿಡಿಯುತ್ತವೆ. ಮೀಡಿಯಂ ಬಾಕ್ಸ್‌ನಲ್ಲಿ 200-300, ಸಣ್ಣಬಾಕ್ಸ್‌ನಲ್ಲಿ 150-200 ಮತಪತ್ರಗಳಿಡಿಯುತ್ತವೆ. ಆದರೆ ಸಣ್ಣ ಬ್ಯಾ ಲೆಟ್ ಬಾಕ್ಸ್‌ಗಳು ಸದ್ಯಕ್ಕೆ ಇಲ್ಲವೆನ್ನಲಾಗಿದೆ.
2800 ದೊಡ್ಡ ಬ್ಯಾಲೆಟ್ ಬಾಕ್ಸ್‌ಗಳು
ಚಿತ್ರದುರ್ಗ ಜಿಲ್ಲೆಯಲ್ಲಿ ದೊಡ್ಡ 2800, ಮೀಡಿಯಂ 450 ಹಾಗೂ ಸಣ್ಣ ಗಾತ್ರದ ಬ್ಯಾಲೆಟ್‌ಬಾಕ್ಸ್‌ಗಳು 400 ಇವೆ. ಒಂದು ಮತ ಗಟ್ಟೆಗೆ ಒನ್ ಪ್ಲಸ್ ಒನ್ ಬ್ಯಾಲೆಟ್ ಬಾಕ್ಸ್‌ಗಳು ಕಡ್ಡಾಯ. ಆದ್ದರಿಂದ ಮತಪತ್ರ ಬಳಸಿಯೇ ಚುನಾವಣೆ ನಡೆಸುವುದಾದರೆ ಹೊಸ ಬ್ಯಾಲೆಟ್ ಬಾಕ್ಸ್‌ಗಳ ಅಗತ್ಯತೆ ಬೀಳಲಿದೆ.
14,29,555 ಮತದಾರರು
ಜಿಲ್ಲೆಯಲ್ಲಿ 2020ರಲ್ಲಿದ್ದ 1648 ಮತಗಟ್ಟೆ ಸಂಖ್ಯೆ ಪ್ರಸ್ತುತ 1661ಕ್ಕೆ ಏರಿಕೆ ಆಗಿವೆ. ಕಳೆದ ಜನವರಿಗೆ ಅಂತ್ಯಗೊಂಡಿರುವಂತೆ ಜಿಲ್ಲೆಯಲ್ಲಿ 14,29,555 ಮತದಾರರು ಇದ್ದಾರೆ. ಗ್ರಾಪಂ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ತಾಪಂ ಚುನಾವಣೆಗೆ ಬಿಳಿಬಣ್ಣದ ಮತ ಪತ್ರ, ಜಿಪಂಗೆ ಪಿಂಕ್ ಬಣ್ಣದ ಮತಪತ್ರಗಳನ್ನು ಈ ಹಿಂದಿನ ಚುನಾವಣೆಗಳಲ್ಲಿ(ಇವಿಎಂ ಇಲ್ಲದ ಸಂದರ್ಭ)ಬಳಸಲಾಗುತ್ತಿತ್ತು. ಕೆಲವು ತಿಂಗಳುಗಳ ಹಿಂದೆ ಜಿಪಂ, ತಾಪಂ ಚುನಾವಣೆಗೆಂದು ಜಿಲ್ಲೆಗೆ ತರಿಸಿದ್ದ ಇವಿಎಂ ಯಂತ್ರಗಳ ಪೈಕಿ ಶೇ.70ನ್ನು ಚುನಾವಣೆ ವಿಳಂಬದ ಹಿನ್ನೆಲೆಯಲ್ಲಿ ಹಿಂದಕ್ಕೆ ಕಳಿಸಲಾಗಿದೆ. ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ.
----
...ಕೋಟ್...
ಮತಪತ್ರ ಬಳಸಿ ಚುನಾವಣೆಗಳನ್ನು ನಡೆಸುವುದಾದರೆ ಬ್ಯಾಲೆಟ್ ಬಾಕ್ಸ್‌ಗಳ ಕೊರತೆ ಬೀಳದು. ರಾಜ್ಯಾದ್ಯಂತ ಏಕಕಾಲಕ್ಕೆ ಚುನಾವಣೆ ಆದರೆ ಹೆಚ್ಚುವರಿ ಬಾಕ್ಸ್‌ಗಳಿಗೆ ಕೊರತೆ ಎದುರಾಗಬಹುದು. ಮತಪತ್ರ ಬಳಸಿ ಚುನಾವಣೆ ನಡೆಸುವ ಕುರಿತು ರಾಜ್ಯ ಸರ್ಕಾರ,ಆಯೋಗದ ನಿರ್ದೇಶನ ಬರಬೇಕಿದೆ.
ಟಿ. ವೆಂಕಟೇಶ್, ಡಿಸಿ, ಜಿಲ್ಲಾ ಚುನಾವಣಾಧಿಕಾರಿ, ಚಿತ್ರದುರ್ಗ
---