ಮತದಾರರಿಗೆ ಜ್ಯೂಸ್ ವ್ಯವಸ್ಥೆ

Juice for voters
Published on

ಮೈಸೂರು: ನಾಗಪುರ ಸರ್ಕಾರಿ ವಾಲ್ಮೀಕಿ ಬುಡಕಟ್ಟು ಆಶ್ರಮ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಲು ಆಗಮಿಸಿದ ಪ್ರತಿಯೊಬ್ಬರಿಗೂ ಆಶ್ರಮ ಶಾಲೆ ಹಾಗೂ ಗುರುಪುರ ಗ್ರಾಮ ಪಂಚಾಯಿತಿ ವತಿಯಿಂದ ದಾಹ ತಣಿಸಲು ಜ್ಯೂಸ್ ನೀಡಲಾಯಿತು.

ಸಾಕಷ್ಟು ಆದಿವಾಸಿಗಳು ನಡೆದುಕೊಂಡೇ ಮತಗಟ್ಟೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ದಣಿದಿದ್ದರು. ಇದನ್ನು ಮನಗಂಡು ಜ್ಯೂಸ್‌ನ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net