ಮತದಾರರ ಸೇರ್ಪಡೆಗೆ ಮುಂದಾಗುವoತೆ ಸೂಚನೆ!..

ಮತದಾರರ ಸೇರ್ಪಡೆಗೆ ಮುಂದಾಗುವoತೆ ಸೂಚನೆ!..
Published on

ಹೊಳೆನರಸೀಪುರ: ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದ್ದು ಅವರ ಪ್ರಕಾರ 2004 ರಲ್ಲಿ ಜನಿಸಿದ ಮಾಹಿತಿ ಮೇಲೆ ಯುವ ಮತದಾರರ ಪಟ್ಟಿ ಸಿದ್ದಪಡಿಸುವಂತೆ ಸೂಚನೆ ನೀಡಿದೆ ಎಂದು ತಹಶೀಲ್ದಾರ್ ಹಾಗು ತಾಲೂಕು ಚುನಾವಣಾ ಅಧಿಕಾರಿ ಕೆ.ಕೆ.ಕೃಷ್ಣಮೂರ್ತಿ ತಿಳಿಸಿದ್ದಾರೆ. 

ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿರುವ ಅವರು 2004 ರಲ್ಲಿ ಜನಿಸಿದವರ ವಿವರಣೆ ಮೇಲೆ 2009 ಕ್ಕೆ ಶಾಲೆಗಳಿಗೆ ನೊಂದಣಿ ಆಗಿರುತ್ತಾರೆ. ತಾಲೂಕಿನಲ್ಲಿರುವ ಎಲ್ಲ ಶಾಲೆಗಳಿಂದ ಮಾಹಿತಿ ಪಡೆದು ಮತದಾರರ ಸೇರ್ಪಡೆಗೆ ಮುಂದಾಗುವoತೆ ಸೂಚನೆ ನೀಡಿದ್ದು ಅದರಂತೆ ಇಂದು ತಮ್ಮ ಸಭಾಂಗಣದಲ್ಲಿ ಭೂತ್ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆದು ಪೂರ್ಣ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ಚುನಾವಣಾ ಆಯೋಗದ ನೀಡಿರುವ ಮಾಹಿತಿ ಆಧರಿಸಿ ಒಂದು ಮೂಲದ ಪ್ರಕಾರ ಜಿಲ್ಲೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಯುವ ಮತದಾರರು ಇರಬೇಕಿದೆ. ಆದರೆ ಇಲ್ಲಿಯವರೆಗೆ ಕೇವಲ 15 ಸಾವಿರ ಯುವ ಮತದಾರರು ಮಾತ್ರ ಸೇರ್ಪಡೆ ಆಗಿದ್ದಾರೆ. ಉಳಿದ 35 ಯುವ ಮತದಾರರನ್ನು ಕಂಡು ಹಿಡಿದು ಅವರುಗಳನ್ನು ನೊಂದಣಿ ಮಾಡಿಸಲು ಇದೇ ತಿಂಗಳ 14 ರವರೆಗೆ ಅವಕಾಶ ನೀಡಿದ್ದಾರೆ.

ಈ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಸಭೆ ನಡೆಸಿ ಜಿಲ್ಲೆಯ ಎಲ್ಲ ತಾಲೂಕು ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಿ ಕೈಬಿಟ್ಟು ಹೋಗಿರುವ 35 ಸಾವಿರ ಯುವ ಮತದಾರರನ್ನು ಕಂಡು ಹಿಡಿದು ಅವರುಗಳನ್ನು ಮತದಾರರ ಪಟ್ಟಿಯಲ್ಲಿ ನೊಂದಣಿ ಮಾಡುವಂತೆ ಸೂಚನೆ ನೀಡಿದ್ದಾರೆ, ಅದರ ಪ್ರಕಾರ ತಾವು ಸಹ ನಮ್ಮ ತಾಲೂಕಿನ ಬೂತ್ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿ ಪುನಃ ಮನೆ ಮನೆಗೆ ಬೇಟಿ ನೀಡಿ ಕೈಬಿಟ್ಟಿರುವ ಯುವ ಮತದಾರರ ಸೇರ್ಪಡೆಗೆ ಮುಂದಾಗುವoತೆ ತಿಳಿಸಲಾಗಿದೆ. 

ಬೂತ್ ಮಟ್ಟದ ಅಧಿಕಾರಿಗಳು ತಮ್ಮಲ್ಲಿಗೆ ಬಂದಾಗ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡುವುದರ ಜೊತೆಗೆ ಕೈಬಿಟ್ಟಿರುವ ಯುವ ಮತದಾರರ ಸೇರ್ಪಡೆ ಮಾಡುವಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು.ನೂತನವಾಗಿ ಸೇರ್ಪಡೆ ಆಗುವ ಯುವ ಮತದಾರರ ಪಟ್ಟಿಯನ್ನು ಇದೇ ತಿಂಗಳು 23 ರ ಒಳಗಾಗಿ ನೊಂದಣಿ ಮಾಡಿಕೊಂಡು ಅದನ್ನು ಗರುಡಾ ಆಪ್‌ಗೆ ಸೇರ್ಪಡೆ ಮಾಡಲಾಗುವುದೆಂದು ಮಾಹಿತಿ ನೀಡಿದರು.

 ಪ್ರಸ್ತುತ ಕೇಂದ್ರ ಚುನಾವಣಾ ಆಯೋಗ ನೂತನ ಮತದಾರರ ನೊಂದಣಿಗೆ ವಾರ್ಷಿಕ ನಾಲ್ಕು ಭಾರಿ ಅವಕಾಶ ನೀಡಲಾಗಿದೆ. ಅದರಂತೆ ನಮ್ಮ ಇಲಾಖೆ ಬೂತ್ ಮಟ್ಟದ ಅಧಿಕಾರಿಗಳಿಂದ ಕಳೆದ ವರ್ಷ ನವಂಬರ್ 9 ರಿಂದ ಒಂದು ತಿಂಗಳ ಕಾಲ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಬೇಟಿ ನೀಡಿ ಯುವ ಮತದಾರರ ಸೇರ್ಪಡೆ ಮಾಡಲಾಗಿದೆ. 

ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ನಮ್ಮ ಯುವ ಮತದಾರರ ನೊಂದಣಿಯನ್ನು ಮಾಡಿಸಬೇಕೆಂದು ಹೆಚ್ಚು ಆಸಕ್ತಿಯಿಂದ ನಮಗೆ ಸೂಚನೆ ನೀಡಿದೆ. ಅದರಂತೆ ನಾವುಗಳು ಒಂದು ತಿಂಗಳ ಕಾಲ ನಮ್ಮ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಬೇಟಿ ನೀಡಿ ಮಾಹಿತಿ ಸಂಗ್ರಹಿಸಿ ಯುವ ಮತದಾರರನ್ನು ನೊಂದಣಿ ಮಾಡಿಸಿರುವುದಾಗಿ ಮಾಹಿತಿ ನೀಡಿದರು. ಜಿಲ್ಲೆಯ  ಎಲ್ಲ ತಾಲೂಕುಗಳು ತಾಲೂಕು ಪಂಚಾಯಿತಿ ಅಧಿಕಾರಿಗಳನ್ನು ತಾಲೂಕು ಮಟ್ಟದ ಸಸಹಾಯಕ ಚುನಾವಣಾ ನೊಂದಣಾಧಿಕಾರಿಗಳಾಗಿ ಕೇಂದ್ರ ಚುನಾವಣಾ ಆಯೋಗ ನೇಮಕ ಮಾಡಿದ್ದು ಅವರುಗಳ ಸಹಕಾರದಿಂದ ಯುವ ಮತದಾರರ ಸೇರ್ಪಡೆಗೆ ಹೆಚ್ಚಿನ ಅವಕಾಶ ದೊರೆಯಲೆಂದು ಆಶಿಸಿ ಕೇಂದ್ರ ಚುನಾವಣಾ ಆಯೋಗ ಅವಕಾಶ ನೀಡಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net