ಮತದಾರರ ಪಟ್ಟಿಗೆ ಸೇರ್ಪಡೆ, ಯುವ ಜನರಲ್ಲಿ ಜಾಗೃತಿ ಮೂಡಿಸಿ

CTD 20 VOTE--005
Published on

ಚಿತ್ರದುರ್ಗ: ಜಿಲ್ಲಾಮತದಾರ ಪಟ್ಟಿ ವೀಕ್ಷಕಿ,ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ‌್ಯದರ್ಶಿ ಡಾ.ಶಮ್ಲಾಇಕ್ಬಾಲ್ ಅವರು ನಗರದ ವಿವಿಧ ಮತ ಗಟ್ಟೆಗಳಿಗೆ ಬುಧವಾರ ಭೇಟಿ ನೀಡಿ ಮತಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ಕಾರ‌್ಯ ಪರಿಶೀಲಿಸಿದರು.
ನಗರದ ಸರಸ್ವತಿ ಕಾನೂನು ಕಾಲೇಜು, ಜೆಜೆಹಟ್ಟಿ, ಸದಾನಂದಯ್ಯ ಬಡಾವಣೆ, ನೀಲಕಂಠೇಶ್ವರ ಬಡಾವಣೆ ಹಾಗೂ ಮಲ್ಲಾಪುರ ಸ ರ್ಕಾರಿ ಪ್ರಾಥಮಿಕ ಪಾಠ ಶಾಲೆ ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿದ ಅವರು, ಹೊಸ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಸ್ಥಳಾಂತ ರ ಇತ್ಯಾದಿ ಮತಗಟ್ಟೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮತಗಟ್ಟೆ ಅಧಿಕಾರಿಗಳು ತಪ್ಪದೆ ನೋಂದಣಿ ರಿಜಿಸ್ಟ್ರಾರ್ ನಿರ್ವಹಿಸಬೇಕು. ಪ್ರತಿ ಮನೆಗೂ ತೆರಳಿ 18 ವರ್ಷ ತುಂಬಿದ ಎಲ್ಲರಲ್ಲೂ ಮತದಾರರ ಪಟ್ಟಿಗೆ ಸೇರಿಸಬೇಕು, ಈ ನಿಟ್ಟಿನಲ್ಲಿ ಅರ್ಹ ಯುವಜನರಲ್ಲಿ ಜಾಗೃತಿ ಮೂಡಿಸಬೇಕು. ಮಹಿಳಾ ಮತದಾರರ ನೋಂದಣಿ ಕೈ ತಪ್ಪದಂತೆ ಜಾಗೃತಿ ವಹಿಸಬೇಕೆಂದು ಸೂಚಿಸಿದರು.
ಮತಗಟ್ಟೆ ಭೇಟಿ ಮುನ್ನ ಶಮ್ಲಾಇಕ್ಬಾಲ್ ಅವರು ಡಿಸಿ ಕಚೇರಿಯಲ್ಲಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿಯಲ್ಲಿ ಹೆಸ ರು ಸೇರ್ಪಡೆ ಹಾಗೂ ಬದಲಾವಣೆಗಾಗಿ ಅರ್ಜಿ ಸಲ್ಲಿಸಿದ ಫಾರಂ-6 ಹಾಗೂ 7 ಅರ್ಜಿಗಳ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್, ನಗರಸಭೆ ಆಯುಕ್ತೆ ಬಿ.ರೇಣುಕಾ, ತಹಸೀಲ್ದಾರ್‌ಗಳಾದ ಡಾ.ನಾಗವೇಣಿ, ಬೇಬಿಫಾತೀಮಾ, ರಾಜೇಶ್, ಚುನಾವಣೆ ಶಾಖೆ ತಹಸೀಲ್ದಾರ್ ಸಂತೋಷಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net