ಮತದಾರರ ಪಟ್ಟಿ ಸಂಪೂರ್ಣ ಪರಿಷ್ಕರಣೆ

30 Dwd 5
Published on

ಧಾರವಾಡ: ಸುಪ್ರೀಂ ಕೋರ್ಟ್ ಆದೇಶದಂತೆ ಪದವೀಧರ ಮತಕ್ಷೇತ್ರದ ಮತದಾರ ಯಾದಿಯನ್ನು ಹಲವು ವರ್ಷಗಳ ನಂತರ ಸಂಪೂರ್ಣ ಪರಿಷ್ಕರಿಸಲಾಗಿದೆ. ಡಿ ನೋವೊ ಪ್ರಕ್ರಿಯೆ ಮೂಲಕ ಮತದಾರರ ಹಳೆಯ ಪಟ್ಟಿಯನ್ನು ಸಂಪೂರ್ಣ ಕೈಬಿಟ್ಟು ಹೊಸ ಮತದಾರರ ಪಟ್ಟಿ ರಚಿಸಲಾಗಿದೆ ಎಂದು ಚುನಾವಣಾಕಾರಿ ಹಾಗೂ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದರು. ಕಳೆದ ಸಾಲಿನ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಮತದಾರ ಪಟ್ಟಿಯಲ್ಲಿ 94,300 ಜನ ಮತದಾರರಿದ್ದರು. ಆದರೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚಾಲ್ತಿಯಲ್ಲಿದ್ದ ಮತದಾರ ಪಟ್ಟಿಯನ್ನು ರದ್ದುಗೊಳಿಸಿ ಹೊಸ ಮತದಾರರ ಪಟ್ಟಿ ಸಿದ್ಧಗೊಳಿಸಲಾಗಿದೆ. ಈಗಾಗಲೇ 72,920 ಜನ ಮತದಾರರು ಸೇರ್ಪಡೆಗೊಂಡಿದ್ದಾರೆ. ಅ. 8ರವರೆಗೆ ಪದವೀಧರರು ಮತದಾರ ಪಟ್ಟಿಗೆ ಸೇರ್ಪಡೆಗೆ ಅವಕಾಶವಿದೆ ಎಂದರು.

ಧಾರವಾಡ ಜಿಲ್ಲೆಯ ಮತದಾರ ವಿವರ: ನವಲಗುಂದ 3 ಮತಗಟ್ಟೆ, ಮತದಾರರು 1,173. ಕುಂದಗೋಳ 2 ಮತಗಟ್ಟೆ, ಮತದಾರರು 1,441. ಧಾರವಾಡ 5 ಮತಗಟ್ಟೆ, ಮತದಾರರು 1971. ಹು-ಧಾ ಪೂರ್ವ 3 ಮತಗಟ್ಟೆ, ಮತದಾರರು 1465. ಹು-ಧಾ ಕೇಂದ್ರ 19 ಮತಗಟ್ಟೆ, ಮತದಾರರು 6149. ಹು-ಧಾ ಪಶ್ಚಿಮ 17 ಮತಗಟ್ಟೆ, ಮತದಾರರು 6007. ಕಲಘಟಗಿ 1 ಮತಗಟ್ಟೆ, ಮತದಾರರು 771. ಹುಬ್ಬಳ್ಳಿ 2, ಮತದಾರರು 660. ಅಳ್ನಾವರ 1 ಮತಗಟ್ಟೆ, ಮತದಾರರು 265. ಅಣ್ಣಿಗೇರಿ 1 ಮತಗಟ್ಟೆ, ಮತದಾರರು 944 ಸೇರಿ 54 ಮತಗಟ್ಟೆಗಳಿದ್ದು, 20846 ಮತದಾರರಿದ್ದಾರೆ.

ಚುನಾವಣಾ ಸಹಾಯವಾಣಿ: ಜಿಲ್ಲಾಧಿಕಾರಿ ಕಚೇರಿ ದೂ: 0836-2447544, ಉಪ ವಿಭಾಗಾಧಿಕಾರಿಗಳ ಕಚೇರಿ 0836- 2233860, ನವಲಗುಂದ ತಹಸೀಲ್ದಾರ್ ಕಚೇರಿ 08380- 229240, ಕುಂದಗೋಳ ತಹಸೀಲ್ದಾರ್ ಕಚೇರಿ 08340- 2902391, ಧಾರವಾಡ ತಹಸೀಲ್ದಾರ್ ಕಚೇರಿ 0836- 2233822, ಕಲಘಟಗಿ 08370- 284531, ಹುಧಾ ಪೂರ್ವ 0836- 2213833, ಹುಧಾ ಕೇಂದ್ರ ಕಚೇರಿ 0836-2213860, ಹುಧಾ ಪಶ್ಚಿಮ ಕಚೇರಿ 0836-2446133.

ಸಮಿತಿಗಳ ನೇಮಕ

ಮಾಧ್ಯಮ ಧೃಢೀಕರಣ, ಉಸ್ತುವಾರಿ ಸಮಿತಿ: ಜಿಲ್ಲಾಧಿಕಾರಿ ನಿತೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಅರುಣ ನಾಯಕ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ.

ಜಿಲ್ಲಾ ದೂರು ನಿರ್ವಹಣಾ ಘಟಕ: ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಭೀಮಪ್ಪ ಎಂ., ಜಿಲ್ಲಾ ನಗರಾಭಿವೃದ್ಧಿ ಕೋಶದ ಮುನ್ಸಿಪಲ್ ತಹಸೀಲ್ದಾರ್ ಗೀತಾ ಹೊನಕೇರಿ.

ಜಿಲ್ಲಾ ನಗದು ಹಾಗೂ ಮೌಲ್ಯಯುತ ವಸ್ತುಗಳ ಜಪ್ತಿ ಹಾಗೂ ನಿರ್ವಹಣಾ ಸಮಿತಿ: ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಜಿಲ್ಲಾ ನೋಡಲ್ ಅಧಿಕಾರಿಯಾಗಿ ಸ್ಥಾನಿಕ ಲೆಕ್ಕಪರಿಶೋಧನಾ ವೃತ್ತದ ಜಂಟಿ ನಿರ್ದೇಶಕಿ ಅನಿತಾ ಹಾಗೂ ಜಿಲ್ಲಾ ಖಜಾನೆ ಅಧಿಕಾರಿ ಜಿ.ಎಸ್. ಹೊನ್ನಳ್ಳಿ ಅವರನ್ನು ನೇಮಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net