ಮತದಾನದ ಹಕ್ಕು ಸದ್ಬಳಕೆಯಾಗಲಿ

25BLK1
 ಭಾಲ್ಕಿ ಪುರಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಕಿರಿಯ ಸಿವಿಲ್ ನ್ಯಾಯಾಧೀಶ ಆನಂದ ಕೊನ್ನೂರ ಮಾತನಾಡಿದರು. ಗೋಪಾಲ ಹಿಪ್ಪರಗೆ, ಸಿ.ಜಿ.ಹಳ್ಳದ, ಮಲ್ಲಿಕಾರ್ಜುನ ವಡ್ಡನಕೇರ, ಸೂರ್ಯಕಾಂತ ಬಿರಾದಾರ, ಹೇಮಾವತಿ ಇತರರಿದ್ದರು.
Published on

ಭಾಲ್ಕಿ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಸದ್ಬಳಕೆಯಾಗಬೇಕು ಎಂದು ಕಿರಿಯ ಸಿವಿಲ್ ನ್ಯಾಯಾಧೀಶ ಆನಂದ ಕೊನ್ನೂರು ಹೇಳಿದರು.

ಪಟ್ಟಣದ ಪುರಭವನದಲ್ಲಿ ಶನಿವಾರ ಭಾರತ ಚುನಾವಣಾ ಆಯೋಗ ಮತ್ತು ತಾಲೂಕು ಆಡಳಿತದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಕಡ್ಡಾಯವಾಗಿದೆ. ರಾಜ್ಯ, ರಾಷ್ಟçಗಳ ಅಭಿವೃದ್ದಿಗಾಗಿ ಉತ್ತಮ ನಾಯಕನನ್ನು ಆರಿಸಿಕೊಡಲು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಉತ್ತಮ ನಾಯಕನನ್ನು ಆರಿಸಿ ತರುವ ಕಾರ್ಯವಾಗಬೇಕು. ಈ ಸಂದರ್ಭದಲ್ಲಿ ಮತದಾನದ ಜಾಗೃತಿ ಅತ್ಯವಶ್ಯಕವಾಗಿದೆ ಎಂದರು.

ಚುನಾವಣೆ ಶಾಖೆಯ ಶಿರಸ್ತೇದಾರ್ ಗೋಪಾಲ ಹಿಪ್ಪರಗೆ ಪ್ರಾಸ್ತಾವಿಕ ಮಾತನಾಡಿ, ೧೮ ವರ್ಷ ವಯಸ್ಸು ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಸತತವಾಗಿ ೬ ತಿಂಗಳ ಕಾಲ ಯಾವ ಸ್ಥಾನದಲ್ಲಿ ವಾಸವಿರುತ್ತಾರೋ ಆ ಸ್ಥಳದಲ್ಲಿಯ ಮತದಾರರ ಪಟ್ಟಿಯಲ್ಲಿ ಅವರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಎನ್‌ಸಿಸಿ ಅಧಿಕಾರಿ ಮೇಜರ್ ನೀಲಕಂಠ ಕಾಳೆ, ಸಿಪಿಐ ಅಮರೇಶ.ಬಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಹೇಮಾವತಿ, ಇಸಿಒ ಮಲ್ಲಿಕಾರ್ಜುನ ಕನ್ನಾಳೆ, ಶೂಭೋದ, ಕಲ್ಲಪ್ಪಾ ಜಿರಗಾ, ಜ್ಞಾನೇಶರ ಕಾರಬಾರಿ, ದತ್ತು ದಂಡೆ, ಪರಸಪ್ಪ ತಳವಾರ, ವಿಷ್ಣು ಕೋಟೆ ಇದ್ದರು.

ನ್ಯಾಯಾಧೀಶರು ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಮತದಾರರ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.

ಗೋಪಾಲ ಹಿಪ್ಪರಗಿ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಣೆ ಮಾಡಿದರು. ಚನ್ನಪ್ಪ.ಜಿ.ಹಳ್ಳದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net