ಮತದಾನ ಪ್ರಮಾಣ ಶೇ.75ಕ್ಕೆ ಹೆಚ್ಚಳ ಇರಾದೆ

CTD 10 BIKE RALY--00004
Published on

ಚಿತ್ರದುರ್ಗ: ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಬುಧವಾರ ನಗರದಲ್ಲಿ ಬೈಕ್ ರ‌್ಯಾಲಿ ಏರ್ಪಡಿಸಲಾಗಿತ್ತು. ಜಿಪಂ ಆವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ,ಸಿಇಒ ಎಸ್.ಜೆ.ಸೋಮಶೇಖರ್ ಅವರು ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಏ.26ರಂದು ನಡೆಯಲಿರುವ ಮತದಾನದಲ್ಲಿ ಎಲ್ಲರೂ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.70 ಮತದಾನವಾಗಿದ್ದು,ಈ ಬಾರಿ ಇದರ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಿಸ ಬೇಕೆಂಬ ಉದ್ದೇಶವಿದೆ ಎಂದರು.
ಜಿಪಂದಿಂದ ಆರಂಭವಾದ ರ‌್ಯಾಲಿ ಮದಕರಿ ನಾಯಕರ ವೃತ್ತ, ಪ್ರವಾಸಿ ಮಂದಿರ ಮಾರ್ಗಗಾಂಧಿ ವೃತ್ತ, ಸಂಗೋಳ್ಳಿರಾಯಣ್ಣ ವೃತ್ತ, ಕನಕ ವೃತ್ತದಿಂದ ನೇರ ವೀರವನಿತೆ ಒನಕೆ ಓಬವ್ವ ವೃತ್ತದ ಮೂಲಕ ಜಿಪಂ ಬಳಿ ಕೊನೆಗೊಂಡಿತು. ಜಿಪಂ ಡಿಎಸ್ ಕೆ.ತಿಮ್ಮಪ್ಪ,ಚಿತ್ರದುರ್ಗ ತಾಪಂ ಇಒ ಪಿ.ಎಸ್.ಆನಂತರಾಜು,ಸಹಾಯಕ ನಿರ್ದೇಶಕರಾದ ಎಚ್.ಯರ‌್ರಿಸ್ವಾಮಿ,ರೂಪಾಕುಮಾರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಡಿಡಿ ಪರಮೇಶ್ವರಪ್ಪ, ಜಿಲ್ಲಾ ಸ್ವೀಪ್ ಸಮಿತಿ ಸಂಯೋಜಕಿ ಸುಷ್ಮಾರಾಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net