

ಯಾದಗಿರಿ: ಜಗತ್ತಿನ ಯಶಸ್ವಿ ಹಾಗೂ ಅತಿದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ ನಮ್ಮ ಮತದಾನದ ಹಕ್ಕಿಗೆ ಚ್ಯುತಿ ಬರದಂತೆ ಕಾಪಾಡಿಕೊಳ್ಳುವುದು ನಮ್ಮ ಹೊಣೆಗಾರಿಗಕೆಯಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಜಿ. ನಂಜುಂಡಯ್ಯ ಅಭಿಪ್ರಾಯಪಟ್ಟರು.
ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಬುಧವಾರ ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿ, ನಿಮ್ಮ ಅತ್ಯಮೂಲ್ಯವಾದ ಮತವು ದೇಶದ ಭವಿಷ್ಯವನ್ನು ಬದಲಾಯಿಸುವಲ್ಲಿ ನಿಣರ್ಾಯಕ ಪಾತ್ರ ವಹಿಸುವ ಕಾರಣ ಜನತೆ ಯೋಚಿಸಿ, ಯೋಗ್ಯವಾದ ವ್ಯಕ್ತಿಗೆ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು.
ದೇಶದ ಹಲವು ಪ್ರದೇಶಗಳಲ್ಲಿ ಕೇವಲ ಒಂದೇ ಮತಗಳ ಮೂಲಕ ಸೋತ ಮತ್ತು ಗೆದ್ದ ಉದಾಹರಣೆಗಳು ಪ್ರಸ್ತುತ ನಮ್ಮೆದುರಿಗೆ ಇದೆ. ಆದ್ದರಿಂದ ಪ್ರತಿಯೊಬ್ಬರು ಮತದಾನ ಮಾಡಿ ನಿಮ್ಮ ಹಕ್ಕನ್ನು ಸಾರಿ ಹೇಳಿ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಲು ಮುಂದೆ ಬರುವ ಅವಶ್ಯಕತೆ ಇದೆ ಎಂದರು.
ಜಿಲ್ಲಾ ಸ್ವೀಪ್ ನೋಡೆಲ್ ಅಕಾರಿಯೂ ಆದ ಜಿಪಂ ಸಿಇಒ ಅಮರೇಶ ಆರ್.ನಾಯ್ಕ್ ಮಾತನಾಡಿ, ಮತದಾನಕ್ಕಿಂತ ಶ್ರೇಷ್ಠ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬುದು ಈ ವರ್ಷದ ಚುನಾವಣೆಯ ಧ್ಯೇಯವಾಕ್ಯವಾಗಿದೆ. ಜನತಂತ್ರ ವ್ಯವಸ್ಥೆಯನ್ನು ಬಲಪಡಿಸಲು ಜನರು ಸಕ್ರಿಯವಾಗಿ ತೊಡಗಿಕೊಳ್ಳಬೇಕಿದೆ. ಪ್ರತಿ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇರಬೇಕು ಎಂಬುದು ಚುನಾವಣಾ ಆಯೋಗದ ನಿದರ್ೇಶನ. ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕೆಂಬ ಸದುದ್ದೇಶದಿಂದ ಬೂತ್ ಮಟ್ಟದ ಅಕಾರಿಗಳ ಮೂಲಕ ಅರ್ಹ ಮತದಾರರ ನೇರ ಸಂಪರ್ಕಕ್ಕೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ವಿವರಿಸಿದರು.
ಅಪರ ಜಿಲ್ಲಾಕಾರಿ ಶರಣಪ್ಪ ಕೋಟೆಪ್ಪಗೊಳ ಮಾತನಾಡಿ, ರಾಷ್ಟ್ರೀಯ ಚುನಾವಣೆ ಆಯೋಗವು ಪ್ರಜಾಪ್ರಭುತ್ವದ ತಾಯಿ ಬೇರು ಇದ್ದಹಾಗೆ. ಅದು ಎಷ್ಟು ಅಚ್ಚುಕಟ್ಟಾಗಿ ಚುನಾವಣೆ ನಡೆಸುತ್ತದೆಯೋ ಅಷ್ಟು ಪ್ರಜಾಪ್ರಭುತ್ವದ ಬೇರು ಗಟ್ಟಿಯಾಗುತ್ತದೆ. ಆ ನಿಟ್ಟಿನಲ್ಲಿ ಆಯೋಗವು ವಿಶ್ವದ ಗಮನ ಸೆಳೆದಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಧ ಮತದಾರರು, ತೃತೀಯ ಲಿಂಗ ಮತದಾರರಿಗೆ ಅವರ ಮತದಾನ ಚೀಟಿಗಳನ್ನು ವಿತರಿಸಲಾಯಿತು. ಮತದಾನಕ್ಕೆ ಸಂಬಂಸಿದಂತೆ ಪ್ರಬಂಧ, ರಸಪ್ರಶ್ನೆ ಸ್ಪಧರ್ೆಯಲ್ಲಿ ವಿಜೇತ ವಿಧ್ಯಾಥರ್ಿಗಳಿಗೆ ಬಹುಮಾನ ನೀಡಲಾಯಿತು.