ಮತದಾನ ಪ್ರಮಾಣ ಹೆಚ್ಚಳವಾಗಲಿ

28SAVADATTI1
ಸವದತ್ತಿ ತಾಪಂ ಆವರಣದಲ್ಲಿ ಮತದಾನದ ಜಾಗೃತಿ ಜಾಥಾಕ್ಕೆ ಚುನಾವಣಾಧಿಕಾರಿ ರಾಜೀವ ಕೂಲೇರ ಚಾಲನೆ ನೀಡಿದರು. ಮಧುಸೂದನ ಕುಲಕರ್ಣಿ, ಯಶವಂತಕುಮಾರ, ಸಂಗನಬಸಯ್ಯ ಗದಿಗಿಮಠ, ಮೈತ್ರಾದೇವಿ ವಸದ, ಸುನೀತಾ ಪಾಟೀಲ ಇತರರಿದ್ದರು.
Published on


ಸವದತ್ತಿ: ಲೋಕಸಭಾ ಚುನಾವಣೆಯಲ್ಲಿ ಮತದಾರರು ಮತಗಟ್ಟೆಯ ಮಾಹಿತಿ ಪಡೆಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಿಲ್ಲಾದ್ಯಂತ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಸಹಾಯಕ ಚುನಾವಣಾಧಿಕಾರಿ ರಾಜೀವ ಕೂಲೇರ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕಾಡಳಿತ ಹಾಗೂ ಸ್ವೀಪ್​ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮದ ಅಂಗವಾಗಿ ಮತದಾನ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಳೆದ ಚುನಾವಣೆಗಿಂತ ಮತದಾನ ಹೆಚ್ಚಳವಾಗಬೇಕು. ಶೇ. 100 ಮತದಾನ ನಡೆಯಬೇಕು. ಮತದಾನ ದಿನದಂದು ಜನರ ಮತಗಟ್ಟೆ ಸ್ಥಳದ ಗೊಂದಲ ಉಂಟಾಗದಂತೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಸ್ವೀಪ್​ ಸಮಿತಿಯಿಂದ ಆಯೋಜಿಸಿದ್ದ ಮತದಾನದ ಜಾಗೃತಿ ಜಾಥಾಕ್ಕೆ ಚುನಾವಣಾಧಿಕಾರಿ ರಾಜೀವ ಕೂಲೇರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ತಾಪಂ ಆವರಣದಿಂದ ಪ್ರಾರಂಭವಾದ ಮತದಾನ ಜಾಗೃತಿ ಜಾಥಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮರಳಿ ತಾಪಂಗೆ ತಲುಪಿತು. ತಹಸೀಲ್ದಾರ್​ ಮಧುಸೂದನ ಕುಲಕರ್ಣಿ, ತಾಪಂ ಇಒ ಯಶವಂತಕುಮಾರ, ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಿಗಿಮಠ, ಜಿಪಂ ಎಇಇ ಎಚ್​.ಎ. ಕದರಾಪೂರಕರ, ಅರದಾಸೋಹ ಎಡಿ ಮೈತ್ರಾದೇವಿ ವಸದ, ಸಿಡಿಪಿಒ ಸುನೀತಾ ಪಾಟೀಲ, ಪಶುವೈದ್ಯಾಧಿಕಾರಿ ಅನಿಲ ಮರಲಿಂಗನವರ, ಶಿವಪ್ರಕಾಶ ಪಾಟೀಲ, ಬಸವರಾಜ ಅಯ್ಯನಗೌಡ್ರ, ಬಿ.ಬಿ.ಆಯಟ್ಟಿ, ಸಿ.ಎಸ್​.ಮಲಕಣ್ಣರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net