ಮತಗಳು ಬಂದಿಲ್ಲವೆಂದು ಗ್ಯಾರಂಟಿ ನಿಲ್ಲಿಸಲ್ಲ

RBK 9-1 NANGAYYANAMATH
ತೇರದಾಳ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಆಡಳಿತದ ಪುರಸಭೆ, ಗ್ರಾಪಂಗಳ ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಎಸ್.ಜಿ. ನಂಜಯ್ಯನಮಠ, ಸಿದ್ದು ಕೊಣ್ಣೂರ, ಲಕ್ಷ್ಮಣ ದೇಸಾರಟ್ಟಿ ಇದ್ದರು.
Published on

ರಬಕವಿ/ಬನಹಟ್ಟಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿತ ಮತಗಳು ಬಂದಿಲ್ಲವೆಂಬ ಕಾರಣಕ್ಕೆ ಗ್ಯಾರಂಟಿ ಯೋಜನೆ ನಿಲ್ಲಿಸೋಲ್ಲ. ಅಂತಹ ವ್ಯವಸ್ಥೆಯೂ ಕಾಂಗ್ರೆಸ್ ಪಕ್ಷದಲ್ಲಿಲ್ಲ. ಕನಿಷ್ಠ 4 ಕೋಟಿಯಷ್ಟು ಜನರು ಗ್ಯಾರಂಟಿಗಳ ಲಾಭ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.

ಬನಹಟ್ಟಿ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಸ್ಥಳೀಯ ಸಂಸ್ಥೆಗಳ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಕ್ಷ ನಿಷ್ಠೆಯಿದ್ದರೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಭವಿಷ್ಯವಿದೆ. ಪ್ರಾಮಾಣಿಕ ಸೇವೆಯಿಂದ ಪಕ್ಷ ಬಲವರ್ಧನೆಗೆ ಶ್ರಮಿಸಬೇಕು. ಸ್ವಾತಂತ್ರೃ ನಂತರದ ಕಾಂಗ್ರೆಸ್ ಸರ್ಕಾರದ ಅಧಿಯಲ್ಲಿ ಭೂ ಕಾಯ್ದೆ, ಬ್ಯಾಂಕ್ ರಾಷ್ಟ್ರೀಕರಣ, ಗ್ಯಾರಂಟಿಗಳಂತಹ ಯೋಜನೆಗಳಿಂದ ದೇಶದಲ್ಲಿ ಕ್ರಾಂತಿಯಾಗಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ 20 ಕ್ಷೇತ್ರಗಳಲ್ಲಾದರೂ ಕಾಂಗ್ರೆಸ್ ಗೆಲ್ಲುವ ನಿರೀಕ್ಷೆಯಿತ್ತು. ಜನತೆ ನಮ್ಮ ಬೇಡಿಕೆ ಈಡೇರಿಸದಿದ್ದರೂ ಗ್ಯಾರಂಟಿ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.

ಪ್ರಧಾನಿ ಮೋದಿ ಬಡವರ ಸಾಲ ಮನ್ನಾ ಮಾಡದೆ ಅಂದಾಜು 12 ಲಕ್ಷ ಕೋಟಿ ರೂ. ಶ್ರೀಮಂತರ ಸಾಲ ಮನ್ನಾ ಮಾಡಿ ಬಡ ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರಲ್ಲದೆ, ಪಕ್ಷ ಬಲವರ್ಧನೆಗೆ ಜಿಲ್ಲೆಯಲ್ಲೇ ತೇರದಾಳ ಕ್ಷೇತ್ರ ಮುಂಚೂಣಿಯಲ್ಲಿರುವುದು ವಿಶೇಷ. ಅತಿ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಕ್ಷೇತ್ರದ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಕಾರ್ಯಕರ್ತರ ಹುಮ್ಮಸ್ಸಿನ ಕಾರ್ಯ ಮೆಚ್ಚುವಂಥದ್ದು, ಮುಂಬರುವ ಜಿಪಂ, ತಾಪಂ ಹಾಗೂ ನಗರಸಭೆ ಚುನಾವಣೆಗಳಿಗೆ ಆಕಾಂಕ್ಷಿತರು ಈಗಿನಿಂದಲೇ ತಾಲೀಮು ನಡೆಸಿದರೆ ಮಾತ್ರ ಸುಲಭದ ಗೆಲುವು ನಮ್ಮದಾಗುವುದು ಎಂದರು.

ತೇರದಾಳ, ಮಹಾಲಿಂಗಪುರ ಪುರಸಭೆ ಹಾಗೂ 10 ಗ್ರಾಪಂ ನೂತನ ಕಾಂಗ್ರೆಸ್ ಅಧ್ಯಕ್ಷ- ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.

ಲಕ್ಷ್ಮಣ ದೇಸಾರಟ್ಟಿ, ಮಲ್ಲಪ್ಪ ಸಿಂಗಾಡಿ, ರಾಜು ಭದ್ರನ್ನವರ, ಡಾ. ಎ.ಆರ್. ಬೆಳಗಲಿ, ಬಳವಂತಗೌಡ ಪಾಟೀಲ, ಶಫೀಕ್ ಪೆಂಡಾರಿ, ದೇವಲ ದೇಸಾಯಿ, ಇರ್ಷಾದ್ ಮೋಮಿನ್, ಭೀಮಶಿ ಮಗದುಮ್, ನೀಲಕಂಠ ಮುತ್ತೂರ, ಸಾಗರ ಹೊಸಮನಿ, ಮಹಾಲಿಂಗಪುರ ಪುರಸಭಾಧ್ಯಕ್ಷ ಯಲ್ಲನಗೌಡ ಪಾಟೀಲ, ತೇರದಾಳ ಪುರಸಭಾಧ್ಯಕ್ಷೆ ಶಿಲ್ಪಾ ರೋಡಕರ, ಹಾರೂನ ಸಾಂಗ್ಲಿಕರ, ಅಶೋಕ ಉಳ್ಳಾಗಡ್ಡಿ, ಪರಮಾನಂದ ಗವರೋಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net