

ಚಿತ್ರದುರ್ಗ: ಲೋಕಸಭಾ ಚುನಾವಣೆ ಸಾಮಾನ್ಯ ವೀಕ್ಷಕ ಮನೋಹರ ಮರಂಡಿ ಹಾಗೂ ವೆಚ್ಚ ವೀಕ್ಷಕಿ ಪ್ರಜಕ್ತಾ ಪಿ.ಠಾಕೂರ್ ಅವ ರು ಬುಧವಾರ ನಗರ ಮತ್ತು ಗ್ರಾಮೀಣ ಭಾಗದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು.
ಸೆಂಟ್ ಜೋಸೆಫ್‌ಕಾನ್ವೆಂಟ್‌ಸ್ಕೂಲ್,ಸರಸ್ವತಿ ಕಾನೂನು ಮಹಾವಿದ್ಯಾಲಯ,ಸಿ.ಕೆ.ಪುರದ ಕನ್ನಡ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಸಿದ್ದಾಪುರ, ಮಾನಂಗಿ,ಜಾನಕೊಂಡ ಗ್ರಾಮಗಳ ಮತಗಟ್ಟೆಗಳಿಗೆ ಭೇಟಿ ನೀಡಿ ಅಗತ್ಯ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ದರು. ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ,ಗ್ರೇಡ್-2 ತಹಸೀಲ್ದಾರ್ ನಾಗರಾಜ ಮತ್ತಿತರರು ಇದ್ದರು.
ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಗಳ ಕಚೇರಿಗೆ ಈಚೆಗೆ ವೆಚ್ಚ ವೀಕ್ಷಕಿ ಪ್ರ ಜಕ್ತಾ ಪಿ.ಠಾಕೂರ್ ಅವರು ಭೇಟಿ ನೀಡಿದ್ದರು. ಎಆರ್‌ಒ(ಸಹಾಯಕ ಚುನಾವಣಾಧಿಕಾರಿ)ಹಾಗೂ ಎಇಒ(ಸಹಾಯಕ ಚುನಾವಣಾ ವೆಚ್ಚ ಅಧಿಕಾರಿ)ಗಳಿಂದ ಅಭ್ಯರ್ಥಿಗಳ ಚುನಾವಣೆ ವೆಚ್ಚಕ್ಕೆ ನಮೂನೆಗಳನ್ನು ಪರಿಶೀಲಿಸಿದರು.
ಮೊಳಕಾಲ್ಮೂರು ತಾಲೂಕಿನ ಕಣಕುಪ್ಪೆ,ಎದ್ದಲಬೊಮ್ಮನಹಟ್ಟಿ,ಉಡೇವು ಚೆಕ್‌ಪೊಸ್ಟ್‌ಗಳಿಗೆ ಭೇಟಿ ನೀಡಿದ ಅವರು,ಎಲ್ಲ ಖಾಸಗಿ ಹಾ ಗೂ ಸಮೂಹ ಸಾರಿಗೆ ವಾಹನಗಳನ್ನು ತಪ್ಪದೇ ಪರಿಶೀಲಿಸುವಂತೆ ಚೆಕ್‌ಪೊಸ್ಟ್ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಚೆಕ್‌ಪೊಸ್ಟ್‌ಗಳಿಗೆ ಭೇ ಟಿ ನೀಡಿದ್ದ ಹಿರಿಯ ಅಧಿಕಾರಿಗಳ ಮಾಹಿತಿ ಪಡೆದರು.
ಹೊಳಲ್ಕೆರೆ ವಿಧಾನ ಸಭಾಕ್ಷೇತ್ರ ಸಹಾಯಕ ಚುನಾವಣೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾನ ಪೋಟೋ ಸ್ಟಾಂಡ್‌ನಲ್ಲಿ ಅಧಿಕಾರಿಗಳೊಂದಿಗೆ ಪೋಟೋ ತೆಗೆಸಿಕೊಂಡರು. ದುಮ್ಮಿ ಹಾಗೂ ಸಾಸಲು ಚೆಕ್ ಪೋಸ್ಟ್‌ಗಳಿಗೆ ಭೇಟಿ ನೀಡಿದರು. ಮೊಳ ಕಾಲ್ಮೂರು ತಾಲೂಕು ಭೇಟಿ ವೇಳೆ ಸಹಾಯಕ ಚುನಾವಣಾಧಿಕಾರಿ ಬಸನಗೌಡ ಕೋಟೂರ ಮತ್ತಿತರರು ಹಾಗೂ ಹೊಳಲ್ಕೆರೆ ಭೇಟಿ ಸಂ ದರ್ಭ ಸಹಾಯಕ ಚುನಾವಣಾಧಿಕಾರಿ ವಿವೇಕಾನಂದ,ತಹಸೀಲ್ದಾರ್ ಬೀಬಿಫಾತೀಮಾ ಮತ್ತಿತರ ಅಧಿಕಾರಿಗಳಿದ್ದರು.