ಮತಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನ

13manju9-Web
ಬಡಾಲ ಅಂಕಲಗಿ ಗ್ರಾಮದಲ್ಲಿ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಚಾಲನೆ ನೀಡಿದರು. ಗೀತಾ ಹಿರೇಮಠ, ಬಸವಂತ ನಾಯ್ಕ, ಯಲ್ಲಪ್ಪ, ಸೋಮಪ್ಪ ಇದ್ದರು.
Published on

ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನರು ಸಜ್ಜನರು. ಅವರ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ. ಮತಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಡಾಲ ಅಂಕಲಗಿ ಗ್ರಾಮದಲ್ಲಿ ಶುಕ್ರವಾರ ಗ್ರಾಮದೇವರ ಲಕ್ಷ್ಮೀದೇವಿ ಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಗೀತಾ ಹಿರೇಮಠ, ಉಪಾಧ್ಯಕ್ಷ ಬಸವಂತ ನಾಯ್ಕ, ಸದಸ್ಯರಾದ ಸಿದ್ದಪ್ಪ ಚಾಪಗಾವ, ವಿಠ್ಠಲ ಅರ್ಜುನವಾಡಿ, ಪಿಕೆಪಿಎಸ್ ಅಧ್ಯಕ್ಷ ಮುಶೆಪ್ಪ ಹಟ್ಟಿ, ಪಡೆಪ್ಪ ಅರಳೀಕಟ್ಟಿ, ರಾಮನಗೌಡ ಪಾಟೀಲ, ಯಲಗೌಡ ಪಾಟೀಲ, ಶಂಕರ ಚಾಪಗಾವ, ಮಂಜುನಾಥ, ಅಕ್ಕಣ್ಣವರ, ರಾಮು ಪಾಟೀಲ, ಯಲ್ಲಪ್ಪ ಮರ್ಚಣ್ಣವರ, ಸೋಮಪ್ಪ ತೋಲಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net