ಮತಕ್ಷೇತ್ರಕ್ಕೊಂದು ಪ್ರತ್ಯೇಕ ಪ್ರಣಾಳಿಕೆ

Separate Manifesto, Samyukta Patil, Congress, Workers' Meeting, Chimmada
ಚಿಮ್ಮಡ ಗ್ರಾಮದಲ್ಲಿ ಕಾಂಗ್ರೆಸ್ ಸಭೆಯಲ್ಲಿ ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿದರು. ಸಿದ್ದು ಕೊಣ್ಣೂರ, ಲಕ್ಷಣ ದೇಸಾರಟ್ಟಿ, ಸತ್ಯಜಿತ ಪಾಟೀಲ ಇತರರಿದ್ದರು.
Published on

ಚಿಮ್ಮಡ: ಘೋಷಣೆ ಮಾಡಿದ್ದೆಲ್ಲವನ್ನು ಈಡೇರಿಸುವ ದೇಶದ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ. ಪ್ರಸಕ್ತ ಲೋಕಸಭಾ ಚುನಾವಣೆಗಾಗಿ ಕ್ಷೇತ್ರದ ಎಲ್ಲ ಭಾಗಗಳ ಅವಶ್ಯಕತೆಗನುಸಾರ ಪ್ರೆತ್ಯೇಕ ಪ್ರಣಾಳಿಕೆ ರಚಿಸಲಾಗುವುದು ಎಂದು ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.

ಗ್ರಾಮದ ಉಮೇಶ ಪೂಜಾರಿ ತೋಟದ ಮನೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ನಮ್ಮ ತಂದೆಯವರ ಸರಳತೆಗೆ ವರಿಷ್ಠರು ನನಗೆ ತಮ್ಮ ಸೇವೆ ಮಾಡುವ ಈ ಜವಾಬ್ದಾರಿ ನೀಡಿದ್ದಾರೆ. ರಾಜ್ಯ ಸರ್ಕಾರದ ಜನಪರ ಯೋಜನೆಗಳಿಂದಾಗಿ ರಾಜ್ಯ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರ ವಾತಾವರಣವಿದೆ. ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ಶ್ರಮಿಸಿದರೆ ಈ ಭಾರಿ ಅತೀ ಹೆಚ್ಚು ಮತಗಳ ಅಂತರದ ಗೆಲುವು ನಮ್ಮದಾಗಲಿದೆ ಎಂದರು.

ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಮಾತನಾಡಿ, ಬಿಜೆಪಿ ಅವಧಿಯ ಹತ್ತು ವರ್ಷಗಳಲ್ಲಿ ದೇಶದಲ್ಲಿ ಬಡವರು, ರೈತರು ಕಂಗಾಲಾಗಿದ್ದಾರೆ. ರೈತರ ಸಾಲ ಮನ್ನಾ ಹಾಗೂ ಬಡವರಿಗಾಗಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದ್ದು ಕಾಂಗ್ರೆಸ್ ಪಕ್ಷವಾಗಿದೆ ಎಂದರು.

ಗ್ರಾಮೀಣ ಘಟಕದ ಅಧ್ಯಕ್ಷ ಲಕ್ಷಣ ದೇಸಾರಟ್ಟಿ, ಸತ್ಯಜಿತ ಪಾಟೀಲ, ಸಿದ್ದು ಸಾಗಲಿಕರ, ಅಶೋಕ ಧಡೂತಿ, ವಿಠ್ಠಲ ಹೊಸಮನಿ, ಪ್ರವೀಣ ಪೂಜಾರಿ, ಸಿದ್ದಲಿಂಗ ಹಳಮನಿ, ರವಿ ದೊಡವಾಡ ಇತರರು ಮಾತನಾಡಿದರು. ಅಡಿವೆಪ್ಪ ಪಾಟೀಲ, ಪರಪ್ಪ ಉರಭಿನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net