ಮತಕ್ಕಾಗಿ ಅಧಿಕಾರಿಗಳಿಗೆ ಬೆದರಿಕೆ

CTD 30 BJP (2)---0011
Published on

ಚಿತ್ರದುರ್ಗ: ಮೂರು ಬಾರಿ ವಿಧಾನಪರಿಷತ್ ಸದಸ್ಯನಾಗಿ, ಶಿಕ್ಷಕರು, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮಾಡಿದ ಹೋರಾಟಗಳು ನನಗೆ ಶ್ರೀರಕ್ಷೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವ್ಯೆ.ಎ.ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಮತಯಾಚಿಸಿ ಮಾತನಾಡಿದ ಅವರು,ಕಳೆದ 18 ವರ್ಷ ಗಳಲ್ಲಿ ಶಿಕ್ಷಕರ ಪರವಾಗಿ ಸದನದ ಒಳಗೆ,ಹೊರಗೂ ಹೋರಾಡಿದ್ದೇನೆ, ಈ ಬಾರಿ ಮೈತ್ರಿ ಅಭ್ಯರ್ಥಿಯಾಗಿರುವುದು ನನ್ನ ಗೆಲುವಿಗೆ ಹೆಚ್ಚಿನ ಶಕ್ತಿ ತುಂಬಿದೆ.
ಕಾಂಗ್ರೆಸ್ ಎಷ್ಟೇ ಕುತಂತ್ರಗಳನ್ನು ಮಾಡಿದರು,ಆಸೆ-ಅಮಿಷಗಳನ್ನೊಡ್ಡಿದರೂ ಮತದಾರರು ನನ್ನ ಕೈ ಬಿಡುವುದಿಲ್ಲ. ಕಾಂಗ್ರೆಸ್ ಅಧಿ ಕಾರಕ್ಕೆ ಬಂದು ಒಂದು ವರ್ಷವಾದರೂ ನುಡಿದಂತೆ ಒಪಿಎಸ್ ಹಾಗೂ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿಲ್ಲ.
ಕಾಂಗ್ರೆಸ್ ನಾನು ಏನೂ ಮಾಡಿಲ್ಲವೆಂದು ಆರೋಪಿಸುತ್ತಿದೆ. ನನ್ನ ಸಾಧನೆಗಳ ಕುರಿತಂತೆ ನಾನು ಹೊರ ತಂದಿರುವ ಪತ್ರಿಕೆಯನ್ನು ಪಕ್ಷದ ಮುಖಂಡರು ಓದಲಿ,ಅಧಿಕಾರದಲ್ಲಿದ್ದೇವೆ ಎಂದು ಗಾಳಿಯಲ್ಲಿ ಗುಂಡು ಹಾರಿಸಬಾರದು. ಅಧಿಕಾರಿಗಳನ್ನು ಬೆದರಿಸಿ ಶಿಕ್ಷಕರ ಮೇಲೆ ಒತ್ತಡ ತಂದು ತನ್ನ ಅಭ್ಯರ್ಥಿಗೆ ಮತ ಹಾಕಿಸುವ ಕುತಂತ್ರಕ್ಕೆ ಕಾಂಗ್ರೆಸ್ ಮುಂದಾಗಿರುವುದು ಖಂಡನೀಯವೆಂದರು.
ಎಂಎಲ್‌ಸಿ ಹನುಮಂತ ನಿರಾಣಿ ಮಾತನಾಡಿ,ವೈಎಎನ್ ಸದನದಲ್ಲಿ ಹಿರಿಯ ಸದಸ್ಯರಾಗಿ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಶ್ರಮಿಸು ತ್ತಾರೆಂದು ಭರವಸೆ ವ್ಯಕ್ತಪಡಿಸಿದರು. ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ವಿಧಾನ ಪರಿಷತ್‌ಮಾಜಿ ಸದಸ್ಯ ಅರುಣ್‌ಶಹಾಪುರ,ನಗರಸಭಾ ಸದಸ್ಯರಾದ ಹರೀಶ್,ಕೃಷ್ಣಮೂರ್ತಿ,ಪರಶುರಾಮ್,ಶೀಲಾ ಹಾಗೂ ನಾಗರಾಜ್‌ಬೇದ್ರೆ,ದಗ್ಗೆ ಶಿವಪ್ರಕಾಶ್,ಜಯಣ್ಣ,ನ ವೀನ್‌ಚಾಲುಕ್ಯ,ತಿಪ್ಪೇಸ್ವಾಮಿ,ರಂಗಣ್ಣ,ಬಾಷಾ ಮತ್ತಿತರರು ಇದ್ದರು.

*ಕೋಟ್
ವೈ.ಎನ್.ನಾರಾಯಣಸ್ವಾಮಿ ಅವರು ಸದನದಲ್ಲಿ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಿದ್ದಾರೆ,ಮುಂದೆ ಕೂಡ ಮಾಡುತ್ತಾರೆ. ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಹೋರಾಟ ಮಾಡಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆದು ಕೊಳ್ಳುತ್ತಿರುವುದು ಖಂಡನೀಯ.
ಜಿ.ಎಚ್.ತಿಪ್ಪಾರೆಡ್ಡಿ, ಮಾಜಿ ಶಾಸಕ, ಚಿತ್ರದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net