ಮತ ಹಾಕಲಾಗಲಿಲ್ಲ ಎಂದು ಕಣ್ಣೀರು ಹಾಕಿದ ಅಜ್ಜಿ

10manju-2
Published on

ವಿಧಾನಸಭಾ ಚುನಾವಣೆಗೆ ಮತ ಹಾಕಲು ಸಾಧ್ಯವಾಗದಿದ್ದರಿಂದ ಅಂದಾಜು 90 ವರ್ಷದ ಬೊಕ್ಕಳಮ್ಮ ಕಣ್ಣೀರು ಹಾಕಿದರು

ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಬೊಕ್ಕಳಮ್ಮ ಅವರನ್ನು ಯಾರೋ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದರು. ಜತೆಯಲ್ಲಿ ಯಾರೂ ಇರಲಿಲ್ಲ. ಮತದಾರರಿಗೆ ನೀಡುವ ಸ್ಲಿಪ್ ಸಹ ಕೊಟ್ಟಿರಲಿಲ್ಲ. ಹೀಗಾಗಿ, ಮತದಾರರ ಭಾಗ ಸಂಖ್ಯೆ, ಕ್ರಮ ಸಂಖ್ಯೆ ಗೊತ್ತಾಗಲಿಲ್ಲ.

ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇತ್ತೋ ಇಲ್ಲವೋ ಎಂಬುದೂ ಗೊತ್ತಾಗಲಿಲ್ಲ. ಅಲ್ಲಿನ ಸಿಬ್ಬಂದಿ ಈ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡಲಿಲ್ಲ. ಮತಗಟ್ಟೆ ಒಳಗೆ ಹೋಗಿ ಮತ ಹಾಕದೆ ಹೊರಬಂದ ಅವರು ಶಾಲಾ ಕಟ್ಟೆಯ ಮೇಲೆ ಕಣ್ಣೀರು ಹಾಕುತ್ತಲೇ ಕುಳಿತರು. ಅವರಿಗೆ ಸರಿಯಾಗಿ ಕಣ್ಣು ಸಹ ಕಾಣುತ್ತಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net