ಮಣ್ಣೆತ್ತು ಖರೀದಿಗೆ ಮುಗಿಬಿದ್ದ ಜನ

People rushing to buy soil
ಗೊಳಸಂಗಿಯ ಮಹಾತ್ಮ ಗಾಂಧಿ ವೃತ್ತದಲ್ಲಿ ಮಂಗಳವಾರ ಮಣ್ಣೆತ್ತುಗಳ ಮಾರಾಟ ಭರದಿಂದ ನಡೆಯಿತು.
Published on

ಗೊಳಸಂಗಿ: ಉತ್ತರ ಕರ್ನಾಟಕ ಭಾಗದ ಪ್ರಮುಖ ಹಬ್ಬಗಳಲ್ಲೊಂದಾದ ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ ಮಂಗಳವಾರ ಮಹಾತ್ಮಗಾಂಧಿ ವೃತ್ತದಲ್ಲಿ ಮಣ್ಣೆತ್ತುಗಳ ಮಾರಾಟ ಜೋರಾಗಿ ನಡೆಯಿತು.

ಈ ಹಿಂದೆ ಕೇವಲ 50 ರೂ.ಗಳಿಗೆ ಬಣ್ಣವಿಲ್ಲದ ಜೋಡಿ ಎತ್ತುಗಳು ಗ್ರಾಮಸ್ಥರಿಗೆ ದೊರಕುತ್ತಿದ್ದವು. ಆದರೆ ಇಂದು ಬಣ್ಣದ ಅಲಂಕಾರ ಪಡೆದ ಜೋಡಿ ಮಣ್ಣೆತ್ತುಗಳು 100 ರಿಂದ 600 ರೂ.ವರೆಗೆ ಮಾರಾಟವಾಗುತ್ತಿವೆ. ಸಂಪ್ರದಾಯ ಪಾಲನೆ ಮಾಡಲೇಬೇಕೆನ್ನುವ ಅನಿವಾರ್ಯತೆಯಿಂದ ಗ್ರಾಮಸ್ಥರು ಮಣ್ಣೆತ್ತುಗಳ ಖರೀದಿಗೆ ಮುಂದಾಗಿರುವುದು ಕಂಡು ಬಂದಿತು.

ಬುಧವಾರ ಬೆಳಿಗ್ಗೆ ಗ್ರಾಮಸ್ಥರು ತಂತಮ್ಮ ಮನೆಗಳಲ್ಲಿ ಮಣ್ಣೆತ್ತುಗಳಿಗೆ ಪೂಜೆ ಸಲ್ಲಿಸುತ್ತಾರೆ. ಮಕ್ಕಳು ತದನಂತರ ಮಣ್ಣೆತ್ತುಗಳನ್ನು ಬಗೆಬಗೆಯ ಸಾಮಗ್ರಿಗಳಿಂದ ಅಲಂಕರಿಸಿ ಆಟವಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net