

ಮುರಗೋಡ, ಬೆಳಗಾವಿ: ಕೃಷಿಯಲ್ಲಿ ಮಣ್ಣು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದರೆ ರೈತರು ಉತ್ತಮ ಬೆಳೆ ಪಡೆಯಬಹುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ನೂತನ ಕುಲಪತಿ ಪಿ.ಎಲ್. ಪಾಟೀಲ ಹೇಳಿದರು.
ಸಮೀಪದ ಮರಕುಂಬಿ ಗ್ರಾಮದ ಅಡವಿ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಬೆಳಗಾವಿಯ ಎಸ್‌ಪಿಎನ್ ರೈತ ಅಭಿವೃದ್ದಿ ಸಂಘ ಹಾಗೂ ಸ್ನೇಹ ಪ್ರೀತಿ ನಿಮ್ಮೊಂದಿಗೆ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಕೃಷಿ ವಿಚಾರಗೋಷ್ಠಿ ಹಾಗೂ ಅಭಿನಂದನಾ ಸಮಾರಂಭದ ಉದ್ಘಾಟಸಿ ಅವರು ಮಾತನಾಡಿ, ಸಕಾಲಕ್ಕೆ ರೈತರು ಕೃಷಿ ಮಣ್ಣು ಪರೀಕ್ಷೆ ಮಾಡಿಸುವುದರ ಜತೆಗೆ ನೈಸರ್ಗಿಕ ಕೃಷಿ ವಿಧಾನ ಹಾಗೂ ಕೃಷಿಯಲ್ಲಿ ಮಹಿಳೆಯರ ಪಾಲುದಾರಿಕೆ ಅವಶ್ಯಕ ಎಂದರು.
ಕೃಷಿ ವಿಸ್ತರಣಾ ನಿರ್ದೇಶಕರಾದ ಡಾ. ಎ.ಎಸ್.ವಸ್ತ್ರದ, ಸಂಶೋಧನಾ ನಿರ್ದೇಶಕ ಡಾ. ಬಿ.ಡಿ ಬಿರಾದರ ಮಾತನಾಡಿ, ತಂತ್ರಜ್ಞಾನ ಅಳವಡಿಸಿಕೊಂಡು ರೈತರು ಹೆಚ್ಚಿನ ಆದಾಯ ಪಡೆಯಬೇಕು ಎಂದರು.
ಅಶೋಕ ಪಟ್ಟಣಶೆಟ್ಟಿ, ಪ್ರೇಮಾ ಗಾಣಗೇರ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ನಾಗೇಶ ವಿರಕ್ತಮಠ, ಕಾಂಗ್ರೆಸ್ ಮುಖಂಡ ಕಾರ್ತಿಕ ಪಾಟೀಲ, ನಾಗರಾಜ ದೇಸಾಯಿ, ಆನಂದ್ ವಾಲಿ, ಮಲ್ಲಿಕಾರ್ಜುನ ಗುರಕ್ಕನ್ನವರ, ಸುಭಾಷ ಮಾಟೊಳ್ಳಿ, ಶೇಖಪ್ಪ ಸಂಪಗಾವಿ, ಮಹಾಂತೇಶ ಕೌಜಲಗಿ, ಮಲ್ಲಿಕಾರ್ಜುನ ಕುರಿ, ಮಹಾಂತೇಶ ಮುದಕನಗೌಡರ, ರೂಪೇಶ ಕಾಮತ, ಬಿ.ಎಸ್. ಏಣಗಿ, ಶಂಕರ ನಾಯ್ಕರ ಇದ್ದರು.