ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಾವು

L $ T accident (1)
Published on

ಬೆಳಗಾವಿ: ಬೆಳಗಾವಿಯ ಹೊಸ ಗಾಂಧಿ ನಗರದಲ್ಲಿ ಅಮೃತ ಯೋಜನೆ 2ನೇ ಹಂತದ ಕಾಮಗಾರಿಯ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಮೂಡಲಗಿ ತಾಲೂಕಿನ ಪಟಗುಂಡಿ ಗ್ರಾಮದ ಬಸವರಾಜ ಸರವಿ (38), ಶಿವಲಿಂಗ ಸರವಿ (20) ಮೃತರು. ರಾಜ್ಯ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಹೊಸ ಗಾಂಧಿ ನಗರದ ಪೈ ರೆಸಾರ್ಟ್ ಹಿಂದಿನ ರಸ್ತೆಯ ಬದಿ ಮಣ್ಣು ಅಗೆಯುತ್ತಿದ್ದರು. ಮೊದಲು ಜೆಸಿಬಿಯಿಂದ ಅಗೆಯಲಾಗಿತ್ತು. ಪೈಪ್‌ಲೈನ್ ಅವಡಿಕೆಗೆ ಮತ್ತೆ ಆಳವಾಗಿ ಅಗೆಯಲು ಕಾರ್ಮಿಕರು ಕೆಳಗೆ ಇಳಿದಿದ್ದರು. ಮೇಲಿನಿಂದ ಮಣ್ಣು ಕುಸಿದು ಇಬ್ಬರೂ ಮಣ್ಣಿನಡಿ ಸಿಲುಕಿದರು. ಅಲ್ಲಿದ್ದ ಕಾರ್ಮಿಕರು, ಜನರು ಸಹಾಯಕ್ಕೆ ಧಾವಿಸಲು ಪ್ರಯತ್ನಿಸಿದರಾದರೂ ಯಾರೂ ಕೆಳಗಿಳಿಯಲಿಲ್ಲ.

ಕೆಲ ಹೊತ್ತಿನ ನಂತರ ಜೆಸಿಬಿಯಿಂದ ಮಣ್ಣು ಹೊರ ತೆಗೆಯಲಾಯಿತು. ಕಾರ್ಮಿಕರನ್ನು ಹೊರಕ್ಕೆ ತೆಗೆದು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಅಷ್ಟೊತ್ತಿಗಾಗಲೇ ಇಬ್ಬರೂ ಮೃತಪಟ್ಟಿದ್ದರು. ಮೃತರ ಕುಟುಂಬಸ್ಥರು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಒಳಚರಂಡಿ ಇಲಾಖೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net