

ಮೈಸೂರು: ಮೈಸೂರು ಗಣೇಶ ಉತ್ಸವ ಸಮಿತಿಯಿಂದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ನಗರದ ಮಾಧವ ಕೃಪಾ ಆವರಣದಲ್ಲಿ ಮಣ್ಣಿನ ಬೀಜ ಗಣೇಶ ತಯಾರಿಕೆ ಕಾರ್ಯಾಗಾರ ಭಾನುವಾರ ಯಶಸ್ವಿಯಾಗಿ ನಡೆಸಿತು.
ನಗರ ಪೊಲೀಸ್ ಕಮೀಷನರ್ ಡಾ.ಚಂದ್ರಗುಪ್ತ ಉದ್ಘಾಟಿಸಿದರು, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದರು. ವಿವಿಧ ವಯೋಮಾನದ 700ಕ್ಕೂ ಹೆಚ್ಚು ಜನರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಅಲ್ಲದೇ 500 ಮಣ್ಣಿನ ಬೀಜದ ಗಣೇಶ ಮೂರ್ತಿ ತಯಾರಿಸಲಾಯಿತು.
ಮೂರ್ತಿ ತಯಾರಿಸಲು ಬೇಕಾದ ಅಗತ್ಯ ವಸ್ತುಗಳನ್ನು ಸಂಘಟಕರು ಉಚಿತವಾಗಿ ನೀಡಿದರು. ಪ್ಲಾಸ್ಟರ್ ಆಫ್ ಪ್ಯಾರಿಸ್, ಸಿಂಥೆಟಿಕ್ ಬಣ್ಣದ ಗಣೇಶ ಮೂರ್ತಿಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಇಂದಿನ ಪೀಳಿಗೆಗೆ ಹಸಿರಿನ ಕಲ್ಪನೆ ಹುಟ್ಟುಹಾಕುವುದು ಮತ್ತು ಮನೆಯಲ್ಲಿ ಸಸಿ ನೆಟ್ಟು ಪರಿಸರ ಸ್ನೇಹಿ ವಿಗ್ರಹಗಳನ್ನು ಮಾಡಲು ಉತ್ಸಾಹ ನೀಡಲಾಯಿತು.