

ಯಾದಗಿರಿ : ಮಣಿಪುರ ಹಿಂಸಾಚಾರ ನಿಯಂತ್ರಣಕ್ಕೆ ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಶಹಾಪುರದ ತಹಸಿಲ್ ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕುಕಿ ಸಮಾಜದ ಆ ಹೆಣ್ಣು ಮಕ್ಕಳಿಗೆ ಆಗಿದ್ದ ಹಾಗೂ ಇನ್ನೂ ಆಗುತ್ತ ಇರುವ ಮಾನಸಿಕ ಅಘಾತ ಮನೋಯಾತನೆ ಯೋಚಿಸಿದರೆ ನಾವೆಂಥ ಕ್ರೂರ ಸಮಾಜದಲ್ಲಿ ಇದ್ದೇವೆ ಎನ್ನಿಸುತ್ತಿದೆ. ರಾಕ್ಷಸರ ಗುಂಪು ಶೂದ್ರ ಸಮುದಾಯದ ಹೆಣ್ಣು ಮಕ್ಕಳನ್ನು ಬೆತ್ತಲೆ ಮೆರವಣಿಗೆ ಮಾಡಿ ದಾರಿ ಉದ್ದಕ್ಕೂ ಹಿಂಸೆ ನೀಡಿದ್ದಾರೆ. ಅಲ್ಲದೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಮೇ.3 ರಂದು ಪ್ರಾರಂಭವಾದ ಈ ಗಲಭೆ ಮತ್ತು ಅಹಿತಕರ ಘಟನೆಗಳು ಸುಮಾರು 80 ದಿನಗಳು ನಿರಂತರವಾಗಿ ನಡೆಯುತ್ತಿದ್ದರೂ ಕೇಂದ್ರ ಮೌನಕ್ಕೆ ಶರಣಾಗಿದೆ ಎಂದು ಪದಾಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸತ್ಯವನ್ನು ಸುಳ್ಳಾಗಿ, ಸುಳ್ಳನ್ನು ಸತ್ಯವಾಗಿ ಬಿಂಬಿಸಿರುವರು ಮನುವಾದಿ ಫ್ಯಾಸಿಸ್ಟ್ ಸಿದ್ದಾಂತವಾಗಿರುತ್ತವೆ. ಬಿಜೆಪಿ ಸಕರ್ಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ನಂತರ ದೇಶ ತನ್ನ ನೆಮ್ಮದಿಯನ್ನು ಕಳೆದುಕೊಂಡಿದೆ.ಮಣಿಪುರದ ವಿಷಯದಲ್ಲಿ ರಾಷ್ಟ್ರಪತಿಗಳು ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಶಿವಲಿಂಗ ಹಸನಾಪುರ, ಶಿವು ತಳವಾರ, ಶರಣು ದೊರನಹಳ್ಳಿ, ಮಲ್ಲಿಕಾಜರ್ುನ ಹುರಸಗುಂಡಗಿ, ಮರೆಪ್ಪ ಕ್ರಾಂತಿ, ಎಂ.ಕೆ.ಪಟೇಲ್ ಇದ್ದರು.