ಮಣಿಪುರ ಹಿಂಸಾಚಾರ ಖಂಡಿಸಿ ಬೃಹತ್ ಪ್ರತಿಭಟನೆ

Massive protest against violence in Manipur
ಮಣಿಪುರ, ಹರಿಯಾಣ ಸೇರಿದಂತೆ ವಿವಿಧೆಡೆ ನಡೆದ ಹಿಂಸಾಚಾರ ಖಂಡಿಸಿ ವಿಜಯಪುರ ನಗರದ ಅಂಬೇಡ್ಕರ್ ಸರ್ಕಲ್ ಬಳಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೃಹತ್ ಪ್ರತಿಭಟನೆ ನಡೆಸಿತು. ಈ ವೇಳೆ ಎಸ್‌ಡಿಪಿಐ ಪಕ್ಷ ಜಿಲ್ಲಾಧ್ಯಕ್ಷ ಅತಾವುಲ್ಲಾ ದ್ರಾಕ್ಷಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಸಾರ್ ಅಹ್ಮದ್ ಮನಿಯಾರ, ವಿಜಯಪುರ ನಗರ ಮತಕ್ಷೇತ್ರದ ಅಧ್ಯಕ್ಷ ಉಮರ್ ಪಠಾಣ್ ಇದ್ದರು.
Published on

ವಿಜಯಪುರ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವಿಜಯಪುರ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಅಂಬೇಡ್ಕರ್ ಸರ್ಕಲ್ ಬಳಿ ಜಮಾವಣೆಗೊಂಡ ಎಸ್‌ಡಿಪಿಐ ಮುಖಂಡರು, ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮಣಿಪುರದಲ್ಲಿ ಜನಾಂಗೀಯ ಕಲಹ, ಹರಿಯಾಣದಲ್ಲಿ ಕೋಮುಗಲಭೆ, ಮಹಾರಾಷ್ಟ್ರ ಎಸ್‌ಪಿಡಿ ಯೋಧನ ಕೋಮು ದ್ವೇಷಕ್ಕೆ ರೈಲಿನಲ್ಲಿ ಅಮಾಯಕರ ಬಲಿ ಸೇರಿದಂತೆ ಇಡಿ ದೇಶ ಹೊತ್ತಿ ಉರಿಯುತ್ತಿದೆ. ಇಂಥ ಸನ್ನಿವೇಶಕ್ಕೆ ಕಾರಣವಾದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು.

ಕಳೆದ ಮೂರು ತಿಂಗಳಿಂದ ಮಣಿಪುರದಲ್ಲಿ ಗಲಭೆ ಹೊತ್ತು ಉರಿಯುತ್ತಿದೆ. ಇಲ್ಲಿ ಶಾಂತಿ ನೆಲಸಲು ಪ್ರಧಾನಿ ಮೋದಿ ಯಾವುದೇ ಕ್ರಮಕೈಗೊಂಡಿಲ್ಲ. ಮಣಿಪುರ ಎಂಬ ಪದ ಬಳಸಲು ಹಿಂದೇಟು ಹಾಕಿದರು. ಮಹಿಳೆಯರ ಬೆತ್ತಲೆ ಪ್ರಕರಣ ಹೊರಬಂದಾಗ ಅನಿವಾರ್ಯವಾಗಿ ಮೋದಿ ಮಾತನಾಡಿದರು. ಆದರೆ ಅವರ ಭಾಷಣದಲ್ಲಿ ವಿಷಾದ ಅಥವಾ ನೋವು ಕಾಣಲಿಲ್ಲ. ತಮ್ಮ ಇಮೇಜಿಗೆ ಧಕ್ಕೆಯಾಗಿದೆ ಎನ್ನುವ ಸಿಟ್ಟು ಎದ್ದು ಕಾಣುತ್ತಿತ್ತು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಎಲ್ಲ ಘಟನೆಗಳನ್ನು ಎಸ್‌ಡಿಪಿಐ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಇಂತಹ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ಪಕ್ಷ ಜಿಲ್ಲಾಧ್ಯಕ್ಷ ಅತಾವುಲ್ಲಾ ದ್ರಾಕ್ಷಿ ಆಗ್ರಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಸಾರ್ ಅಹ್ಮದ್ ಮನಿಯಾರ, ವಿಜಯಪುರ ನಗರ ಮತಕ್ಷೇತ್ರದ ಅಧ್ಯಕ್ಷ ಉಮರ್ ಪಠಾಣ್ ಹಾಗೂ ಜಿಲ್ಲಾ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net