ಮಣಿಪುರ ಸರ್ಕಾರ ವಜಾಗೊಳಿಸಿ

2507-Kpl-Ravi-1
Published on

ಕೊಪ್ಪಳ:ಮಣಿಪುರದಲ್ಲಿ ಹಿಂಸಾಚಾರ ಮಿತಿ ಮೀರಿದ್ದು, ಜನರ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಕ್ರಮ ಕೈಗೊಳ್ಳದ ಸರ್ಕಾರ ವಿಸರ್ಜಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ನಗರದ ಜಿಲ್ಲಾಡಳಿತ ಭವನದ ಎದರು ಪ್ರತಿಭಟನೆ ನಡೆಸಿದರು.

ಮುಖಂಡ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಮಣಿಪುರದಲ್ಲಿ ಮೂರು ತಿಂಗಳಿಂದ ಜನಾಂಗೀಯ ಘರ್ಷಣೆ, ಕೊಲೆ, ಸುಲಿಗೆ, ಅತ್ಯಾಚಾರ ನಡೆಯುತ್ತಿದೆ. ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಘರ್ಷಣೆ ನಿಯಂತ್ರಿಸುತ್ತಿಲ್ಲ. ಸ್ವಾತಂತ್ರಾೃನಂತರ ಕುಕಿ ಜನಾಂಗಕ್ಕೆ ಎಸ್ಟಿ ಮೀಸಲಾತಿ ದೊರಕುತ್ತಿದೆ. ಕೋಮುವಾದ ಲಾಭ ಪಡೆವ ಉದ್ದೇಶದಿಂದ ಕೇಂದ್ರ ಮೈತೇಯಿ ಜನಾಂಗವನ್ನು ಎಸ್ಟಿಗೆ ಸೇರಿಸಿದೆ. ಇದರಿಂದ ಜನಾಂಗೀಯ ಘರ್ಷಣೆ ಸಂಭವಿಸಿದೆ. ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ಇತರ ಸಮಸ್ಯೆಗಳಿಂದ ಜನರ ಗಮನ ಬೆರೆಡೆ ಸೆಳೆವ ಉದ್ದೇಶದಿಂದ ಕೃತ್ಯ ತಡೆಯುತ್ತಿಲ್ಲವೆಂದು ಆರೋಪಿಸಿದರು.


ಕೂಡಲೇ ರಾಷ್ಟ್ರಪತಿ ಮಧ್ಯ ಪ್ರವೇಶಿಸಬೇಕು. ಸರ್ಕಾರಕ್ಕೆ ಗಲಭೆ ನಿಯಂತ್ರಣಕ್ಕೆ ಸೂಚಿಸಬೇಕು. ಅಲ್ಲಿನ ಸರ್ಕಾರವನ್ನು ವಿಸರ್ಜಿಸಬೇಕು. ಕೇಂದ್ರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ಬಳಿಕ ಡಿಯುಡಿಸಿ ಪಿಡಿ ಕಾವ್ಯಾರಾಣಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಮಹಾಂತೇಶ ಕೊತಬಾಳ, ಡಿ.ಎಚ್.ಪೂಜಾರ. ಬಸವರಾಜ ಶೀಲವಂತರ, ಸಾವಿತ್ರಿ ಮುಜುಂದಾರ, ವಿದ್ಯಾ ನಾಲವಾಡ, ಮಲ್ಲಿಕಾ ಪೂಜಾರ, ಆನಂದ ಬಂಡಾರಿ, ಕೆ.ಬಿ.ಗೋನಾಳ, ನಿಂಗಜ್ಜ, ಕಾಶಪ್ಪ ಚಲುವಾದಿ, ಸಂಜಯದಾಸ, ಶರಣು ಗಡ್ಡಿ, ಬಸವರಾಜ ನರೆಗಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net