

ಕೊಪ್ಪಳ:ಮಣಿಪುರದಲ್ಲಿ ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯ ಖಂಡಿಸಿ ಪ್ರಗತಿಪರ ಮಹಿಳಾ ಸಂಘಟನೆಗಳ ಜಿಲ್ಲಾ ಸಂಚಾಲಜರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಹಿಳೆಯರ ಬೆತ್ತಲೆ ಮೆರವಣಿಗೆ ಖಂಡನೀಯ. ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ. ಕೃತ್ಯ ಎಸಗಿದ ಪಾಪಿಗಳನ್ನು ಕಠಿಣವಾಗಿ ಶಿಕ್ಷಿಸಬೇಕು. ಕೋಮು ಗಲಭೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ರಾಜ್ಯ, ಕೇಂದ್ರ ಸರ್ಕಾರ ನಿಯಂತ್ರಣ ಕ್ರಮ ಕೈಗೊಳ್ಳುತ್ತಿಲ್ಲ. ಬುಡಕಟ್ಟು ಜನಾಂಗಗಳ ನಡುವೆ ನಡುವಿನ ಸಂಘರ್ಷದಲ್ಲಿ ಒಂದು ಜನಾಂಗದ ಜನ ನರಕ ಯಾತನೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಯಂತ್ರಣ ಕ್ರಮ ಕೈಗೊಳ್ಳಬೇಕು, ರಾಷ್ಟ್ರೊಪತಿ ಒಬ್ಬ ಮಹಿಳೆಯಾಗಿದ್ದು, ಮಣಿಪುರ ಮಹಿಳೆಯರ ನೆರವಿಗೆ ಧಾವಿಸಬೇಕು. ಸರ್ವೋಚ್ಛ ನ್ಯಾಯಾಲಯ ಸೂಚಿಸಿದ ನಂತರವೂ ಗಲಭೆ ತಡೆಯದಿರುದು ಹೇಯ ಕೃತ್ಯ ಎಂದು ಖಂಡಿಸಿದರು. ಪ್ರತಿಭಟನೆ ಬಳಿಕ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಸಂಚಾಲಕರಾದ ಸಾವಿತ್ರಿ ಮುಜುಂದಾರ, ಶೀಲಾ ಹಾಲ್ಕುರ್ಕಿ, ಜ್ಯೋತಿ ಹಿಟ್ನಾಳ್, ಜ್ಯೋತಿ ಗೊಂಡಬಾಳ, ಶಂಕರ್, ವಿಜಯಲಕ್ಷ್ಮೀ ಹಂಚಾಟೆ, ನಿರ್ಮಲಾ ಬಳ್ಳೊಳ್ಳಿ, ಸರೋಜಾ ಬಾಕಳೆ, ಶಿಲ್ಪಾ ಸಸಿಮಠ ಇತರರಿದ್ದರು.