ಮಣಿಪಾಲ್ ಆಸ್ಪತ್ರೆಯಲ್ಲಿ ಅರಿವು ಕಾರ್ಯಕ್ರಮ

25
Published on

ಮೈಸೂರು: ಆರೋಗ್ಯಕರ ಗರ್ಭಧಾರಣೆ ಮತ್ತು ಪ್ರಸವ ಕುರಿತು ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಸೋಮವಾರ ಅರಿವು ಕಾರ್ಯಕ್ರಮ ನಡೆಯಿತು.


ಗರ್ಭಾವಸ್ಥೆಯ ಬಗೆಗಿನ ವಾಸ್ತವಾಂಶ, ತಪ್ಪು ಪರಿಕಲ್ಪನೆ ಕುರಿತು ತಿಳಿವಳಿಕೆ ಮತ್ತು ಉತ್ತಮ ಗರ್ಭಾವಸ್ಥೆ ಹೊಂದುವ ಬಗ್ಗೆ ಮಾಹಿತಿ ನೀಡಲಾಯಿತು.


ಪ್ರಸೂತಿ ಶಾಸ್ತ್ರಜ್ಞೆ ಡಾ.ಕೆ.ಜಿ.ಅಮೂಲ್ಯ, ಶಿಶುತಜ್ಞ ವಿಭಾಗದ ಡಾ.ಭುವನೇಶ್ವರ್ ಮಾತನಾಡಿ, ನವಜಾತ ಶಿಶುವನ್ನು ಪಾಲನೆ ಮಾಡುವ ಮೊದಲು, ತಾಯಿಯು ಸ್ವಯಂ ತಾನು ಮತ್ತು ಜನಿಸಲಿರುವ ಮಗುವಿನ ಕುರಿತು ಕಾಳಜಿ ವಹಿಸುವುದು ಮುಖ್ಯ ಎಂದರು.


ಜನ್ಮ ವಿರೂಪಗಳಿಗೆ ಹಲವಾರು ಕಾರಣಗಳಿರಬಹುದು. ಸುರಕ್ಷಿತ ಗರ್ಭಧಾರಣೆ ಮತ್ತು ಪ್ರಸವಕ್ಕೆ ಮುಂಚಿತವಾಗಿ ಸಂಕೀರ್ಣತೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದಾಗಿದೆ. ಮಹಿಳೆಯರು ಗರ್ಭಿಣಿಯಾಗುವ ಮೊದಲು ಮತ್ತು ಆರೋಗ್ಯಕರವಾದ ಕೆಲವೊಂದು ಅಭ್ಯಾಸ ಅಳವಡಿಸಿಕೊಳ್ಳಬೇಕು. ಈ ಮೂಲಕ ತಮ್ಮ ಆರೋಗ್ಯದ ಬಗ್ಗೆ ಮುಂಚಿತವಾಗಿಯೇ ಕಾಳಜಿ ವಹಿಸುವುದರಿಂದ ಆರೋಗ್ಯಕರ ಮಗುವನ್ನು ಹೊಂದುವ ಅವಕಾಶಗಳು ಹೆಚ್ಚಿರುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net